Home
ಮೊಬೈಲ್

Q2 2025: ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್‌ಫೋನ್‌ಗಳು ಇವು!

ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದೆಯೇ? ಹಾಗಿದ್ರೆ, 2025ರ ಎರಡನೇ ತ್ರೈಮಾಸಿಕದ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟ ವರದಿ ನಿಮಗೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ, ಆಪಲ್ ಮತ್ತೊಮ್ಮೆ ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. 2025ರ ಎರಡನೇ ತ್ರೈಮಾಸಿಕದಲ್ಲೂ ಐಫೋನ್ 16 ಸರಣಿಯ ಅಬ್ಬರ ಮುಂದುವರಿದಿದ್ದು, ಈ ಸರಣಿಯ ಫೋನ್‌ಗಳು ಮಾರಾಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ.!

ವರದಿಯ ಪ್ರಕಾರ, ಕಳೆದ ತ್ರೈಮಾಸಿಕದಂತೆ, 2025ರ ಎರಡನೇ ತ್ರೈಮಾಸಿಕದಲ್ಲಿಯೂ ಐಫೋನ್ 16 ಜಗತ್ತಿನ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಮಾತ್ರವಲ್ಲದೆ, ಅಗ್ರ 5 ಸ್ಥಾನಗಳಲ್ಲಿ ಐಫೋನ್ 16, ಐಫೋನ್ 16 ಪ್ರೊ ಮ್ಯಾಕ್ಸ್, ಮತ್ತು ಐಫೋನ್ 16 ಪ್ರೊ ಸೇರಿದಂತೆ ಮೂರು ಆಪಲ್ ಫೋನ್‌ಗಳು ಸ್ಥಾನ ಪಡೆದಿವೆ. ವಿಶೇಷವಾಗಿ, ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಐಫೋನ್ 16e, ಇದೇ ಮೊದಲ ಬಾರಿಗೆ ಟಾಪ್-10 ಪಟ್ಟಿಗೆ ಪ್ರವೇಶಿಸಿದ್ದು, ಜಪಾನ್ ಮತ್ತು ಅಮೆರಿಕಾದಲ್ಲಿ ಇದರ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ.

ಐಫೋನ್‌ಗಳಿಗೆ ಪೈಪೋಟಿ ನೀಡುತ್ತಿರುವ ಸ್ಯಾಮ್‌ಸಂಗ್, ತನ್ನ ಮಧ್ಯಮ ಶ್ರೇಣಿಯ ಫೋನ್‌ಗಳ ಮೂಲಕ ಉತ್ತಮ ಮಾರುಕಟ್ಟೆಯನ್ನು ಗಳಿಸಿದೆ. ಸ್ಯಾಮ್‌ಸಂಗ್ ಕಂಪೆನಿಯ Galaxy A16 5G ಮತ್ತು Galaxy A06 4G ಫೋನ್‌ಗಳು ಅಗ್ರ 5 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಆದರೆ, ಸ್ಯಾಮ್‌ಸಂಗ್‌ನ ಪ್ರೀಮಿಯಂ ಫೋನ್ ಆದ Galaxy S25 Ultra ಫೋನ್, ಜನವರಿಯಲ್ಲಿ ಬಿಡುಗಡೆಯಾಗಿದ್ದರೂ, Q1 ನಲ್ಲಿದ್ದ 7ನೇ ಸ್ಥಾನದಿಂದ ಒಂದು ಹಂತ ಕೆಳಗೆ ಜಾರಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Q2 2025: ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್‌ಫೋನ್‌ಗಳು ಇವು!

ಇನ್ನುಳಿದಂತೆ, ರೆಡ್ಮಿ 14C 5G ತನ್ನ ಉತ್ತಮ ಮಾರಾಟದಿಂದ 9ನೇ ಸ್ಥಾನ ಗಳಿಸಿದೆ. ಆಪಲ್‌ನ ಹಳೆಯ ಮಾದರಿಯಾದ ಐಫೋನ್ 15, ಈ ಹಿಂದೆ ಟಾಪ್-10 ಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೂ, ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ.

2025ರ ಎರಡನೇ ತ್ರೈಮಾಸಿಕ (Q2 2025) - ಟಾಪ್ 10 ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳು (ಕೌಂಟರ್‌ಪಾಯಿಂಟ್ ರಿಸರ್ಚ್ ವರದಿ)

  1. ಐಫೋನ್ 16
  2. ಐಫೋನ್ 16 ಪ್ರೊ ಮ್ಯಾಕ್ಸ್
  3. ಐಫೋನ್ 16 ಪ್ರೊ
  4. ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G
  5. ಸ್ಯಾಮ್‌ಸಂಗ್ ಗ್ಯಾಲಕ್ಸಿ A06 4G
  6. ಐಫೋನ್ 16e
  7. ಸ್ಯಾಮ್‌ಸಂಗ್ ಗ್ಯಾಲಕ್ಸಿ A16 4G
  8. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ
  9. ರೆಡ್ಮಿ 14C 5G
  10. ಐಫೋನ್ 15

ಈ ಪಟ್ಟಿಯಲ್ಲಿ ಆಪಲ್ ಐದು ಸ್ಥಾನಗಳನ್ನು ಪಡೆದಿದ್ದು, ಸ್ಯಾಮ್‌ಸಂಗ್ ನಾಲ್ಕು ಸ್ಥಾನಗಳನ್ನು ಪಡೆದಿದೆ. ಶಿಯೋಮಿ (ರೆಡ್ಮಿ 14C 5G) ಮಾತ್ರ ಒಂದು ಮಾದರಿಯಿಂದ ಪಟ್ಟಿಗೆ ಪ್ರವೇಶಿಸಿದೆ. ಈ ವರದಿಯು ಸ್ಪಷ್ಟವಾಗಿ ತೋರಿಸುವ ವಿಷಯವೆಂದರೆ, ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ಗಟ್ಟಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ, ಸ್ಯಾಮ್‌ಸಂಗ್‌ ಮತ್ತು ಶಿಯೋಮಿ ತಮ್ಮ ಮಧ್ಯಮ ಬೆಲೆಯ ಮತ್ತು ಕೈಗೆಟಕುವ ದರದ ಫೋನ್‌ಗಳ ಮೂಲಕ ಹೊಸ ಮಾರುಕಟ್ಟೆಗಳಲ್ಲಿ ತಮ್ಮ ಸ್ಪರ್ಧೆಯನ್ನು ಉಳಿಸಿಕೊಂಡಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, 2025ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ತನ್ನ ಐಫೋನ್ 16 ಸರಣಿಯೊಂದಿಗೆ ವಿಶ್ವದಾದ್ಯಂತ ಮೇಲುಗೈ ಸಾಧಿಸಿದೆ.ಈ ಮೇಲಿನ ಫೋನ್‌ಗಳಲ್ಲಿ ನಿಮ್ಮ ಆಯ್ಕೆಯ ಅಥವಾ ನೆಚ್ಚಿನ ಫೋನ್ ಯಾವುದು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
According to the Global Smartphone Model Sales Tracker by Counterpoint Research, iPhone 16 was the highest-selling smartphone worldwide for the second quarter in a row.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+