8GB RAM ಇದ್ದರೇ ಸ್ಮಾರ್ಟ್ ಫೋನಿನಲ್ಲಿ ಏನೆಲ್ಲಾ ಮಾಡಬಹುದು ಗೊತ್ತಾ..?
ಸದ್ಯ 8GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಶುರುವಾಗುತ್ತಿದೆ. ಸ್ಮಾರ್ಟ್ ಫೋನ್ ನಲ್ಲಿ 8GB RAM ಇದ್ದರೇ ನೀವು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.
ದಿನೇ ದಿನೇ ಭಾರತೀಯರ ಕೊಳ್ಳುವ ಸಾಮಾರ್ಥ್ಯ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅತ್ಯವಶ್ಯಕ ವಸ್ತುಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ದಿನ ಕಳೆದಂತೆ ಸ್ಮಾರ್ಟ್ ಫೋನ್ ಮೇಲಿನ ಅವಲಂಬನೆಯು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಗಳ ಟಾಸ್ಕ್ ಸಹ ಹೆಚ್ಚಾಗುತ್ತಿದೆ. ಇದಕ್ಕಾಗಿಯೇ ವೇಗದ ಸ್ಮಾರ್ಟ್ ಫೋನ್ ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಿನಿಂತಿವೆ.
ಸದ್ಯ 8GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಶುರುವಾಗುತ್ತಿದೆ. ಸ್ಮಾರ್ಟ್ ಫೋನ್ ನಲ್ಲಿ 8GB RAM ಇದ್ದರೇ ನೀವು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಅತ್ಯುತ್ತಮ ಗೇಮಿಂಗ್ ಅನುಭವ:
8GB RAM ಇರುವಂತಹ ಸ್ಮಾರ್ಟ್ ಫೋನ್ ಇದ್ದರೇ, ನೀವು ಅದ್ಬುತ ಗೇಮ್ ಗಳನ್ನು ಆಡಬಹುದಾಗಿದೆ. ಹೈ ರೆಸಲ್ಯೂಷನ್ ಗೇಮ್ ಗಳಿಗೆ ಈ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡಲಿವೆ. ಇಲ್ಲದೇ 3D ಗೇಮ್ ಗಳನ್ನು ಇದರಲ್ಲಿ ಆಡಬಹುದಾಗಿದೆ. ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್ ಗಳು, 3D ವಿಡಿಯೋಗಳು ಮತ್ತು ಅನಿಮೇಷನ್ ಚಿತ್ರಗಳನ್ನು ಆರಾಮವಾಗಿ ಯಾವುದೇ ಅಡೆತಡೆ ಇಲ್ಲದೇ ನೋಡಬಹುದಾಗಿದೆ.

ಮಲ್ಟಿ ಟಾಸ್ಕಿಂಗ್ ಮಾಡಬಹುದು:
ಇದಲ್ಲದೇ 8GB RAM ಇರುವ ಸ್ಮಾರ್ಟ್ ಫೋನಿನಲ್ಲಿ ಮಲ್ಟಿ ಟಾಸ್ಕಿಂಗ್ ಗಳನ್ನ ಸುಲಭವಾಗಿ ಮಾಡಬಹುದಾಗಿದೆ. ಒಂದೇ ಸಮಯದಲ್ಲಿ 10ಕ್ಕೂ ಹೆಚ್ಚಿನ ಆಪ್ ಗಳನ್ನು ಓಪನ್ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ವೇಗವಾಗಿ ಕಾರ್ಯನಿರ್ವಹಿಸಲು 8GB RAM ಹೊಂದಿರುವ ಫೋನ್ ಸಮರ್ಥವಾಗಿರುತ್ತದೆ.

ಹೆಚ್ಚಿನ ಆಪ್ ಬಳಕೆ ಮಾಡಿಕೊಳ್ಳಬಹುದು:
ಇದಲ್ಲದೇ 8GB RAM ನಲ್ಲಿ ಹೈವಿ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದು. ಸಾಮಾನ್ಯ ಸ್ಮಾರ್ಟ ಫೋನ್ ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಆಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಂಡು ಬಳಕೆ ಮಾಡಬಹುದು.

ಪ್ರೋಸೆಸಿಂಗ್ ಪವರ್:
8GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ಪ್ರೋಸೆಸಿಂಗ್ ಪವರ್ ಹೆಚ್ಚಾಗಿರಲಿದ್ದು, ವೇಗವಾಗಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಶಕ್ತವಾಗಿರುತ್ತವೆ. ಯಾವುದೇ ಸಂದರ್ಭದಲ್ಲಿಯೂ ಮೊಬೈಲ್ ಹಾಂಗ್ ಆಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಗೇಮ್ ಆಡಲು, ವಿಡಿಯೋ ನೋಡಲು ಹೇಳಿ ಮಾಡಿಸಿದಂತೆ ಇರಲಿದೆ.


Click it and Unblock the Notifications








