ನಿಮ್ಮ ಮೊಬೈಲ್ ಬಿಲ್ ಕಡಿಮೆ ಮಾಡಿಕೊಳ್ಳಲು ಟಿಪ್ಸ್

Posted By: Varun
ನಿಮ್ಮ ಮೊಬೈಲ್ ಬಿಲ್ ಕಡಿಮೆ ಮಾಡಿಕೊಳ್ಳಲು ಟಿಪ್ಸ್

ಮೊಬೈಲ್ ಪ್ಲಾನ್ ಅನ್ನು ಆಯ್ಕೆ ಮಾಡುವಾಗ ಬಹುತೇಕ ಮಂದಿ ಅತೀ ಕಡಿಮೆ ಹಣದ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಇಲ್ಲವೆ ಉಚಿತ ಟಾಕ್ ಟೈಮ್, ಫ್ರೀ ಎಸ್ಎಂಎಸ್ ಇದೆ ಎಂದು ಮೊಬೈಲ್ ಕಂಪನಿಗಳ ಆಕರ್ಷಕ ಪ್ಲಾನ್ ಗಳಿಗೆ ಮರುಳಾಗಿ ಹೈ ಎಂಡ್ ಪ್ಲಾನ್ ಅನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಪ್ರತಿ ತಿಂಗಳು ಬರುವ ಬಿಲ್ ನೋಡಿದರೆ ಗೊತ್ತಗುತ್ತದೆ, ತಾವು ಮೋಸ ಹೋದರೆಂದು.

ಈ ರೀತಿ ಮೋಸ ಆಗದ ಹಾಗೆ ಹಾಗು ನಿಮ್ಮ ಅಗತ್ಯಕ್ಕೆ ತಕ್ಕಂತೆ ಪ್ರೀ ಪೇಡ್ ಹಾಗು ಪೋಸ್ಟ್ ಪೇಡ್ ಮೊಬೈಲ್ ಪ್ಲಾನ್ ಗಳನ್ನು ತೆಗೆದುಕೊಳ್ಳಲು ಹಾಗುಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಈ ಟಿಪ್ಸ್ ಸಹಾಯಕವಾಗುತ್ತದೆ.

1) ಸರಿಯಾದ ಪ್ಲಾನ್ ತೆಗೆದುಕೊಳ್ಳಿ- ಮೊದಲಿಗೆ ನೀವು ದಿನದ ಯಾವ ಸಮಯದಲ್ಲಿ ಹೆಚ್ಚಾಗಿ ಕರೆ ಮಾಡುತ್ತೀರಾ ಎಂದು ಬರೆದುಕೊಳ್ಳಿ. ಅದರ ಜೊತೆ ವೀಕ್ ಡೇ ಇಲ್ಲವೆ ವೀಕೆಂಡ್ ನಲ್ಲಿ ಹೆಚ್ಚಾಗಿ ಕರೆ ಮಾಡುತ್ತೀರಾ ಎಂದು ಬರೆದುಕೊಳ್ಳಿ. ಇವೆರಡನ್ನೂ ಗಮನದಲ್ಲಿ ಇಟ್ಟುಕೊಂಡು ವಿವಿಧ ಕಂಪನಿಗಳ ಬ್ರೋಶರ್ ಜೊತೆ ಹೋಲಿಕೆ ಮಾಡಿ.ಇದು ನಿಮ್ಮ ಅಗತ್ಯಕ್ಕೆ ತಕ್ಕ ಪ್ಲಾನ್ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

2) ಟಾಲ್ ಫ್ರೀ ಕರೆಗಳನ್ನು ಮಾಡಬೇಡಿ- ಹೌದು. ಈ ಕರೆಗಳು ಫ್ರೀ ಅಂತ ಇದ್ದರೂ ಕೂಡ ಅವು ಲ್ಯಾಂಡ್ ಲೈನ್ ಫೋನುಗಳಿಗೆ ಮಾತ್ರ ಅನ್ವಯಿಸುತ್ತವೆ. ಹಾಗಾಗಿ 1-800 ನಂಬರಿನಿಂದ ಶುರುವಾಗುವ ಟಾಲ್ ಫ್ರೀ ನಂಬರುಗಳಿಗೆ ಕರೆ ಮಾಡಿದರೆ ಶುಲ್ಕವಿರುತ್ತದೆ.

3) ನಿಮ್ಮ ಕುಟುಂಬದವರು ಉಪಯೋಗಿಸುವ ಪ್ಲಾನ್ ಅನ್ನೇ ಉಪಯೋಗಿಸಿ- ಹಲವಾರು ಮೊಬೈಲ್ ಕಂಪನಿಗಳು ತಮ್ಮ ನೆಟ್ವರ್ಕ್ ನ ನಂಬರುಗಳಿಗೆ ಫೋನ್ ಮಾಡಿದರೆ ಶುಲ್ಕ ಇರುವುದಿಲ್ಲ. ಹಾಗಾಗಿ ನಿಮ್ಮ ಕುಟುಂಬದವರಲ್ಲಿ ಯಾರಿಗೆ ಹೆಚ್ಚು ಕರೆ ಮಾಡುತ್ತೀರಿ, ಅದನ್ನು ನೋಡಿಕೊಂಡು ಪ್ಲಾನ್ ತೆಗೆದುಕೊಳ್ಳಬಹುದು.

4) ಅನಿಯಮಿತ SMS ಪ್ಲಾನ್ - ನೀವು ದಿನಕ್ಕೆ ನೂರಕ್ಕಿಂತ ಹೆಚ್ಚು ಮೆಸೇಜುಗಳನ್ನು ಕಳುಹಿಸುತ್ತಿದ್ದರೆ ಅನ್ಲಿಮಿಟೆಡ್ sms ಪ್ಲಾನ್ ಅನ್ನು ತೆಗೆದುಕೊಳ್ಳಿ.

ಸದ್ಯಕ್ಕೆ ನೀವು ಉಪಯೋಗಿಸುವ ಮೊಬೈಲ್ ನೆಟ್ವರ್ಕ್ ನಲ್ಲಿ ಈ ಮೇಲಿನ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿಲ್ಲದಿದ್ದರೆ, ಮೊಬೈಲ್ ಪೋರ್ಟ ಬಲಿಟಿ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot