Home
ಮೊಬೈಲ್

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತ…!

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚಿಂತೆಗೆ ಸಿಲುಕಿರುವ ಸ್ಯಾಮ್ ಸಂಗ್, ಮಾರುಕಟ್ಟೆಯಲ್ಲಿ ಉಳಿವಿಗಾಗಿ ತನ್ನ ಸ್ಮಾರ್ಟ್ ಫೋನ್ ಗಳ ಬೆಲೆಯನ್ನುಇಳಿಕೆಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಅಧಿಕ ಮಾಡಿಕೊಂಡು ಮತ್ತೆ ನಂಬರ್ ಒನ್ ಪಟ್ಟ ಅಲಂಕರಿಸುವ ಯೋಜನೆಯನ್ನು ರೂಪಿಸಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತ…!

ಸದ್ಯ ಆಫ್ ಲೈನ್ ಸ್ಟೋರ್ ಗಳಲ್ಲಿ ಮಾತ್ರವೇ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಬೆಲೆಯೂ ಇಳಿಕೆಯಾಗಿದ್ದು, ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಹಲವು ಸ್ಮಾರ್ಟ್ ಫೋನ್ ಗಳು ದೊರೆಯಲಿದೆ. ಈ ಹೊಸ ಮಾದರಿಯ ಪ್ರೈಸ್ ಕಟ್ ನವೆಂಬರ್ 15ರ ವರಗೆ ದೊರೆಯಲಿದೆ ಎನ್ನಲಾಗಿದೆ. ಇದರ ಒಳಗೆ ಮೊಬೈಲ್ ಖರೀದಿ ಮಾಡಿದರೆ ಉತ್ತಮ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್ ಸಂಗ್ ತನ್ನ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಇಳಿಕೆ ಮಾಡುವ ಬದಲಿಗೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವನ್ನು ಮಾಡಿಕೊಡುವ ಬೆಸಿಕ್ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿಇಳೀಕೆಯನ್ನು ಮಾಡಿದೆ.

ಈಗಾಗಲೇ ಖ್ಯಾತಿಯನ್ನು ಪಡೆದುಕೊಂಡಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7, ಸ್ಯಾಮ್ ಸಂಗ್ ಗ್ಯಾಲೆಕ್ಸಿ J4, ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸದ್ಯ ಮಾರುಕಟ್ಟೆಯಲ್ಲಿ ರೂ.13990ಕ್ಕೆ ದೊರೆಯುತ್ತಿತು, ಆದರೆಬೆಲೆ ಇಳಿಕೆಯ ನಂತರದಲ್ಲಿ ರೂ.11,490ಕ್ಕೆ ಮಾರಾಟವಾಗಲಿದೆ. ಇದೇ 4GB ಆವೃತ್ತಿ ರೂ.12,990ಕ್ಕೆ ದೊರೆಯುತ್ತಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J4 ರೂ. 9990ಕ್ಕೆ ಮಾರಾಟವಾಗುತ್ತಿತು, ಆದರೆ ಈಗ ರೂ.8250ಕ್ಕೆ ಖರೀದಿ ಮಾಡ ಬಹುದಾಗಿದೆ. ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಸ್ಮಾರ್ಟ್ ಫೋನ್ ಬೆಲೆಯಲ್ಲಿಯೂ ಕಡಿತವನ್ನು ಕಾಣಬಹುದಾಗಿದ್ದು, ರೂ.6990ಕ್ಕೆ ಲಭ್ಯವಿದೆ.

ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಆಂಡ್ರಾಯ್ಡ್ ಗೋ ಫೋನ್ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್ ಫೋನ್ ರೂ.5990ಕ್ಕೆ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಬೆಸ್ಟ್ ಎನ್ನಬಹುದಾಗಿದೆ.

Best Mobiles in India

English summary
These Samsung smartphones got a price cut in India. To Know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+