Home
ಮೊಬೈಲ್

ಮೊಬೈಲ್ ಮಾರುಕಟ್ಟೆಗೆ ಟಿಕ್‌ಟಾಕ್' ಲಗ್ಗೆ!..ಶಿಯೋಮಿ ಕಥೆ ಕ್ಲೋಸ್?

ಜನಪ್ರಿಯ ವೀಡಿಯೊ ಅಪ್ಲಿಕೇಶನ್‌ ಟಿಕ್‌ಟಾಕ್ ಹಾಗೂ ಸಾಮಾಜಿಕ ಜಾಲತಾಣ ಹೆಲೊದ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ತನ್ನ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲು ಮುಂದಾಗಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸ್ಟಾರ್ಟ್ಆಪ್ ಕಂಪೆನಿಯಾಗಿರುವ ಬೈಟ್‌ಡ್ಯಾನ್ಸ್ ಇದೀಗ ಸ್ಮಾರ್ಟ್‌ಫೋನ್ ತಯಾರಿಕಾ ಕ್ಷೇತ್ರಕ್ಕೂ ಲಗ್ಗೆಇಡುವ ಮೂಲಕ ಆಶ್ಚರ್ಯ ಮೂಡಿಸಿದ್ದು, ವಿಶ್ವ ಮೊಬೈಲ್ ಲೋಕಕ್ಕೆ ಮತ್ತೊಂದು ಚೀನಾ ಮೊಬೈಲ್ ಕಂಪೆನಿ ಭರ್ಜರಿಯಾಗಿ ಎಂಟ್ರಿ ನೀಡಲು ತಯಾರಾಗಿದೆ.

ಬೈಟ್‌ಡ್ಯಾನ್ಸ್

ಹೌದು, ಭಾರತದಲ್ಲಿ ಸುಮಾರು 200 ಮಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಬೈಟ್‌ಡ್ಯಾನ್ಸ್ ಕಂಪೆನಿ ತನ್ನ ಮೊಟ್ಟ ಮೊದಲ 'ಸ್ಮಾರ್ಟಿಸನ್​ ಜಿಯಾಂಗು ಪ್ರೊ 3' ಎಂಬ ಸ್ಮಾರ್ಟ್​ಫೋನ್​ ಒಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕಂಪೆನಿ ಮೂಲಗಳ ಪ್ರಕಾರ, ಬೈಟ್‌ಡ್ಯಾನ್ಸ್ ಕಂಪೆನಿಯ ಈ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ 2020ರ ಮೊದಲ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದ್ದು, ಸಾಕಷ್ಟು ವಿಶೇಷ ಫೀಚರ್ಸ್ ಅಳವಡಿಸಿಕೊಳ್ಳುವ ಮೂಲಕ ವಿಶ್ವದಾದ್ಯಂತ ಮೊಬೈಲ್ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಬೈಟೆಡಾನ್ಸ್ ಕಂಪೆನಿ

ಬೈಟೆಡಾನ್ಸ್ ಕಂಪೆನಿ ಸಿದ್ಧಪಡಿಸಿರುವ ಹೊಸ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ 6.39 ಇಂಚಿನ ಫುಲ್​ ಹೆಚ್​ಡಿ+ ಅಮೋಲೆಡ್​ ಡಿಸ್​ಪ್ಲೇ ಹೊಂದಿರಲಿದ್ದು, ಸ್ನಾಪ್​ಡ್ರ್ಯಾಗನ್​ 855+ ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗಾಗಿ 8GB RAM​​ + 128GB ಸ್ಟೊರೇಜ್ ಆಯ್ಕೆಯಲ್ಲಿ, 8GB RAM​ + 256 ಸ್ಟೊರೇಜ್​ನಲ್ಲಿ ಮತ್ತು 12GB RAM​ ಮತ್ತು 256GB ಸ್ಟೊರೇಜ್​ನಲ್ಲಿ ಮೊಬೈಲ್ ಸಿಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಈ ಸ್ಮಾರ್ಟ್‌ಫೋನಿನಲ್ಲಿ ನಾಲ್ಕು ರಿಯರ್ ಕ್ಯಾಮೆರಾಗಳನ್ನು ಅಳವಡಿಸಿರುವುದನ್ನು ಸಹ ತಿಳಿಸಲಾಗಿದೆ.

48 ಮೆಗಾಪಿಕ್ಸೆಲ್​ ಕ್ಯಾಮೆರಾ

48 ಮೆಗಾಪಿಕ್ಸೆಲ್​ ಕ್ಯಾಮೆರಾ + 13 ಮೆಗಾಪಕ್ಸೆಲ್​ ವೈಡ್​ ಆಂಗಲ್​ ಕ್ಯಾಮೆರಾ + 8 ಮೆಗಾಪಕ್ಸೆಲ್​ ಟೆಲಿಫೋಟೋ + 5 ಮೆಗಾಪಿಕ್ಸೆಲ್​ ಮಾಕ್ರೊ ಕ್ಯಾಮೆರಾಗಳು ಈ ಸ್ಮಾರ್ಟ್​ಫೋನಿನಲ್ಲಿ ಅಳವಡಿಸಲಾಗಿರುವ ನಾಲ್ಕು ರಿಯರ್ ಕ್ಯಾಮೆರಾಗಳಾಗಿವೆ. ಹಾಗೆಯೇ, ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಇವುಗಳ ಜೊತೆಗೆ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿರುವ ಬ್ಲೂಟೂತ್​, ವೈ-ಫೈ, ಜಿಪಿಎಸ್ ಸೇವೆಗಳು ಹಾಗೂ 4000mAh ಸಾಮರ್ಥ್ಯಸ​ ಬ್ಯಾಟರಿಯನ್ನು ಫೋನಿನಲ್ಲಿ ಅಳವಡಿಸಲಾಗುತ್ತಿದೆ.

ಫೋನಿನ ಬೆಲೆ

ಇನ್ನು ಈ ನೂತನ ಫೋನಿನ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಕೂಡ ಸಿಕ್ಕಿದ್ದು, 8 ಜಿಬಿ RAM / 128GB ಶೇಖರಣಾ ರೂಪಾಂತರದ ಫೋನ್ ಬೆಲೆ ಯುವಾನ್ 2,899 (ಅಂದಾಜು 29,000 ರೂ.), 8 ಜಿಬಿ RAM / 256GB ರೂಪಾಂತರಕ್ಕೆ ಯುವಾನ್ 2,199 (ಅಂದಾಜು 32,000 ರೂ) ಮತ್ತು 12 ಜಿಬಿ RAM / 256 ಜಿಬಿ ರೂಪಾಂತರದ ಬೆಲೆ ಯುವಾನ್ 3,599 (ಅಂದಾಜು 36,000 ರೂ) ಎಂದು ಹೇಳಲಾಗಿದೆ. ಇದು ಪ್ರಸ್ತುತ ಕಪ್ಪು, ಬಿಳಿ ಮತ್ತು ಮಾಟ್ಸುಟೇಕ್ ಬಣ್ಣ ಆಯ್ಕೆಗಳಲ್ಲಿ ಆರಂಭದಲ್ಲಿ ಚೀನಾದಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
TikTok owner ByteDance has finally launched its first smartphone, the Smartisan Jianguo Pro 3. The TikTok app is just a swipe away from the lock screen in this new phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+