Home
ಮೊಬೈಲ್

ಅತಿ ಸ್ಲಿಮ್ ಫ್ಲ್ಯಾಗ್‌ಶಿಪ್ ಫೋನ್ Motorola Edge 70 ರಿಲೀಸ್ ಡೇಟ್ ಫಿಕ್ಸ್!

ಆಧುನಿಕ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಅತ್ಯಂತ ಸ್ಲಿಮ್ ವಿನ್ಯಾಸ ಮತ್ತು ಕಾರ್ಯಕ್ಷಮತೆಗಳ ನಡುವೆ ಸೂಕ್ಷ್ಮ ಸಮತೋಲನ ಕಾಯ್ದುಕೊಳ್ಳುವುದು ಸವಾಲಿನ ವಿಷಯ. ಈ ನಿಟ್ಟಿನಲ್ಲಿ, ಸ್ಯಾಮ್‌ಸಂಗ್ ಮತ್ತು ಆಪಲ್ ಪೈಪೋಟಿಗೆ ಇಳಿದಿದ್ದವು. ಇದೀಗ Motorola ತನ್ನ ಮುಂದಿನ ಪ್ರಮುಖ ಸ್ಮಾರ್ಟ್‌ಫೋನ್ 'Motorola Edge 70' ಮೂಲಕ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಿದ್ಧವಾಗಿದೆ. ಮುಂದಿನ ತಿಂಗಳು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಈ ಹೊಸ ಸ್ಮಾರ್ಟ್‌ಫೋನ್, ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ತೆಳ್ಳಗಿನ ಫೋನ್ ಆಗುವ ನಿರೀಕ್ಷೆಯಿದೆ.!

ಹೌದು, Motorola Edge 70 ಸ್ಮಾರ್ಟ್‌ಫೋನ್ ನವೆಂಬರ್ 5 ರಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಮೊಟೊರೊಲಾ ಪೋಲೆಂಡ್ ಪುಟದಲ್ಲಿನ ಹೊಸ ಟೀಸರ್ ಈ ಮಾಹಿತಿಯನ್ನು ದೃಢಪಡಿಸಿದ್ದು, ಈ ಸ್ಮಾರ್ಟ್‌ಫೋನ್ 68W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,800mAh ಬ್ಯಾಟರಿಯೊಂದಿಗೆ ಸಜ್ಜುಗೊಂಡಿದೆ ಎಂದು ತಿಳಿಸಲಾಗಿದೆ. ಜೊತೆಗೆ ಇದು "ಅಲ್ಟ್ರಾ ಸ್ಲಿಮ್" ಬಿಲ್ಡ್ ನೀಡುತ್ತದೆ ಎಂದು ಟೀಸ್ ಮಾಡಲಾಗಿದೆ. ಹಾಗಾಗಿ, ಬಿಡುಗಡೆಯಾದಾಗ ಇದು ಕಂಪೆನಿಯ ಅತ್ಯಂತ ತೆಳ್ಳಗಿನ ಸ್ಮಾರ್ಟ್‌ಫೋನ್ ಆಗಲಿದ್ದು, ಕೇವಲ 6mm ದಪ್ಪ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಈ Motorola Edge 70 ಸ್ಮಾರ್ಟ್‌ಫೋನ್ ಪ್ಯಾಂಟೋನ್ ಕಂಚಿನ ಹಸಿರು, ಪ್ಯಾಂಟೋನ್ ಗ್ಯಾಜೆಟ್ ಗ್ರೇ ಮತ್ತು ಪ್ಯಾಂಟೋನ್ ಲಿಲಿ ಪ್ಯಾಡ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸೋರಿಕೆಗಳು ಸೂಚಿಸಿವೆ. ಬೆಲೆಯ ವಿಷಯದಲ್ಲಿ, ಸ್ಮಾರ್ಟ್‌ಫೋನಿನ 12GB + 512GB ರೂಪಾಂತರವು EUR 709 (ಸುಮಾರು ರೂ. 73,100) ರಿಂದ EUR 801.91 (ಸುಮಾರು ರೂ. 82,700) ವ್ಯಾಪ್ತಿಯಲ್ಲಿ ಇರಬಹುದು ಎಂದು ಚಿಲ್ಲರೆ ಪಟ್ಟಿಗಳು ಸೂಚಿಸುತ್ತವೆ. ಆರಂಭಿಕ ಸೋರಿಕೆಗಳು ಇದರ ಬೆಲೆ EUR 690 (ಸುಮಾರು ರೂ. 70,000) ಎಂದು ಸೂಚಿಸಿದ್ದವು. ಇದೀಗ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಾಣಿಸಿದೆ.

ಅತಿ ಸ್ಲಿಮ್ ಫ್ಲ್ಯಾಗ್‌ಶಿಪ್ ಫೋನ್ Motorola Edge 70 ರಿಲೀಸ್ ಡೇಟ್ ಫಿಕ್ಸ್!

ಇನ್ನು ವಿನ್ಯಾಸದಲ್ಲಿನ ಸ್ಲಿಮ್ಮಿಂಗ್ ಹೊರತಾಗಿಯೂ, Motorola Edge 70 ಸ್ಮಾರ್ಟ್‌ಫೋನಿನ ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಹಲವಾರು ವರದಿಗಳು ಸೀಚಿಸಿವೆ. ಇದು 4,800mAh ಬ್ಯಾಟರಿಯನ್ನು ಹೊಂದಿದ್ದು, 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತಿರುವುದು ಇದಕ್ಕೆ ಪ್ರಮುಖ ಸಾಕ್ಷಿ ಎನ್ನಬಹುದು. ಕಳೆದ Motorola Edge 60 ಮಾದರಿಯಲ್ಲಿ 5,200mAh ಬ್ಯಾಟರಿ ಇದ್ದರೂ, Edge 70 ಮಾದರಿಯು ಸ್ಲಿಮ್ ವಿನ್ಯಾಸಕ್ಕಾಗಿ ಬ್ಯಾಟರಿ ಸಾಮರ್ಥ್ಯದಲ್ಲಿ ಸ್ವಲ್ಪ ಇಳಿಕೆಗೆ ಸಿದ್ಧವಾಗಿದೆ ಎನ್ನಬಹುದು. ಇನ್ನು ಇದರ ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ ಕ್ಯಾಮೆರಾ ಮತ್ತು ಆಡಿಯೋ ಮಾಹಿತಿ ಇದೆ.

ಕ್ಯಾಮೆರಾ ವಿಭಾಗದಲ್ಲಿ, Motorola Edge 70 ಸ್ಮಾರ್ಟ್‌ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ. ಜೊತೆಗೆ 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ ಅಲ್ಟ್ರಾವೈಡ್ ಕ್ಯಾಮೆರಾ ಹೊಂದಿರಬಹುದು ಜೊತೆಗೆ ಡಾಲ್ಬಿ ಅಟ್ಮಾಸ್-ಬೆಂಬಲಿತ ಸ್ಟೀರಿಯೊ ಸ್ಪೀಕರ್‌ಗಳು ಇರಬಹುದು.

Motorola Edge 70 ನ ತೆಳ್ಳನೆಯ ವಿನ್ಯಾಸವು ಇತ್ತೀಚೆಗೆ ಬಿಡುಗಡೆಯಾಗಿರುವ Galaxy S25 Edge ಮತ್ತು iPhone Air ನಂತಹ ಫೋನ್‌ಗಳಿಗೆ ಸವಾಲು ಹಾಕುತ್ತದೆ. ಉದಾಹರಣೆಗೆ, ಇತ್ತೀಚಿನ Apple iPhone 17 Air ಮಾದರಿಯು ಕಾರ್ಯಕ್ಷಮತೆಯೊಂದಿಗೆ ಸ್ಲಿಮ್ ವಿನ್ಯಾಸವನ್ನು ಒದಗಿಸುವ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಈ ಮೂರು ಪ್ರಮುಖ ಬ್ರ್ಯಾಂಡ್‌ಗಳು (Motorola, Samsung, Apple) 'ಅಲ್ಟ್ರಾ ಸ್ಲಿಮ್' ವಿನ್ಯಾಸದತ್ತ ಸಾಗುತ್ತಿರುವುದು ಭವಿಷ್ಯದ ಸ್ಮಾರ್ಟ್‌ಫೋನ್ ಟ್ರೆಂಡ್ ಅನ್ನು ಸ್ಪಷ್ಟಪಡಿಸುತ್ತದೆ. ಈ ತೀವ್ರ ಪೈಪೋಟಿಯಲ್ಲಿ, Edge 70 ತನ್ನ ಬೆಲೆ ಮತ್ತು ವೈಶಿಷ್ಟ್ಯಗಳ ಸಮತೋಲನದ ಮೂಲಕ ಭಾರತ ಸೇರಿದಂತೆ ಜಾಗತಿಕ ಗ್ರಾಹಕರನ್ನು ಎಷ್ಟು ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ, Motorola Edge 70 ಸ್ಮಾರ್ಟ್‌ಫೋನಿನ ಈ 'ಅಲ್ಟ್ರಾ ಸ್ಲಿಮ್' ವಿನ್ಯಾಸವು ಪ್ರಸ್ತುತ ಮೊಬೈಲ್ ಜಗತ್ತಿನ ಪ್ರವೃತ್ತಿಗೆ ಅನುಗುಣವಾಗಿದೆ. ಏನಂತಿರಾ?

Best Mobiles in India

English summary
Motorola’s upcoming Edge 70 flagship combines ultra-slim design, 68W blazing-fast charging, and 4,800mAh battery performance to rival the Galaxy S25 Edge and iPhone Air.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+