Subscribe to Gizbot

ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವಿರುವ ಸ್ಮಾರ್ಟ್‌ಫೋನ್‌ಗಳು

Written By:

ಫೋನ್‌ಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಜೊತೆಗೆ ಫೋನ್‌ನ ಕ್ಯಾಮೆರಾದ ಕಡೆಗೂ ಮುಖ ಮಾಡಬೇಕು. ಮನಕ್ಕೆ ಮುದ ನೀಡುವ ಕ್ಯಾಮೆರಾ ನಿಮ್ಮ ಫೋನ್ ಅಲ್ಲಿ ಇಲ್ಲ ಎಂದಾದಲ್ಲಿ ಅದು ವ್ಯರ್ಥ ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಮನಸನ್ನು ಕದಿಯುವ 10 ಕ್ಯಾಮೆರಾ ಫೋನ್‌ಗಳೊಂದಿಗೆ ನಾವು ಬಂದಿದ್ದು ಖರೀದಿಸುವ ಉತ್ಸಾಹವನ್ನು ಈ ಫೋನ್‌ಗಳು ನಿಮ್ಮಲ್ಲಿ ಉಂಟುಮಾಡುವುದು ಸಹಜವಾಗಿದೆ.

ಇದನ್ನೂ ಓದಿ: ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 6,999

ಹುವಾಯಿ ಹೋನರ್ ಹೋಲಿ

ಕ್ವಾಡ್ ಕೋರ್ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದ್ದು 16ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಇದು ಬಂದಿದೆ. ಇದು 5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 8ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಮತ್ತು 2ಎಮ್‌ಪಿ ದ್ವಿತೀಯ ಕ್ಯಾಮೆರಾದೊಂದಿಗೆ ಬಂದಿದೆ.

ಖರೀದಿ ಬೆಲೆ ರೂ: 6,000

ಶ್ಯೋಮಿ ರೆಡ್ಮೀ 1ಎಸ್

ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಆಧಾರಿತ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದ್ದು ರಿಯರ್ ಕ್ಯಾಮೆರಾ 8 ಎಮ್‌ಪಿ ಮತ್ತು ಮುಂಭಾಗ ಕ್ಯಾಮೆರಾ 1.6 ಎಮ್‌ಪಿ ಆಗಿದೆ.

ಖರೀದಿ ಬೆಲೆ ರೂ: 6,999

ಲೆನೆವೊ ಎ6000

ಅತ್ಯಾಧುನಿಕ ಬಜೆಟ್ 4ಜಿ ಸ್ಮಾರ್ಟ್‌ಫೋನ್ ಇದಾಗಿದ್ದು ಹಿಂಭಾಗ ಕ್ಯಾಮೆರಾ 8ಎಮ್‌ಪಿ ಮತ್ತು ಮುಂಭಾಗ ಕ್ಯಾಮೆರಾ 2 ಎಮ್‌ಪಿ ಆಗಿದೆ.

ಖರೀದಿ ಬೆಲೆ ರೂ: 10,499

ಅಸೂಸ್ ಜೆನ್‌ಪೋನ್ 5A501cg

ಜೆನ್‌ಪೋನ್ 5 ನ ರಿಯರ್ ಕ್ಯಾಮೆರಾ 8 ಎಮ್‌ಪಿ ಆಗಿದ್ದು ಮುಂಭಾಗದಲ್ಲಿ 2ಎಮ್‌ಪಿಯೊಂದಿಗೆ ಬಂದಿದೆ. ಕ್ವಾಲ್‌ಕಾಮ್ ಸೋಕ್ ಫೋನ್‌ನಲ್ಲಿದ್ದು ಇದು 1.6GHZ ಇಂಟೆಲ್ ಆಟಮ್ Z2560 ಪ್ರೊಸೆಸರ್ ಜೊತೆಗೆ ಇಂಟೆಲ್ ಹೈಪರ್ ತ್ರೆಡಿಂಗ್ ತಂತ್ರಜ್ಞಾನದೊಂದಿಗೆ ಬಂದಿದೆ.

ಖರೀದಿ ಬೆಲೆ ರೂ: 8,999

ಮೈಕ್ರೋಮ್ಯಾಕ್ಸ್ ವೈಯು ಯುರೇಕಾ

ಮೈಕ್ರೋಮ್ಯಾಕ್ಸ್‌ನ ಕಿಲ್ಲರ್ ಫೋನ್ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮೈಕ್ರೋಮ್ಯಾಕ್ಸ್ ವೈಯು ಯುರೇಕಾ 13ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5ಎಮ್‌ಪಿ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದೆ. ಸಿನೋಜಿನ್ ಮೋಡ್ ಆಧಾರಿತ ಸ್ಮಾರ್ಟ್‌ಫೋನ್ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದಾಗಿದೆ.

ಖರೀದಿ ಬೆಲೆ ರೂ: 11,999

ಅಲಾಕ್ಟೆಲ್ ಒನ್ ಟಚ್ ಫ್ಲ್ಯಾಶ್

ಈ ಓಕ್ಟಾ ಕೋರ್ ಸ್ಮಾರ್ಟ್‌ಫೋನ್, 5.5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 3200mAh ಬ್ಯಾಟರಿಯನ್ನು ಪಡೆದುಕೊಂಡಿದೆ. ಒನ್ ಟಚ್ ಫ್ಲ್ಯಾಶ್ ಫೋನ್‌ನಲ್ಲಿದ್ದು 13ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5ಎಮ್‌ಪಿ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದೆ.

ಖರೀದಿ ಬೆಲೆ ರೂ: 8,939

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೊ A250

ಮೈಕ್ರೋಮ್ಯಾಕ್ಸ್‌ನ ಕಿಲ್ಲರ್ ಫೋನ್ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮೈಕ್ರೋಮ್ಯಾಕ್ಸ್ ವೈಯು ಯುರೇಕಾ 13ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5ಎಮ್‌ಪಿ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದೆ. ಸಿನೋಜಿನ್ ಮೋಡ್ ಆಧಾರಿತ ಸ್ಮಾರ್ಟ್‌ಫೋನ್ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದಾಗಿದೆ.

ಖರೀದಿ ಬೆಲೆ ರೂ: 9,999

ಕ್ಸೋಲೋ ಕ್ಯು1020-ಕ್ಯು1020

ಸ್ಟೈಲಿಶ್ ಬಜೆಟ್ ಫೋನ್ ಇದಾಗಿದ್ದು ಮರದ ಕವರ್ ಅನ್ನು ಫೋನ್ ಹಿಂಭಾಗದಲ್ಲಿ ಹೊಂದಿದೆ. ಮೀಡಿಯಾ ಟೆಕ್ MT6582 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಫೋನ್‌ನ ರಿಯರ್ ಕ್ಯಾಮೆರಾ 13 ಎಮ್‌ಪಿ ಆಗಿದ್ದು ಮುಂಭಾಗ ಕ್ಯಾಮೆರಾ 2ಎಮ್‌ಪಿ ಆಗಿದೆ.

ಖರೀದಿ ಬೆಲೆ ರೂ: 5,499

ಕಾರ್ಬನ್ ಟೈಟಾನಿಯಮ್ ಎಸ್9

ಇನ್ನೊಂದು ಕ್ವಾಡ್ ಕೋರ್ ಫೋನ್ ಇದಾಗಿದ್ದು 720ಪಿ ಓಜಿಎಸ್ ಡಿಸ್‌ಪ್ಲೇ ಇದರಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಫೋನ್‌ನಲ್ಲಿದ್ದು ಪ್ರಾಥಮಿಕ ಕ್ಯಾಮೆರಾ 13ಎಮ್‌ಪಿ ಹಾಗೂ ಮುಂಭಾಗ ಕ್ಯಾಮೆರಾ 5ಎಮ್‌ಪಿ ಆಗಿದೆ.

ಖರೀದಿ ಬೆಲೆ ರೂ: 11,499

ಶ್ಯೋಮಿ ರೆಡ್ಮೀ ನೋಟ್ 4ಜಿ

ಇದೊಂದು ಬಜೆಟ್ ಫ್ಯಾಬ್ಲೆಟ್ ಫೋನ್ ಆಗಿದ್ದು 4ಜಿ ಇಷ್ಟಪಡುವವರಿಗಾಗಿ ದೊಡ್ಡ ಪರದೆಯೊಂದಿಗೆ ಬಂದಿದೆ. ಈ ಕ್ವಾಡ್ ಕೋರ್ ಸ್ಮಾರ್ಟ್‌ಫೋನ್ a3100mAh ಬ್ಯಾಟರಿಯೊಂದಿಗೆ ಬಂದಿದ್ದು, 13ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5ಎಮ್‌ಪಿ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here is our pick of 10 best smartphones which giving good camera quality.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot