8GB RAM ಹೊಂದಿರುವ ಸ್ಮಾರ್ಟ್‌ಫೋನ್ ಏಕೆ ಖರೀದಿಸಬೇಕು? ಇಲ್ಲಿ ನೋಡಿ!!

Written By:

ಮೊಬೈಲ್ ಮಾರುಕಟ್ಟೆ ಯಾವಾಗಲೂ ಬದಲಾಗುತ್ತಲೇ ಬಂದಿದೆ ಮತ್ತು ಈಗಲೂ ಬದಲಾಗುತ್ತಲೇ ಇದೆ. ಹಾಗಾಗಿಯೇ ಇದು ಇಂದು ಮೊಬೈಲ್ ಮಾರುಕಟ್ಟೆಯಲ್ಲಿ 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳದ್ದೆ ಹವಾ ಜೋರಾಗಿದೆ ಎನ್ನಬಹುದು.! ಹೌದು, ಮೊದಲಿನ ಹಾಗೆ 512MB, 1GB RAM ಎಂದು ಹೇಳುವ ಕಾಲ ಹೋಗಿದೆ.!!

ಬಹುತೇಕ ಎಲ್ಲಾ ಮೊಬೈಲ್‌ ಕಂಪೆನಿಗಳು ಕೂಡ 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು 8GB RAM ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ.! ಹಾಗಾದರೆ, 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರನಿರ್ವಹಣೆ ಮಾಡಬಹುದಾದ ಕಾರ್ಯಗಳಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೇಮಿಂಗ್ ಅನುಭವಕ್ಕೆ ಸಾಟಿಯೇ ಇಲ್ಲ.!!

ಗೇಮಿಂಗ್ ಅನುಭವಕ್ಕೆ ಸಾಟಿಯೇ ಇಲ್ಲ.!!

ಹೈ ಎಂಡ್ ಕಂಪ್ಯೂಟರ್ ಖರೀದಿಸಿ ಗೇಮ್ ಆಡುವ ಮಜಾ ಇಲ್ಲಿಯವರೆಗೂ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರಲಿಲ್ಲ. ಆದರೆ, 8GB RAM ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದ ನಂತರ ಗೇಮಿಂಗ್ ಅನುಭವದ ದಿಕ್ಕೆ ಬದಲಾಗಿದೆ. ಹೆಚ್ಚಿನ ರೆಸಲ್ಯೂಷನ್ ಬಣ್ಣಗಳು, ಅತ್ಯುತ್ತಮ 3D ಹಾಗೂ ಮುಕ್ತ ಗ್ರಾಫಿಕ್ಸ್ ಅನುಭವವನ್ನು 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ ನೀಡುತ್ತವೆ.!!

ಮಲ್ಟಿ-ಟಾಸ್ಕಿಂಗ್!!

ಮಲ್ಟಿ-ಟಾಸ್ಕಿಂಗ್!!

8RAM ಹೊಂದಿರುವ ಸ್ಮಾರ್ಟ್‌ಪೊನ್‌ಗಳು ಹಲವು ಕಾರ್ಯಗಳನ್ನು ಒಮ್ಮೆಲೆ ಸರಾಗವಾಗಿ ಮಾಡಲು ಶಕ್ತವಾಗಿರುತ್ತವೆ. ಹಲವಾರು ಅಪ್ಲಿಕೇಶನ್ಗಳನ್ನು ತೆರೆಯುವಾಗ, ಕಡಿಮೆ RAM ನೊಂದಿಗೆ ಮೊಬೈಲ್‌ಗಳು ವಿಳಂಬವಾಗಬಹುದು, ಆದರೆ 8 ಜಿಬಿ RAM ಹೊಂದಿರುವ ಸ್ಮಾರ್ಟ್‌ಫೋನ್ ಕಾರ್ಯ ನಿಧಾನವಾಗುವುದಿಲ್ಲ.!!

ಅಪ್ಲಿಕೇಶನ್ ಲಭ್ಯತೆ ಕೂಡ ಹೆಚ್ಚು.!!

ಅಪ್ಲಿಕೇಶನ್ ಲಭ್ಯತೆ ಕೂಡ ಹೆಚ್ಚು.!!

ಕೆಲವೊಮ್ಮೆ ಭಾರೀ ಅಪ್ಲಿಕೇಶನ್‌ಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಒಂದು ಸೆಟ್ ಮೆಮೊರಿ ಅಗತ್ಯವಿರುತ್ತದೆ. ಆ ಆಪ್‌ಗಳು ಕಡಿಮೆ RAM ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲು ಅನರ್ಹವಾಗಿರಬಹುದು. ಆದರೆ, 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಸ್ತುತದ ಯಾವುದೇ ಆಪ್ ಸರಾಗವಾಗಿ ರನ್ ಆಗುತ್ತವೆ.!!

ಪ್ರೊಸೆಸರ್ ಶಕ್ತಿಯೂ ಹೆಚ್ಚು.!!

ಪ್ರೊಸೆಸರ್ ಶಕ್ತಿಯೂ ಹೆಚ್ಚು.!!

8GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೊಸೆಸರ್ ಶಕ್ತಿಯಯೂ ಹೆಚ್ಚಿರುತ್ತದೆ. ಹಾಗಾಗಿ, ಒಂದು ಹೈ ಎಂಡ್ ಕಂಪ್ಯೂಟರ್ ನಿರ್ವಹಣೆ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಒಂದು ಚಿಕ್ಕ ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಿಸಬಹುದು ಎಂದರೆ 8GB RAM ಹೊಂದಿರುವ ಸ್ಮಾರ್ಟ್‌ಫೋನ್‌ ಹೇಗಿರುತ್ತದೆ ಎಂದು ಯೋಚಿಸಿ.!!

ಓದಿರಿ:ಗೂಗಲ್ ಮ್ಯಾಪ್‌ ಮುಲಕ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As the mobile market got saturated, the handset makers these days concentrates more on RAM and processor rather than some serious innovations. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot