ನಿಮಗೆ ಅತ್ಯಗತ್ಯವಾಗಿರುವ ಮೊಬೈಲ್ ಅಪ್ಲಿಕೇಶನ್‌ಗಳಿವು

Written By:

ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳೇ ನಮ್ಮ ಹೆಚ್ಚುವರಿ ಕೆಲಸವನ್ನು ಮಾಡುತ್ತಿವೆ. ಮಾತನಾಡುವುದರಿಂದ ಹಿಡಿದು ಸಂದೇಶ ಕಳುಹಿಸುವುದು, ವೆಬ್ ಹುಡುಕಾಟ, ಧ್ವನಿ ಕರೆಗಳು, ಇಮೇಲ್ ಕಳುಹಿಸುವಿಕೆ ಇವೇ ಮೊದಲಾದ ಚಟುವಟಿಕೆಗಳನ್ನು ಇಂದಿನ ಸ್ಮಾರ್ಟ್‌ಫೋನ್ ಲೋಕ ನಮಗೆ ದಯಪಾಲಿಸುತ್ತಿದೆ. ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಯಾಗಬೇಕು ಎಂದಾದಲ್ಲಿ ನಿಮ್ಮ ಫೋನ್ ಈ ಅಪ್ಲಿಕೇಶನ್‌ಗಳನ್ನು ಹೊಂದಿರಲೇಬೇಕು.

ಹೌದು ಅಪ್ಲಿಕೇಶನ್‌ಗಳನ್ನು ಹೆಚ್ಚು ಹೆಚ್ಚು ಬಳಸಿದೆವು ಎಂದಾದಲ್ಲಿ ಮಾತ್ರವೇ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿರುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ಅಥವಾ ಯಾವುದಾದರೂ ಸಂಭ್ರಮದ ದಿನದಂದು ಸಂದೇಶಗಳನ್ನು ಕಳುಹಿಸುವುದು ಇವೇ ಮೊದಲಾದ ಕೆಲಸಗಳಿಗೆ ಸಂದೇಶಗಳನ್ನು ಕಳುಹಿಸುವುದು ವಾಡಿಕೆಯಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್‌ಗಳನ್ನು ಕುರಿತು ತಿಳಿದುಕೊಳ್ಳೋಣ. ಈ ಅಪ್ಲಿಕೇಶನ್‌ಗಳು ನಿಜಕ್ಕೂ ಸುಂದರವಾಗಿದೆ ಮತ್ತು ಬಳಸಲು ಹೆಚ್ಚು ಪರಿಣಾಮಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್
  

ಹೆಚ್ಚು ಬಳಸಲಾದ ಮೆಸೆಂಜರ್ ಸೇವೆಯಾಗಿರುವ ವಾಟ್ಸಾಪ್ ನಿಮಗೆ ಗುಂಪು ಸಂದೇಶಿಸುವಿಕೆಯ ಉತ್ತಮ ಅನುಭವವನ್ನು ನಿಮಗೆ ಒದಗಿಸುತ್ತದೆ. ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸುವಿಕೆ ತುಂಬಾ ಸುಲಭವಾಗಿದ್ದು ಇದು ಅತ್ಯಂತ ಸರಳ ಕೂಡ ಹೌದು. ಇತ್ತೀಚೆಗೆ ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿದೆ.

ಬಿಬಿಎಮ್ (ಬ್ಲ್ಯಾಕ್‌ಬೆರಿ ಮೆಸೆಂಜರ್)
  

ಬ್ಲ್ಯಾಕ್‌ಬೆರ್ರಿಯು ತನ್ನ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇದನ್ನು ತೆರೆಯಲು ಮತ್ತು ಬಳಸಲು ಉಚಿತವಾಗಿಸಿದೆ. ಹೆಚ್ಚಿನ ಬ್ಲ್ಯಾಕ್‌ಬೆರ್ರಿ ಮತ್ತು ಆಂಡ್ರಾಯ್ಡ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದು ನಿಜಕ್ಕೂ ಇದು ಅದ್ಭುತವಾಗಿದೆ. ಇದನ್ನು ನಿಮಗೆ ಖಾಸಗಿಯಾಗಿ ಬಳಸಬಹುದಾಗಿದ್ದು ವಾಟ್ಸಾಪ್‌ನಂತೆ ನಿಮ್ಮ ಸಂಪರ್ಕ ವಿವರವನ್ನು ಪರಿಶೀಲಿಸಲಾಗುವುದಿಲ್ಲ. ಈ ಅಪ್ಲಿಕೇಶನ್ ಪಿನ್ ಅನ್ನು ಹೊಂದಿದ್ದು ಪಿನ್‌ನಿಂದ ಮಾತ್ರವೇ ಸಂಪರ್ಕವನ್ನು ಸಾಧಿಸಬಹುದಾಗಿದೆ.

ವಿ ಚಾಟ್
  

ಭಾರತದಲ್ಲಿ ಮಾತ್ರವೇ ಈ ಅಪ್ಲಿಕೇಶನ್ ಅನ್ನು ಇದೀಗ ಪ್ರಚಾರ ಪಡಿಸಲಾಗುತ್ತಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ಯಾರೊಂದಿಗೆ ಬೇಕಾದರೂ ಚಾಟ್ ಮಾಡಬಹುದಾಗಿದೆ. ಇದನ್ನು ಬಳಸಲು ಈ ಅಪ್ಲಿಕೇಶನ್ ಅನ್ನು ಹೊಂದಿರುವ ವ್ಯಕ್ತಿಗೆ ನೀವು ಕೋರಿಕೆಯನ್ನು ಕಳುಹಿಸುವುದು ಅಗತ್ಯವಾಗಿದೆ.

ಹೈಕ್ ಮೆಸೆಂಜರ್
  

ಹೈಕ್ ಹೊಸದಾಗಿ ಲಾಂಚ್ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ. ನಿಮ್ಮ ಅಂತರ್ಜಾಲ ಸೇವೆಯ ನಂತರ ಕೂಡ ಈ ಅಪ್ಲಿಕೇಶನ್ ಮೂಲಕ ನಿಮಗೆ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಮೊದಲಿಗೆ ಇಪ್ಪತ್ತು ಉಚಿತ ಸಂದೇಶಗಳ ಸೇವೆಯನ್ನು ನಿಮಗೆ ಒದಗಿಸಲಾಗುತ್ತದೆ ನಂತರ ನೀವು ಸಂದೇಶವನ್ನು ಹೆಚ್ಚು ಬಳಸಿದಂತೆಲ್ಲಾ ಸಂದೇಶದ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ.

ಚಾಟ್ ಆನ್
  

ಸ್ಯಾಮ್‌ಸಂಗ್ ಈ ಅಪ್ಲಿಕೇಶನ್ ಅನ್ನು ಮೊದಲು ಪರಿಚಯಿಸಿತು. ಇದು ವಿ ಚಾಟ್ ಮತ್ತು ಬ್ಲ್ಯಾಕ್‌ಬೆರ್ರಿಯಂತೆ ಇದು ಬಳಸಲು ಅತಿ ಸುಲಭವಾಗಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ.

ಲೈನ್ ಮೆಸೆಂಜರ್
  

ಇದು ಕೂಡ ತನ್ನಲ್ಲಿ ಸ್ಟಿಕ್ಕರ್‌ಗಳ ಅನೂಹ್ಯ ಸಂಗ್ರಹವನ್ನು ಒಳಗೊಂಡಿದ್ದು ಬಿಬಿಎಮ್‌ ಅಪ್ಲಿಕೇಶನ್ ಅಂತೆ ನೀವು ಇದರಲ್ಲಿ ಕೋಡ್ ಅನ್ನು ಬಳಸಬಹುದಾಗಿದೆ. ಇದರಿಂದ ಕೋಡ್ ಇರುವ ವ್ಯಕ್ತಿಯೊಂದಿಗೆ ಮಾತ್ರವೇ ನಿಮಗೆ ಸಂದೇಶವನ್ನು ರವಾನಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about This apps should be there in your smartphones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot