ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿದೆ ರೆಡ್ ಮಿಯ ಮತ್ತೊಂದು ಸ್ಮಾರ್ಟ್ ಪೋನ್..!

By Avinash
|

ಚೀನಾ ಮೂಲದ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿ ಕ್ಷಿಯೋಮಿ ಭಾರತದಲ್ಲಿ ಮತ್ತೊಂದದು ಸ್ಮಾರ್ಟ್ ಪೋನ್ ಬಿಡುಗಡೆಗೆ ತಯಾರಿ ನಡೆಸಿದೆ. ಕ್ಷಿಯೋಮಿಯ ಬಹು ನಿರೀಕ್ಷಿತ ರೆಡ್ ಮಿ ವೈ 2 Redmi Y2 ಇಂದು ನವದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಮೂಲಗಳ ಪ್ರಕಾರ ರೆಡ್ ಮಿ ವೈ ಸ್ಮಾರ್ಟ್ ಪೋನ್ 2 ಚೀನಾದಲ್ಲಿ ವರ್ಷಾರಂಭದಲ್ಲಿ ಬಿಡುಗಡೆಗೊಂಡಿರುವ ರೆಡ್ ಮಿ ಎಸ್ 2 ಸ್ಮಾರ್ಟ್ ಪೋನ್ ನ ರಿಬ್ರಾಂಡ್ ಎನ್ನಲಾಗಿದ್ದು, ಸ್ಮಾರ್ಟ್ ಪೋನ್ ಪ್ರಿಯರು ಹೊಸ ಹ್ಯಾಂಡ್ ಸೆಟ್ ಬಿಡುಗಡೆಗೆ ಕುತೂಹಲದಿಂದ ಕಾಯ್ತಿದ್ದಾರೆ.

ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿದೆ ರೆಡ್ ಮಿಯ ಮತ್ತೊಂದು ಸ್ಮಾರ್ಟ್ ಪೋನ್..!

ಇಂದು ಬಿಡುಗಡೆಯಾಗುತ್ತಿರುವ ರೆಡ್ ಮಿ ವೈ 2 ಸ್ಮಾರ್ಟ್ ಪೋನ್ ಅಮೆಜಾನ್ ಎಕ್ಸ್ ಕ್ಲೂಸಿವ್ ಹ್ಯಾಂಡ್ ಸೆಟ್ ಆಗಿರುವುದರಿಂದ ಅಮೆಜಾನ್ ತನ್ನ ವೆಬ್ ಸೈಟ್ ನಲ್ಲಿ ರೆಡ್ ಮಿ ವೈ 2 ಸ್ಮಾರ್ಟ್ ಪೋನ್ ಫೀಚರ್ಸ್ ಪಟ್ಟಿ ಮಾಡಿದೆ. ಅಮೆಜಾನ್ ಮೂಲಗಳ ಪ್ರಕಾರ ಜೂನ್ 7ರ ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿರುವ ಸ್ಮಾರ್ಟ್ ಪೋನ್ ಸ್ನಾಪ್ ಡ್ರಾಗನ್ ಪ್ರೊಸೆಸರ್, LED ಸೆಲ್ಫಿ ಲೈಟ್, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.

ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿದೆ ರೆಡ್ ಮಿಯ ಮತ್ತೊಂದು ಸ್ಮಾರ್ಟ್ ಪೋನ್..!

ಕಳೆದ ವರ್ಷ ಬಿಡುಗಡೆಯಾಗಿದ್ದ LED ಸೆಲ್ಫಿ ಲೈಟ್ ಒಳಗೊಂಡ ಸೆಲ್ಫಿ ಕೇಂದ್ರಿತ ಫೀಚರ್ ಗಳನ್ನು ಹೊಂದಿದ್ದ ರೆಡ್ ಮಿ ವೈ 1ರ ಯಶಸ್ಸಿನ ಮುಂದುವರಿಕೆ ರೆಡ್ ಮಿ ವೈ2 ಸ್ಮಾರ್ಟ್ ಪೋನ್ ಆಗಿದೆ. ರೆಡ್ ಮಿ ವೈ 2 ಎರಡು ವಿಧಗಳಲ್ಲಿ ಸಿಗಲಿದ್ದು, 3GB RAM + 32GB ಇನ್ ಬ್ಯುಲ್ಟ್ ಮೆಮೊರಿ ಮತ್ತು 4GB RAM + 64GB ಇನ್ ಬ್ಯುಲ್ಟ್ ಮೆಮೊರಿ ಆಯ್ಕೆಗಳಲ್ಲಿ ಸಿಗಲಿದ್ದು, 9,999 ರೂ.ಗಳಿಂದ 11,999 ರೂ.ವರೆಗಿನ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಮೂಲಗಳ ಪ್ರಕಾರ ಹೊಸ ರೆಡ್ ಮಿ ವೈ2 ಸ್ಮಾರ್ಟ್ ಪೋನ್ ಡಾರ್ಕ್ ಗ್ರೇ, ಗೋಲ್ಡ್, ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿದೆ ರೆಡ್ ಮಿಯ ಮತ್ತೊಂದು ಸ್ಮಾರ್ಟ್ ಪೋನ್..!
Riversong Jelly Kids GPS tracker hands-on - GIZBOT KANNADA

ಮೂಲಗಳ ಪ್ರಕಾರ Redmi Y2 ಸ್ಮಾರ್ಟ್ ಪೋನ್ Redmi S2ನ ಫೀಚರ್ ಗಳನ್ನು ಹೊಂದಿದೆಯಂತೆ. ನ್ಯಾನೋ ಡ್ಯುಯಲ್ ಸಿಮ್, Android ಆಧಾರಿತ MIUI 9, ಸ್ನಾಪ್ ಡ್ರಾಗನ್ 625 ಪ್ರೊಸೆಸೆರ್ ನಿಂದ ಕಾರ್ಯನಿರ್ವಹಿಸಲಿದೆ. 5.99 ಇಂಚ್ HD+ (720x1440 ಪಿಕ್ಸೆಲ್ಸ್) 70.8 % NTSC ಬಣ್ಣದ ಹರವು ಹೊಂದಿರುವ ಡಿಸ್ ಪ್ಲೇ ಹೊಂದಿದರಲಿದೆ. ಹಿಂಬದಿಯಲ್ಲಿ 12MP + 5MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ, 16MP ಫ್ರಂಟ್ ಕ್ಯಾಮೆರಾ, AI ಪೋರ್ಟರೆಟ್ ಮೊಡ್, AI ಸ್ಮಾರ್ಟ್ ಬ್ಯೂಟಿ, Front HDR, ಮತ್ತು ಫೇಸ್ ಅನ್ ಲಾಕ್, ಸಾಫ್ಟ್ ಲೈಟ್ ಫ್ಲಾಷ್ ಮಾಡ್ಯುಲ್ ಹೊಂದಿದ್ದು, ಮೈಕ್ರೋSD ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಬಹುದಾಗಿದೆ. 4G VoLTE, ವೈ-ಫೈ 802.11 b/g/n, ಬ್ಲುಟೂತ್ v4.2, GPS/ A-GPS, 3.5mm ಹೆಡ್ ಪೋನ್ ಜಾಕ್, ಮೈಕ್ರೋ USB ಪೋರ್ಟ್ ಮತ್ತಉ 3080mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ.

Best Mobiles in India

English summary
Today Xiaomi Redmi launch another smartphone in India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X