ಆಂಡ್ರಾಯ್ಡ್ ನಲ್ಲಿ ಐಫೋನ್ ಫೀಚರ್ ಬರುವ ನಿರೀಕ್ಷೆ
ಟೆಕ್ ದೈತ್ಯ ಗೂಗಲ್ ಈಗಾಗಲೇ ಆಂಡ್ರಾಯ್ಡ್ ಕ್ಯೂ ನ ಎರಡು ಬೇಟಾ ವರ್ಷನ್ ನ್ನು ಬಿಡುಗಡೆಗೊಳಿಸಿದೆ. ಬೇಟಾ ಕಾರ್ಯಕ್ರಮದ ಭಾಗವಾಗಿರುವ ಕೆಲವೇ ಕೆಲವು ಮಂದಿಗೆ ಬೇಟಾ ವರ್ಷನ್ ಲಭ್ಯವಿದೆ.ಇದೀಗ ಆನ್ ಲೈನ್ ವರದಿಯೊಂದು ತಿಳಿಸಿರುವ ಪ್ರಕಾರ ಈ ಆಂಡ್ರಾಯ್ಡ್ ಕ್ಯೂ ನಲ್ಲಿ ಗೂಗಲ್ 4 ವರ್ಷ ಹಳೆಯ ಐಫೋನ್ ಫೀಚರ್ ವೊಂದನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ತರುವ ನಿರೀಕ್ಷೆ ಇದೆ.

ಆಂಡ್ರಾಯ್ಡ್ ಕ್ಯೂ:
ಹೌದು ಸಂಸ್ಥೆಯು 3ಡಿ ಟಚ್ ನಂತರ ಫೀಚರ್ ನ್ನು ಆಂಡ್ರಾಯ್ಡ್ ಕ್ಯೂ ನಲ್ಲಿ ತರುವ ಬಗ್ಗೆ ಈಗಾಗಲೇ ಕೆಲಸ ಮಾಡುತ್ತಿದೆ. ಈ ಫೀಚರ್ ಐಫೋನಿನ 3ಡಿ ಟಚ್ ಫಂಕ್ಷನಾಲಿಟಿಯಂತೆಯೇ ಕಾರ್ಯ ನಿರ್ವಹಿಸಲಿದೆ. 9ಟು5ಗೂಗಲ್ ವರದಿಯ ಪ್ರಕಾರ, ಡೀಪ್ ಪ್ರೆಸ್ ಫೀಚರ್ ನ್ನು ಕಂಪೆನಿಯು ಪರಿಚಯಿಸಲಿದೆ. ಮತ್ತು ಡಾಕ್ಯುಮೆಂಟೇಷನ್ನಿನ ಭಾಗವಾಗಿ ತಿಳಿದಿರುವುದೇನೆಂದರೆ ಇದು ಮೋಷನ್ ಇವೆಂಟ್ ಗೆ ಸಂಬಂಧಿಸಿರುವುದಾಗಿದೆ.ಈಗಾಗಲೇ ಮಾಡಲಾಗಿರುವ ಡಾಕ್ಯುಮೆಂಟ್ ನ ಪ್ರಕಾರವೇ ಹೇಳುವುದಾದರೆ ಈ ಡೀಪ್ ಡ್ರೆಸ್ ಸ್ಕ್ರೀನಿನಲ್ಲಿ ಬಲವಂತವಾಗಿ ಗಟ್ಟಿಯಾಗಿ ಒತ್ತುವಿಕೆಯಾಗಿರುತ್ತದೆ. ಇದು ಲಾಂಗ್ ಪ್ರೆಸ್ ವರ್ತನೆಯ ವಿವರಣೆಯಾಗಿರುತ್ತದೆ. ಸಂಪೂರ್ಣ ಚಿತ್ರಣ ಇನ್ನಷ್ಟೇ ತಿಳಿಯಬೇಕಿದೆ.

3ಡಿ ಪ್ರೆಸ್ ಫೀಚರ್ :
ಮುಂಬರುವ ಈ 3ಡಿ ಪ್ರೆಸ್ ಫೀಚರ್ ವಿಭಿನ್ನವಾಗಿರುವ ಪ್ರತಿಕ್ರೆಯನ್ನು ಬಳಕೆದಾರರು ಬಯಸಿದಾಗ ನೀಡುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕಾಗಿ ಅವರು ಡಿಸ್ಪ್ಲೇಯನ್ನು ಗಟ್ಟಿಯಾಗಿ ಪ್ರೆಸ್ ಮಾಡಬೇಕಾಗುತ್ತದೆ. ವರದಿಯು ತಿಳಿಸುವ ಪ್ರಕಾರ ಡೀಪ್ ಪ್ರೆಸ್ ವೇಗದ ಆಕ್ಸಿಸ್ ಗೂ ಕೂಡ ನೆರವಾಗುತ್ತದೆ. ಆದರೆ ಹಾರ್ಡ್ ವೇರ್ ಯಾವ ರೀತಿ ಇದಕ್ಕೆ ಬೆಂಬಲ ನೀಡುತ್ತದೆ ಸೇರಿದಂತೆ ಇತರೆ ಮಾಹಿತಿಗಳ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.

ವದಂತಿ:
ಕೆಲವು ವದಂತಿಗಳು ತಿಳಿಸುವ ಪ್ರಕಾರ ಡೀಪ್ ಪ್ರೆಸ್ ಫೀಚರ್ ಮುಂದಿನ ಜನರೇಷನ್ನಿನ ಗೂಗಲ್ ಪಿಕ್ಸಲ್ 4 ಸ್ಮಾರ್ಟ್ ಫೋನಿನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ನಡೆಯುವ ಕಂಪೆನಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಗೂಗಲ್ ವೆಬ್ ಸೈಟ್ ಹೇಳಿಕೆ:
ಉದ್ದೇಶಪೂರ್ವಕವಲ್ಲದೆ ಇತ್ತೀಚೆಗೆ ಗೂಗಲ್ ತನ್ನ ಗೂಗಲ್ ಪಿಕ್ಸಲ್ 3ಎ ಸ್ಮಾರ್ಟ್ ಫೋನ್ ಬಗ್ಗೆ ಹೇಳಿದೆ. ತನ್ನ ವೆಬ್ ಸೈಟ್ ನಲ್ಲಿ ಇದನ್ನು ಹೇಳಿದೆ. ಪಿಕ್ಸಲ್ ಬಡ್ಸ್ ಮತ್ತು ಪಿಕ್ಸಲ್ 3ಎ ಕೇಸ್ ಸ್ಮಾರ್ಟ್ ಫೋನ್ ಜೊತೆಗೆ ಬರಲಿದೆ ಎಂಬುದನ್ನು ಕೂಡ ಕಂಪೆನಿ ತಿಳಿಸಿದೆ.


Click it and Unblock the Notifications








