ಆಂಡ್ರಾಯ್ಡ್ ಫೋನ್ ಯಾಕೆ ಬೇಕು..? ನೀವು ಊಹಿಸಲು ಸಾಧ್ಯವಾಗದ ಬೆಲೆಗೆ ಐಫೋನ್..!

|

ಮಾರುಕಟ್ಟೆಗೆ ಶೀಘ್ರವೇ ಆಪಲ್ ಕಡಿಮೆ ಬೆಲೆಯ ಐಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೊಂದು ಹರಿದಾಡುತಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಮತ್ತೊಂದು ರೂಮರ್ ಸಹ ಸದ್ದು ಮಾಡುತ್ತಿದೆ. ಶೀಘ್ರವೇ ಮಾರುಕಟ್ಟೆಯಲ್ಲಿ ಐಫೋನ್ X ಮಾದರಿಯಲ್ಲಿ ನಾಚ್ ಡಿಸ್ ಪ್ಲೇಯನ್ನು ಹೊಂದಿರುವ ಕಡಿಮೆ ಬೆಲೆಯ ಐಫೋನ್ ಬಗ್ಗೆ ಮಾಹಿತಿಯೂ ಲಭ್ಯವಾಗಿದ್ದು, ವಿಶೇಷತೆಗಳ ಕುರಿತ ಮಾಹಿತಿಯೂ ಇದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.

ಆಂಡ್ರಾಯ್ಡ್ ಫೋನ್ ಯಾಕೆ ಬೇಕು..? ನೀವು ಊಹಿಸಲು ಸಾಧ್ಯವಾಗದ ಬೆಲೆಗೆ ಐಫೋನ್..!

ಆಪಲ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಲಾಂಚ್ ಮಾಡಿದ್ದ ಐಫೋನ್ X ಮಾದರಿಯಲ್ಲಿಯೇ ಬಜೆಟ್ ಬೆಲೆಯ ಐಫೋನ್ ಅನ್ನು ನಿರ್ಮಿಸಲು ಆಪಲ್ ಮುಂದಾಗಿದ್ದು, ವಿಶೇಷತೆಗಳಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಕಂಡರು ಸಹ, ನೋಡಲು ಮಾತ್ರ ಒಂದೇ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿ ಇದೆ. ಅಲ್ಲದೇ ಈ ನೂತನ ಐಫೋನಿನ ಬೆಲೆಯ ಕುರಿತು ಮಾಹಿತಿಯೂ ಲೀಕ್ ಆಗಿದೆ. ಇದು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ದೊಡ್ಡ ಹೊಡೆತವನ್ನು ನೀಡುವ ಸಾಧ್ಯತೆ ಇದೆ.

LED ಡಿಸ್ ಪ್ಲೇ:

LED ಡಿಸ್ ಪ್ಲೇ:

ಐಫೋನ್ X ನಲ್ಲಿ ಸ್ಯಾಮ್ ಸಂಗ್ ನಿಂದ ಖರೀದಿಸಿದಂತಹ OLED ಡಿಸ್ ಪ್ಲೆಯನ್ನು ಅಳವಡಿಸಲಾಗಿತ್ತು. ಇದು ಸ್ಮಾರ್ಟ್ ಫೋನ್ ಅಂದವನ್ನು ಹೆಚ್ಚು ಮಾಡಿತ್ತು ಅಲ್ಲದೇ ಬೆಲೆ ಜಾಸ್ತಿಗೂ ಕಾರಣವಾಗಿತ್ತು. ಆದರೆ ಸದ್ಯ ಕಡಿಮೆ ಬೆಲೆಯಲ್ಲಿ ನಿರ್ಮಾಣವಾಗುತ್ತಿರುವ ಐಪೋನಿನಲ್ಲಿ LED ಡಿಸ್ ಪ್ಲೇಯನ್ನು ಅಳವಡಿಸಲಾಗುತ್ತಿದ್ದು, ಇದರಿಂದಾಗಿ ಬೆಲೆಯಲ್ಲಿಯೂ ಇಳಿಕೆಯನ್ನು ಕಾಣಬಹುದಾಗಿದೆ.

ಸಿಂಗಲ್  ಕ್ಯಾಮೆರಾ:

ಸಿಂಗಲ್ ಕ್ಯಾಮೆರಾ:

ಐಫೋನ್ Xನಲ್ಲಿ ಡ್ಯುಯಲ್ ಕ್ಯಾಮೆರಾ ಸೆಪಟ್ ಅನ್ನು ನೀಡಿದ್ದಂತಹ ಆಪಲ್. ಈ ಹೊಸ ಐಪೋನಿನಲ್ಲಿ ಸಿಂಗಲ್ ಕ್ಯಾಮೆರಾವನ್ನು ನೀಡುವ ಯೋಜನೆಯನ್ನು ರೂಪಿಸಿದ್ದು, ಹಿಂಭಾಗದಲ್ಲಿ ಒಂದೇ ಒಂದು ಕ್ಯಾಮೆರಾವನ್ನು ಮಾತ್ರವೇ ಅಳವಡಿಸಲಾಗಿದೆ. ಇದೆಲ್ಲವೂ ಐಫೋನ್ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಿದೆ.

3D ಟಚ್:

3D ಟಚ್:

ಐಫೋನ್ Xನಲ್ಲಿ ಫೇಷಿಯಲ್ ರೆಗ್ನೇಷನ್ ಆಯ್ಕೆಯನ್ನು ನೀಡಿದ ಮಾದರಿಯಲ್ಲಿ 3D ಟಚ್ ಆಯ್ಕೆಯನ್ನು ಹೊಸದಾಗಿ ಬಿಡುಗಡೆಯಾಗಲಿರುವ ಐಫೋನಿನಲ್ಲಿ ನೀಡಲಿದೆ ಎನ್ನಲಾಗಿದೆ. ಇದದಲ್ಲದೇ 6.5 ಇಂಚಿನ ಡಿಸ್ ಪ್ಲೇ ಇದರಲ್ಲಿ ಇರಲಿದ್ದು, ಇದು ದೊಡ್ಡದಾಗಿ ಕಾಣುವಂತೆ ಮಾಡಲಿದೆ. ವಿಡಿಯೋ ನೋಡಲು ಮತ್ತು ಗೇಮ್ ಆಡಲು ಇದು ಹೇಳಿ ಮಾಡಿಸಿದ ಹಾಗೆ ಇರಲಿದೆ.

ಬೆಲೆ:

ಬೆಲೆ:

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಾಂಚ್ ಆಗಲಿರುವ ಐಫೋನ್ ಜನ ಸಾಮಾನ್ಯರ ಕೈಗೆ ಎಟುಕುವಂತೆ ಮಾಡುವ ಸಲುವಾಗಿ $700ಕ್ಕೆ ಮಾರಾಟ ಮಾಡಲಿದೆ. ಭಾರತೀಯ ರೂಗಳಲ್ಲಿ ಸುಮಾರು ರೂ.45000ದ ಆಸುಪಾಸಿನಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಇದೇ ಬೆಲೆಯಲ್ಲಿ ಮಾರಾಟವಾಗು ಆಂಡ್ರಾಯ್ಡ್ ಫೋನ್ ಗಳು ತೊಂದರೆಗೆ ಸಿಲುಕಲಿದೆ ಎನ್ನು ಮಾಹಿತಿಯೂ ಲಭ್ಯವಾಗಿದೆ.

ಮಾರುಕಟ್ಟೆಯಲ್ಲಿ ಸಂಚಲನ:

ಮಾರುಕಟ್ಟೆಯಲ್ಲಿ ಸಂಚಲನ:

ಈಗಾಗಲೇ ಮಾರುಕಟ್ಟೆಯಲ್ಲಿ ಮಧ್ಯಮ ಬೆಲೆಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿದ್ದು, ಈಗ ಆಪಲ್ ಐಪೋನ್ ಅನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾದರೆ ಹೆಚ್ಚಿನ ಮಂದಿ ಇದರ ಕಡಗೆ ಆಕರ್ಷಿತರಾಗುತ್ತಾರೆ. ಇದರಿಂದಾಗಿ ಬೇರೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕರು ನಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.

Best Mobiles in India

English summary
This could be the price of the budget iPhone X. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X