Home
ಮೊಬೈಲ್

ಇದೇ ನಂ.1: ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಮೊಬೈಲ್‌ಗಳಿವು! ಇಲ್ಲಿದೆ ಪಟ್ಟಿ

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು (Smartphones) ಜನರ ಬದುಕಿನ ಭಾಗವಾಗಿದೆ. ಎಲ್ಲಾ ಕೆಲಸ ಕಾರ್ಯಗಳಿಗೂ ಮೊಬೈಲ್ ಬೇಕೇಬೇಕು. ಇದೇ ಕಾರಣಕ್ಕೆ ವಿಶ್ವದಾದ್ಯಂತ ಮೊಬೈಲ್‌ಗಳ ಮಾರಾಟ ಹೆಚ್ಚಾಗಿದೆ. ಹೌದು, ದಿನದಿಂದ ದಿನಕ್ಕೆ ಹೊಸ ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಅದರಲ್ಲೂ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಬಹುತೇಕ ಜನರು ಕಡಿಮೆ ಬೆಲೆಯಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. ಈ ಲೇಖನದಲ್ಲಿ ವಿಶ್ವದಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ (Top 10 Selling Smartphones in the World) ಬಗ್ಗೆ ತಿಳಿಯೋಣ ಬನ್ನಿ.

ಹೌದು, ಇತ್ತೀಚೆಗೆ ಕೌಂಟರ್ ಪಾಯಿಂಟ್ ರಿಸರ್ಚ್ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ಪೈಕಿ ಯಾವ ಫೋನ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ? ಎರಡನೇ ಸ್ಥಾನದಲ್ಲಿ ಯಾವ ಮೊಬೈಲ್‌ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ? ಮತ್ತು ಈ ಪಟ್ಟಿಯಲ್ಲಿ ಯಾವೆಲ್ಲಾ ಫೋನ್‌ಗಳು ಕಾಣಿಸಿಕೊಂಡಿವೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಮೊಬೈಲ್‌ಗಳಿವು: ಯಾವುದು ನಂ.1? ಇಲ್ಲಿದೆ ಪಟ್ಟಿ

ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿವು!

iPhone 15ಗೆ ಅಗ್ರಸ್ಥಾನ

ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯ ಪ್ರಕಾರ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಐಫೋನ್‌ 15 (iPhone 15) ಅಗ್ರಸ್ಥಾನದಲ್ಲಿದೆ. ಇದರ ನಂತರ ಐಫೋನ್ 15 ಪ್ರೊ (iPhone 15 Pro) ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ (iPhone 15 Pro Max) ಸ್ಥಾನವನ್ನು ಪಡೆದಿದೆ. ವಿಶೇಷವೆಂದರೆ, 2022ರಲ್ಲಿ ಬಿಡುಗಡೆಯಾದ ಐಫೋನ್ 14 (iPhone 14) ಸಹ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ 5 ಸ್ಯಾಮ್‌ಸಂಗ್‌ ಫೋನ್‌ಗಳು

ಈ ಪಟ್ಟಿಯಲ್ಲಿ ಐಫೋನ್‌ ಜೊತೆಗೆ ಟೆಕ್ ದೈತ್ಯ ಸ್ಯಾಮ್‌ಸಂಗ್ ಕೂಡ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದ ಟಾಪ್ 10 ಹೆಚ್ಚು ಮಾರಾಟವಾಗುವ ಫೋನ್‌ಗಳ ಪಟ್ಟಿಯಲ್ಲಿ 5 ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿವೆ. ಇವುಗಳಲ್ಲಿ 4 ಮೊಬೈಲ್‌ಗಳು ಗ್ಯಾಲಕ್ಸಿ 'A' (Galaxy A) ಸರಣಿಗೆ ಸೇರಿವೆ. ಅವುಗಳೆಂದರೆ.. Samsung Galaxy A15 4G, Samsung Galaxy A15 5G, Samsung Galaxy A05, Samsung Galaxy A35 ಮೊಬೈಲ್‌ಗಳು. ಇದರೊಂದಿಗೆ, Samsung Galaxy S24 ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಫೋನ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ. ಇದು ಗ್ಯಾಲಕ್ಸಿ 'S' (Galaxy S) ಸರಣಿಯ ಸ್ಮಾರ್ಟ್‌ಫೋನ್ ಆಗಿದೆ.

ಸ್ಯಾಮ್‌ಸಂಗ್ ಹೊರತಾಗಿ ಶಿಯೋಮಿಯ (Xiaomi) ರೆಡ್ಮಿ ಮೊಬೈಲ್ ಸಹ ಇದರಲ್ಲಿದೆ. ಪಟ್ಟಿಯಲ್ಲಿ ರೆಡ್ಮಿ 13C (Redmi 13C) ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಫೋನ್ 2023ರ ಡಿಸೆಂಬರ್ ತಿಂಗಳಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿತ್ತು ಎನ್ನುವುದು ವಿಶೇಷ.

ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಮೊಬೈಲ್‌ಗಳಿವು: ಯಾವುದು ನಂ.1? ಇಲ್ಲಿದೆ ಪಟ್ಟಿ

ಇವು ವಿಶ್ವದ ಟಾಪ್ 10 ಸ್ಮಾರ್ಟ್‌ಫೋನ್‌ಗಳು

1. iPhone 15
2. iPhone 15 Pro Max
3. iPhone 15 Pro
4. Samsung Galaxy A15 4G
5. Samsung Galaxy A15 5G
6. Samsung Galaxy A05
7. Redmi 13C 4G
8. Samsung Galaxy A35
9. iPhone 14
10. Samsung Galaxy S24

ಈ ಪಟ್ಟಿಯ ಮೂಲಕ ವಿಶ್ವದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ಪ್ರಾಬಲ್ಯ ಮುಂದುವರಿದಿರುವುದು ಸ್ಪಷ್ಟವಾಗಿದೆ. ಜೊತೆಗೆ, ಶಿಯೋಮಿಯ ರೆಡ್ಮಿ 13C (Redmi 13C) ನಂತಹ ಬಜೆಟ್ ಸ್ನೇಹಿ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Best Mobiles in India

English summary
Top 10 best selling smartphones in the world: iPhone 15, Samsung Galaxy A15 and more: know list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+