ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 10 (30K) ಸ್ಮಾರ್ಟ್‌ಫೋನ್‌ಗಳ ಲೀಸ್ಟ್ ಇಲ್ಲಿದೆ!!
ಜಗತ್ತು ಈಗಾಗಲೇ ಸ್ಮಾರ್ಟ್ ಆಗುತ್ತಿದ್ದು, ಜನರೆಲ್ಲ ಸ್ಮಾರ್ಟ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಜನರ ಸ್ಮಾರ್ಟ್ ಆಲೋಚನೆಗಳನ್ನು ಬಹಳಷ್ಟು ಗ್ಯಾಡ್ಜೆಟ್‍ಗಳು ನೀರೆರೆದು ಪೋಷಿಸುತ್ತಿವೆ. ಗ್ಯಾಡ್ಜೆಟ್‍ಗಳಲ್ಲಿ ಪ್ರಮುಖವಾಗಿ ಮನುಷ್ಯನ ಜೊತೆ ಬೆರೆತು ಹೋಗಿರುವುದು ಮೊಬೈಲ್. ಜಾವಾ, ಸಿಂಬೇನ್ ಮೊಬೈಲ್‍ಗಳಿಂದಿಡಿದು ಅಂಗೈಯಲ್ಲಿಯೇ ಜಗತ್ತನ್ನು ತೋರಿಸುವ ಆಯಂಡ್ರಾಯ್ಡ್, ವಿಂಡೋಸ್, ಆಪಲ್ ಸ್ಮಾರ್ಟ್‍ಪೋನ್‍ಗಳವರೆಗೂ ಮೊಬೈಲ್ ಕ್ಷೇತ್ರ ಬೆಳೆದಿದ್ದು, ಮೊಬೈಲ್ ಪ್ರಿಯರನ್ನು ಕೈ ಬಿಸಿ ಕರೆಯುತ್ತಿದೆ.
ಭಾರತದಲ್ಲಂತೂ ಸ್ಮಾರ್ಟ್‍ಪೋನ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂದಾಜಿನ ಪ್ರಕಾರ 2018ರ ಅಂತ್ಯದ ವೇಳೆಗೆ ಈ ಸಂಖ್ಯೆ 337 ಮಿಲಿಯನ್ ತಲುಪುವ ಸಾಧ್ಯತೆಯಿದೆ. ಸ್ಮಾರ್ಟ್‍ಪೋನ್ ಮಾರುಕಟ್ಟೆಯಲ್ಲಿ ಸ್ಯಾಮಸಂಗ್, ನೋಕಿಯಾ, ಲೆನೋವೋ, ಎಂಐ, ಮೊಟೋ, ಒನ್+, ವಿವೋ, ಒಪ್ಪೋ, ಮೈಕ್ರೋಮ್ಯಾಕ್ಸ್, ಕಾರ್ಬನ್‍ನಂತಹ ಮುಂತಾದ ಕಂಪನಿಗಳು ತಮ್ಮ ಅಧಿಪತ್ಯ ಸ್ಥಾಪಿಸಿ ಗ್ರಾಹಕರಿಗೆ ಸೇವೆ ನೀಡುತ್ತಿವೆ.

ಹಾಗಾದ್ರೇ ಭಾರತದಲ್ಲಿ ಜನರ ಮೆಚ್ಚುಗೆ ಗಳಿಸಿರುವ ಟಾಪ್ 10 ಸ್ಮಾರ್ಟ್‍ಪೋನ್‍ಗಳನ್ನು ನೋಡುವುದಾದರೆ, ಒಂದಕ್ಕೊಂದು ಮೀರಿಸುವ ಆಯ್ಕೆಗಳು ಎಲ್ಲ ಮೊಬೈಲ್‍ಗಳಲ್ಲಿವೆ. ಅವುಗಳ ಫೀಚರ್ಸ್, ಬೆಲೆ, ವೇಗ ಮತ್ತು ಮಾರಾಟವಾದ ಪ್ರಮಾಣದಲ್ಲಿ ಸ್ಮಾರ್ಟ್‍ಪೋನ್‍ಗಳನ್ನು ವಿಂಗಡಿಸಬಹುದು. 2 ಸಾವಿರದಿಂದ ಲಕ್ಷ ರೂ.ಗೂ ಮೀರಿದ ಬೆಲೆಯನ್ನು ಸ್ಮಾರ್ಟ್‍ಪೋನ್‌ಗಳು ಹೊಂದಿದ್ದು, 30 ಸಾವಿರ ರೂ. ಆಸುಪಾಸಿನ ಮೌಲ್ಯವುಳ್ಳ ಮೊಬೈಲ್‍ಗಳಲ್ಲಿ ಯಾವ್ಯಾವ ಟಾಪ್ ಟೆನ್ ಸ್ಮಾರ್ಟ್‍ಪೋನ್‍ಗಳಲ್ಲಿ ಸ್ಥಾನ ಪಡೆದಿದ್ದಾವೆ ಎಂಬ ಕುತೂಹಲವಿದೆಯೇ, ಹಾಗಾದ್ರೆ ಮುಂದೆ ಓದಿ.

10. ಹಾನರ್ 8 ಪ್ರೊ Honour 8 Pro
* 6 ಜಿಬಿ RAM | 128 ಜಿಬಿ ROM | 128 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 5.7 ಇಂಚಿನ ಕ್ವಾಡ್ ಹೆಚ್‍ಡಿ ಡಿಸ್ಪ್ಲೇ, 1440p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ) = 12 ಎಂಪಿ + 12 ಎಂಪಿ
* ಫ್ರಂಟ್ ಕ್ಯಾಮೆರಾ: 8 ಎಂಪಿ
* 4000mAh ಬ್ಯಾಟರಿ, ಡ್ಯುಯಲ್ ಸಿಮ್
* ಕಪ್ಪು, ನೀಲಿ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 29999

9. ಶಿಯೋಮಿ ಮಿ ಮಿಕ್ಸ್ ( MI MIX 2)
* 6 ಜಿಬಿ RAM | 128 ಜಿಬಿ ROM
* 6 ಇಂಚು ಪೂರ್ಣ ಹೆಚ್ಡಿ+ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ: 12MP
* ಫ್ರಂಟ್ ಕ್ಯಾಮೆರಾ: 5 ಎಂಪಿ
* 3400mAh ಬ್ಯಾಟರಿ, ಡ್ಯುಯಲ್ ಸಿಮ್
* ಕಪ್ಪು, ಬಿಳಿ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 29999

8. ನೋಕಿಯಾ 8 Nokia 8
* 4 ಜಿಬಿ RAM | 64 ಜಿಬಿ ROM | 256 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 5.3 ಇಂಚಿನ ಕ್ವಾಡ್ ಹೆಚ್‍ಡಿ ಡಿಸ್ಪ್ಲೇ, 1440p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ) =13MP + 13MP
* ಫ್ರಂಟ್ ಕ್ಯಾಮೆರಾ- 13 ಎಂಪಿ
* 3090mAh ಬ್ಯಾಟರಿ, ಡ್ಯುಯಲ್ ಸಿಮ್
* ಬ್ಲೂ, ಕಾಪರ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 28,998

7. ಮೊಟೊರೊಲ ಮೊಟೊ ಎಕ್ಸ್ 4 Motorola Moto X4
* 4 ಜಿಬಿ RAM | 64 ಜಿಬಿ ROM | 2048 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 5.2 ಇಂಚಿನ ಪೂರ್ಣ ಹೆಚ್ಡಿ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 12MP + 8MP
* ಫ್ರಂಟ್ ಕ್ಯಾಮೆರಾ- 16 ಎಂಪಿ
* 3000mAh ಬ್ಯಾಟರಿ, ಡ್ಯುಯಲ್ ಸಿಮ್
* ಸೂಪರ್ ಬ್ಲಾಕ್, ಸ್ಟರ್ಲಿಂಗ್ ಬ್ಲೂ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 22,999

6. ಹಾನರ್ ವೀವ್ 10 Honour View 10
* 6 ಜಿಬಿ RAM | 128 ಜಿಬಿ ROM | 256 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 5.99 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 20 ಎಂಪಿ + 16 ಎಂಪಿ
* ಫ್ರಂಟ್ ಕ್ಯಾಮೆರಾ-13 ಎಂಪಿ
* 3750mAh ಬ್ಯಾಟರಿ, ಡ್ಯುಯಲ್ ಸಿಮ್
* ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 29,999

5. ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ8 ಪ್ರೊ Samsung Galaxy A8 Pro
*6 ಜಿಬಿ RAM | 64 ಜಿಬಿ ROM | 256 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ
* 6 ಇಂಚು ಪೂರ್ಣ ಹೆಚ್ಡಿ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ-16MP
* ಫ್ರಂಟ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 16 MP + 8 MP
* 3500mAh ಬ್ಯಾಟರಿ, ಡ್ಯುಯಲ್ ಸಿಮ್
* ಕಪ್ಪು, ಗೋಲ್ಡ್ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 32,490

4. ವಿವೊ ವಿ9 Vivo V9
* 4 ಜಿಬಿ RAM | 64 ಜಿಬಿ ROM | 256 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 6.3 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 16 MP + 5 MP
* ಫ್ರಂಟ್ ಕ್ಯಾಮೆರಾ: 24 MP
* 3260mAh ಬ್ಯಾಟರಿ, ಡ್ಯುಯಲ್ ಸಿಮ್
* ಚಿನ್ನ, ಕಪ್ಪು ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 22,990

3. ಒಪ್ಪೊ ಎಫ್ 7 Oppo F7
*4 ಜಿಬಿ RAM | 64 ಜಿಬಿ ROM | 256 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೋರಿ
* 6.2 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ, 1080p
* ಬ್ಯಾಕ್ ಕ್ಯಾಮೆರಾ: 16MP
* ಫ್ರಂಟ್ ಕ್ಯಾಮೆರಾ: 25MP
* 3400mAh ಬ್ಯಾಟರಿ, ಡ್ಯುಯಲ್ ಸಿಮ್
* ಕಪ್ಪು, ಕೆಂಪು, ಸಿಲ್ವರ್ ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 21,990


2. ನೋಕಿಯಾ 7 ಪ್ಲಸ್ Nokia 7 Plus
* 4 ಜಿಬಿ RAM | 64 ಜಿಬಿ ROM | 256 ಜಿಬಿವರೆಗೆ
* 6 ಇಂಚು ಪೂರ್ಣ ಹೆಚ್ಡಿ ಡಿಸ್‍ಪ್ಲೇ, 1080p
* ಹಿಂಬದಿ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 12MP + 13MP
* ಫ್ರಂಟ್ ಕ್ಯಾಮೆರಾ: 16MP
* 3800mAh ಬ್ಯಾಟರಿ, ಡ್ಯುಯಲ್ ಸಿಮ್
* ಕಪ್ಪು ಬಣ್ಣದಲ್ಲಿ ಲಭ್ಯ
* ಬೆಲೆ ₹25,999

1.ಹುವಾವೆ ಹಾನರ್ 10 (Huawei Honour 10)
* 6 ಜಿಬಿ RAM | 128 ಜಿಬಿ ROM
* 5.8 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ 1080p
* ಬ್ಯಾಕ್ ಕ್ಯಾಮೆರಾ (ಡ್ಯುಯಲ್ ಕ್ಯಾಮೆರಾ)= 16 MP + 24 MP
* ಫ್ರಂಟ್ ಕ್ಯಾಮೆರಾ- 24 MP
* 3400mAh ಬ್ಯಾಟರಿ, ಡ್ಯುಯಲ್ ಸಿಮ್
* ಮಿಡ್ನೈಟ್ ಬ್ಲ್ಯಾಕ್, ಫ್ಯಾಂಟಮ್ ಬ್ಲೂ, ಬಣ್ಣಗಳಲ್ಲಿ ಲಭ್ಯ
* ಬೆಲೆ ₹ 32,999


Click it and Unblock the Notifications








