ಈ ದೇಶಗಳಲ್ಲಿ ಮೊಬೈಲ್ ಗೀಳು ಇರುವವರಿಗೆ ಒಂದು ಪ್ರತ್ಯೇಕ ರಸ್ತೆ!!

|

ಕೈಯಲ್ಲಿ ಮೊಬೈಲ್ ಹಿಡಿದು ರಸ್ತೆಯಲ್ಲಿ ನಡೆದಾಡುವವರು, ರಸ್ತೆ ದಾಟುವವರು, ಕಿವಿಯಲ್ಲಿ ಇಯರ್ ಫೋನ್ ಸೇರಿಸಿಕೊಂಡು ಓಡಾಡುವವರು, ಊಟಮಾಡುವಾಗಲೂ, ನಿದ್ದೆ ಮಾಡುವಾಗಲೂ ಮೊಬೈಲ್ ಬಳಕೆ ಈಗ ಸಾಮಾನ್ಯ ಎಂಬಂತಾಗಿದೆ. ಹಾಗಾಗಿ, ಈ ಡಿಜಿಟಲ್ ಯುಗದಲ್ಲಿ ಕೈಯಲ್ಲಿ ಸದಾಕಾಲ ಸ್ಮಾರ್ಟ್‌ಫೋನ್ ಇಲ್ಲದೇ ಇರುವವನು ನಮಗೆ ಕಂಡರೆ ಆತ ಪುಣ್ಯಾತ್ಮನೆ ಸರಿ.

ಆದರೆ, ಈ ಡಿಜಿಟಲ್ ಕಾಲದಲ್ಲಿ ಸ್ಮಾರ್ಟ್‌ಪೋನ್ ಬಿಟ್ಟು ಈಗ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಗೆ ಆಗಲೇ ಬಂದಾಗಿದೆ. ರಸ್ತೆಯ ಮೇಲೆ, ಕಾರನ್ನು ಚಾಲನೆ ಮಾಡುವಾಗ ಮೊಬೈಲ್ ಉಪಯೋಗಿಸುವುದು ಜೀವಕ್ಕೆ ಮಾರಕ ಎಂದು ಗೊತ್ತಿದ್ದೂ ಉಪಯೋಗಿಸುತ್ತಿದ್ದೇವೆ. ನಮಗೆ ಈ ಬಗ್ಗೆ ಅರಿವಾಗುವ ವೇಳೆಗಾಗಲೇ ನಾವು ಸಂಕಷ್ಟಕ್ಕೆ ಸಿಲುಕಿರುತ್ತೇವೆ.

ಈ ದೇಶಗಳಲ್ಲಿ ಮೊಬೈಲ್ ಗೀಳು ಇರುವವರಿಗೆ ಒಂದು ಪ್ರತ್ಯೇಕ ರಸ್ತೆ!!

Asus Zenfone Max pro M1 Unboxing KANNADA 1

ಮೊಬೈಲ್‌ನ ಗೀಳು ಲೋಕಜ್ಞಾನವನ್ನು ಮರೆಸಿ ಪರಲೋಕದ ದಾರಿ ತೋರಿಸುತ್ತಿದೆ. ರಸ್ತೆಯ ಮೇಲೆ ಮತ್ತು ರೈಲು ಹಳಿಗಳ ಅಕ್ಕ ಪಕ್ಕ ಮೋಬೈಲ್‌ನಲ್ಲಿ ಮುಳುಗಿ ಎಷ್ಟೋ ಜನ ಜೀವವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ, ಈ ರೀತಿಯ ಅಪಘಾತಗಳನ್ನು ತಪ್ಪಿಸಲು ನೆದರಲ್ಯಾಂಡ್ ದೇಶ ತನ್ನ ಮೊಬೈಲ್ ಬಳಕೆ ನಾಗರೀಕರಿಗಾಗಿ ಮೊಬೈಲ್ ರಸ್ತೆ ಮತ್ತು ಸಿಗ್ನಲ್ ಅನ್ನು ನಿರ್ಮಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಮೊಬೈಲ್ ಬಳಕೆದಾರರಿಗೆ ರಸ್ತೆ!

ನಾವು ನಂಬಲೂ ಕಷ್ಟವಾದ ಸುದ್ದಿ ಇದಾಗಿದ್ದು, ಮೊಬೈಲ್‌ ಗೀಳಿನಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಮತ್ತು ಡಿಜಿಟಲ್ ಸಮಸ್ಯೆಯಿಂದ ಬಳಲುತ್ತಿರುವವರನ್ನು ರಕ್ಷಿಸಲು ನೆದರಲ್ಯಾಂಡ್ ದೇಶ ಮುಂದಾಗಿದೆ. ಫೋನ್‌ನಲ್ಲಿ ತಲ್ಲೀನರಾಗಿ ರಸ್ತೆ ಮತ್ತು ಟ್ರಾಫಿಕ್ ಸಿಗ್ನಲ್ಗಳ ದಾಟುವ ಜನರನ್ನು ಎಚ್ಚರಿಸಿ ಅವರ ಪ್ರಾಣ ಕಾಪಾಡಬಹುದಾದ ಹೊಸ ವ್ಯವಸ್ಥೆ ಇದಾಗಿದೆ.

ರೋಡಿನಲ್ಲಿ ಎಲ್.ಇ.ಡಿ.ಯ ಸ್ಟ್ರಿಪ್!

ನೆದರಲ್ಯಾಂಡ್‌ನ ಬೊಡೆಗ್ರೆವನ್ ನಗರದಲ್ಲಿ ರಸ್ತೆಗಳಲ್ಲಿ ವಿಶಿಷ್ಟ/ವಿನೂತನ ಮಾದರಿಯ ಟ್ರಾಫಿಕ್ ಲೈಟ್ಗಳನ್ನು ಅಳವಡಿಸಲಾಗಿದೆ. ಟ್ರಾಫಿಕ್ ಲೈಟ್ಗಳು ಎಲ್.ಇ.ಡಿ.ರೂಪದಲ್ಲಿವೆ. ಮೊಬೈಲ್ನಲ್ಲಿ ಮಗ್ನರಾದವರ ದೃಷ್ಟಿಯನ್ನು ರಸ್ತೆಯ ಮೇಲಿನ ಈ ಎಲ್.ಇ.ಡಿ. ಟ್ರಾಫಿಕ್ ಲೈಟ್ಗಳು ಎಚ್ಚರಿಸುತ್ತವೆ. ಈ ಎಲ್.ಇ.ಡಿ. ಲೈಟ್‌ಗಳು ಕೆಂಪು ಬಣ್ಣವನ್ನು ಸೂಸಿ ಎಚ್ಚರಿಕೆಯನ್ನು ನೀಡುತ್ತವೆ.

ಇದು ಎರಡನೇ ಪ್ರಯೋಗ!

ಮೊಬೈಲ್ ಬಳಕೆದಾರರಿಗೆಂದೇ ಗ್ರೌಂಡ್ ಸ್ಟ್ರೀಟ್ ಲೈಟ್ ಅಳವಡಿಸಿ 2016ರಲ್ಲೇ ಜರ್ಮನಿ ಎಲ್ಲರ ಹುಬ್ಬೇರಿಸಿತ್ತು. ಅಲ್ಲಿಯ ಚೊಂಗ್‌ವಿಂಗ್ ನಗರದಲ್ಲಿ ರಸ್ತೆಯಲ್ಲಿ ಮೋಬೈಲ್ ಉಪಯೋಗಿ ಸುವವರಿಗಾಗಿಯೇ ಒಂದು ಚಿಕ್ಕ ರಸ್ತೆಯನ್ನು ನಿರ್ಮಿಸಲಾಗಿತ್ತು. ಆ ರಸ್ತೆಯಲ್ಲಿ ಸ್ಮಾರ್ಟ್‌ಫೋನ್ ಬಳಸುವವರು ಯಾವುದೇ ಭಯವಿಲ್ಲದೆ ಈಗಲೂ ರಾಜಾರೋಷವಾಗಿ ನಡೆಯಬಹುದು.!

ಇದೇ ರೀತಿ ಹಲವು ಪ್ರಯೋಗಗಳಾಗಿವೆ.

ಮೊಬೈಲ್ ಮಗ್ನರನ್ನು ಟ್ರಾಫಿಕ್ ಸಿಗ್ನಲ್‌ಗಳಲ್ಲಿಯೇ ತಡೆಯಲು ಪೋರ್ಚುಗಲ್‌ ರಾಜಧಾನಿ ಲಿಸ್ಬೇನ್‌ನಲ್ಲಿ ಒಂದು ವಿನೂತನ ಪ್ರಯೋಗ ಮಾಡಲಾಗಿತ್ತು. ಟ್ರಾಫಿಕ್ ಸಿಗ್ನಲ್ಗಳಲ್ಲಿ ಜನರ ಗಮನವನ್ನು ಟ್ರಾಫಿಕ್ ಲೈಟ್ಗಳತ್ತ ಸೆಳೆಯಲು ಟ್ರಾಫಿಕ್ ಸಿಗ್ನಲ್ಗಳಲ್ಲಿ ರೆಡ್‌ ಲೈಟ್ ನಿಲ್ಲುವ ಸೂಚನೆ ಬಂದಾಗ, ಕೆಂಪು ದೀಪದ ಬದಲು ಸಂಗೀತವನ್ನು ಸಹ ಪ್ಲೇ ಮಾಡಲಾಗುತ್ತಿತ್ತು.

ಚೀನಾ ಕೂಡ ಸಾಗುತ್ತಿದೆ.

ಪಾಶ್ಚಾತ್ಯ ದೇಶಗಳ ಕಥೆ ಇದಾದರೆ, ನೆರೆ ರಾಷ್ಟ್ರ ಚೀನಾ ಕೂಡ ಇದೇ ದಾರಿಯಲ್ಲಿ ಸಾಗುತ್ತಿದೆ. ಚೀನಾದ ಶಾಂಘಾಯ್ ನಗರದಲ್ಲಿ ಕೆಲ ರಸ್ತೆಗಳಲ್ಲಿ ವೈಫೈ ಮತ್ತು ಸಿ.ಸಿ. ಟಿವಿಯ ಸೌಲಭ್ಯವನ್ನೂ ಪ್ರಕಾಶಮಾನ ಬೀದಿ ದೀಪಗಳೊಂದಿಗೆ ಅಳವಡಿಸಲಾಗಿದೆ. ಈ ದೀಪಗಳ ಕಂಬಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಭಾರತವಿನ್ನು ಸಾಗಬೇಕಿದೆ.!

ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವವರ ಜೊತೆಗೆ ಮೊಬೈಲ್‌ನಲ್ಲಿ ಮಗ್ನರಾದವರಿಂದ ಭಾರತದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಪಾದಚಾರಿಗಳು ಸಾವಿಗಿಡಾಗುತ್ತಿದ್ದಾರೆ. ಇಂತಹ ಅಪಘಾತದಿಂದ ಪಾರು ಮಾಡಲು ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ತಾಂತ್ರಿಕತೆಯ ಅವಶ್ಯಕತೆ ಇದೆ. ಆದರೆ, ಇದು ಸಾಕಾರಗೊಳ್ಳುವುದು ಯಾವಾಗ?.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
City authorities in Chongqing have introduced a 30 metre ‘cellphone lane’ for pedestrians – is it a step too far in the name of public safety?. to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more