Subscribe to Gizbot

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

Written By:

ಗೂಗಲ್‌ನ ಸ್ಮಾರ್ಟ್‌ಫೋನ್ ಶ್ರೇಣಿಯಲ್ಲಿ ನೆಕ್ಸಸ್ 6 ಫೋನ್ ಮೋಟೋರೋಲಾದ ಹೊಸ ಪವಾಡ ಎಂದೆನಿಸಿದೆ. ಇದು ಗೂಗಲ್ ಫ್ಲ್ಯಾಗ್‌ಶಿಪ್ ಫೋನ್ ಆಗಿದ್ದು ಗೂಗಲ್‌ನ ಸ್ಮಾರ್ಟ್‌ಫೋನ್ ಕುಟುಂಬದಲ್ಲೇ ಮೋಟೋರೋಲಾ ನೆಕ್ಸಸ್ 6 ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಆಂಡ್ರಾಯ್ಡ್‌ಗಾಗಿ ಇಂದು ಲಭ್ಯವಿರುವ ಉತ್ತಮ ಹಾರ್ಡ್‌ವೇರ್ ತಂತ್ರಜ್ಞಾನದೊಂದಿಗೆ ಬಂದಿದ್ದು, ಹೊಸ ಆಂಡ್ರಾಯ್ಡ್ ಆವೃತ್ತಿ ಈ ಫೋನ್‌ನಲ್ಲಿದ್ದು ಅತ್ಯಾಧುನಿಕ ಒಎಸ್, ಚಿಪ್‌ಸೆಟ್, ಕ್ಯಾಮೆರಾ ಆಯ್ಕೆಗಳು ಹೀಗೆ ಮನಸೆಳೆಯುವ ವಿಶೇಷತೆಗಳೊಂದಿಗೆ ಬಂದಿದೆ. ಇಷ್ಟಲ್ಲದೆ ಇಂದಿನ ಲೇಖದನಲ್ಲಿ ಗೂಗಲ್ ನೆಕ್ಸಸ್ 6 ಅನ್ನು ನೀವು ಇನ್ನಷ್ಟು ಇಷ್ಟಪಡುವ ಕಾರಣಗಳೊಂದಿಗೆ ನಾವು ಬಂದಿದ್ದು ನಿಜಕ್ಕೂ ಇದು ನಿಮ್ಮ ಮನಸೆಳೆಯುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಟ್ಟಿರಿ ಮತ್ತು ಮುಂದುವರಿಯಿರಿ

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಆಂಡ್ರಾಯ್ಡ್ ಡಿವೈಸ್‌ಗಳಿಗೆ ನಾವು ಕಸ್ಟಮೈಸ್ ಆಗಿದ್ದು, ಅದೇ ರೀತಿ ನೆಕ್ಸಸ್ 6 ಅನ್ನು ನಾವು ಹೊಂದಿಸಬೇಕಾಗುತ್ತದೆ. ಆಂಡ್ರಾಯ್ಡ್ ಲಾಲಿಪಪ್ "ಟ್ಯಾಪ್ ಏಂಡ್ ಗೋ" ಎಂಬ ಫೀಚರ್ ಅನ್ನು ಪ್ರಸ್ತುತಪಡಿಸಿದ್ದು ಇದು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಸ್ಕ್ರೀನ್ ಪಿನ್ನಿಂಗ್ ಮತ್ತು ಗೆಸ್ಟ್ ಮೋಡ್

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಸ್ಮಾರ್ಟ್‌ಫೋನ್‌ನಲ್ಲಿ ವೈಯಕ್ತಿಕ ಮಾಹಿತಿ ಮತ್ತು ಸೂಕ್ಷ್ಮ ವಿ‍ಷಯಗಳಿರುತ್ತವೆ. ನಮಗೆ ಗೊತ್ತಿಲ್ಲದೆಯೇ ನಮ್ಮ ಫೋನ್‌ನಲ್ಲಿರುವ ಮಾಹಿತಿಗಳು ಮೂರನೇ ವ್ಯಕ್ತಿಯ ಕೈ ಸೇರುತ್ತದೆ. ಈ ಸಮಯದಲ್ಲಿ ಸ್ಕ್ರೀನ್ ಪಿನ್ನಿಂಗ್ ಎಂಬ ಫೀಚರ್ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಪಿನ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.

ಬ್ಯಾಟರಿ ಉಳಿಸುತ್ತದೆ

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ನೆಕ್ಸಸ್ 6 ಅತ್ಯದ್ಭುತವಾದ 3220mAh ಬ್ಯಾಟರಿಯನ್ನು ಒಳಗೊಂಡಿದ್ದು ಟರ್ಬೊ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಂದಿದೆ. ಇದರೊಂದಿಗೆ ಬ್ಯಾಟರಿ ಸರ್ವರ್ ಅನ್ನು ಬಳಸಿ ಹೆಚ್ಚುವರಿ ಬ್ಯಾಟರಿ ಶಕ್ತಿಯನ್ನು ನಿಮಗೆ ಪಡೆಯಬಹುದಾಗಿದೆ.

ಡೇಟಾ

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ನೆಕ್ಸಸ್ 6 ನಲ್ಲಿ ಎಷ್ಟು ಡೇಟಾ ಮುಗಿದಿದೆ ಎಂಬ ಸೂಕ್ತ ಮಾಹಿತಿ ಇದರ ಮಾಲೀಕರಿಗೆ ದೊರೆಯುತ್ತದೆ. ಕ್ವಿಕ್ ಸೆಟ್ಟಿಂಗ್‌ನಲ್ಲಿ ಡೇಟಾ ಕನೆಕ್ಷನ್‌ಗೆ ತಟ್ಟಿರಿ ಮತ್ತು ಇದರಿಂದ ಕಳೆದ ತಿಂಗಳ ಫೋನ್‌ನಲ್ಲಿ ಎಷ್ಟು ಡೇಟಾ ಖರ್ಚಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.

ಅಧಿಸೂಚನೆಗಳು

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಅಧಿಸೂಚನೆಗಳ ಮೇಲೆ ಎಲ್ಲಾ ಹಕ್ಕುಗಳನ್ನು ನೆಕ್ಸಸ್ 6 ಲಾಲಿಪಪ್ ಬಳಕೆದಾರರಿಗೆ ಒದಗಿಸುತ್ತದೆ. ಬಳಕೆದಾರ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡಿದ ಅಪ್ಲಿಕೇಶನ್‌ಗಳನ್ನು ಅವುಗಳನ್ನು ನೋಡಲು ಬಯಸಿದಾಗ ಮಾತ್ರವೇ ಅಧಿಸೂಚನೆಗಳನ್ನು ಕಳುಹಿಸಿ ಕಾನ್ಫಿಗರ್ ಮಾಡಬಹುದಾಗಿದೆ.

ಲಾಕ್

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ನೆಕ್ಸಸ್ 6 ಸ್ಮಾರ್ಟ್ ಲಾಕ್ ಎಂಬ ಫೀಚರ್ ಅನ್ನು ಒಳಗೊಂಡಿದ್ದು ಅವರ ಫೋನ್ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಬಳಕೆದಾರರಿಗೆ ಅನುಮತಿಸುತ್ತದೆ.

 ಶಾರ್ಟ್‌ಕಟ್‌ಗಳು

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಲಾಕ್‌ಸ್ಕ್ರೀನ್‌ನಲ್ಲಿಯೇ ಶಾರ್ಟ್‌ಕಟ್‌ಗಳನ್ನು ಇರಿಸಲು ಬಳಕೆದಾರರಿಗೆ ಲಾಲಿಪಪ್ ಅನುಮತಿಸುತ್ತಿದ್ದು, ಇದರಿಂದಾಗಿ ಪರದೆಯಲ್ಲಿಯೇ ಬಳಕೆದಾರರಿಗೆ ತಮ್ಮ ಮೆಚ್ಚಿನ ಅಪ್ಲಿಕೇಶನ್ ಅನ್ನು ಇರಿಸಬಹುದಾಗಿದೆ.

ಸ್ಪೀಚ್

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಓಕೆ ಗೂಗಲ್ ಫೀಚರ್‌ನೊಂದಿಗೆ ನೆಕ್ಸಸ್ 6 ಬಂದಿದ್ದು ಗೂಗಲ್‌ನೊಂದಿಗೆ ಮಾತಿನ ಮೂಲಕ ವ್ಯವಹರಿಸಿ ನಿಮ್ಮ ಕಾರ್ಯವನ್ನು ಸಾಧಿಸಬಹುದಾಗಿದೆ.

ಕೀಬೋರ್ಡ್

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ನೆಕ್ಸಸ್ 6 ಹೆಚ್ಚಿನ ಕೀಬೋರ್ಡ್ ಆಯ್ಕೆಗಳನ್ನು ಒದಗಿಸುತ್ತಿದ್ದು, ನಿಮಗೆ ಸಂದೇಶ ರಚನೆ ಇನ್ನಷ್ಟು ಸುಲಭವಾಗಲಿದೆ.

ಚಿತ್ರ

ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಲಾಕ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಪ್ರೊಫೈಲ್ ಐಕಾನ್ ಅನ್ನು ಬಳಕೆದಾರರಿಗೆ ತೋರಿಸುತ್ತಿದ್ದು ಇದು ಅಧಿಸೂಚನೆ ಪಟ್ಟಿಯಲ್ಲೂ ಕಾಣಸಿಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Nexus 6 by Motorola makes its marks in market positioning for Google's smartphone lineup. It is no longer simply an Android reference phone, but a true Google flagship phone. Here are some tips and tricks which make you fall in love with your Nexus 6 instantly.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot