ದಸರಾ ಸಂಭ್ರಮಕ್ಕೆ ಈ ಸ್ಮಾರ್ಟ್‌ಫೋನ್‌ಗಳ ಮೇಲಿದೆ ಬಿಗ್ ಆಫರ್..!
ಹಬ್ಬದ ಸೀಸನ್ ನಲ್ಲಿ ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿಸಬೇಕು ಎಂದುಕೊಳ್ಳುತ್ತಿದ್ದರೆ ಈ ಲೇಖನವನ್ನು ಓದಲೇಬೇಕು. ಫೇಸ್ಟೀವ್ ಸೀಸನ್ ಅಂದ ಕೂಡಲೇ ಆಫರ್ ಗಳ ಸುರಿಮಳೆ ಇರುತ್ತದೆ. ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಪ್ರಮುಖ ಬ್ರ್ಯಾಂಡ್ ಫೋನ್ ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಹಾಗಾಗಿ ನಾವಿಲ್ಲಿ 5000 ರುಪಾಯಿಯಿಂದ 20,000 ರುಪಾಯಿವರೆಗೆ ಬೆಲೆಬಾಳುವ ಈ ಸೀಸನ್ ನಲ್ಲಿ ಅತ್ಯುತ್ತಮ ಆಫರ್ ನಲ್ಲಿರುವ ಫೋನ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

20000 ರುಪಾಯಿವರೆಗಿನ ಪಟ್ಟಿ ಇಲ್ಲಿದ್ದು ಯಾವೆಲ್ಲ ಪೋನ್ ಗಳು ದಸರಾ ಮತ್ತು ದೀಪಾವಳಿ ಪ್ರಯುಕ್ತ ಅತ್ಯುತ್ತಮ ಆಫರ್ ನಲ್ಲಿದೆ ಮತ್ತು ಆ ಫೋನ್ ಗಳ ವೈಶಿಷ್ಟ್ಯತೆ ಏನು? ಅವುಗಳನ್ನು ಖರೀದಿಸಿದರೆ ನಿಮಗೆಷ್ಟು ಲಾಭ ಎಂಬ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ. ಕನಿಷ್ಟ 5000ದಿಂದ ಗರಿಷ್ಟ 20000 ರುಪಾಯಿವರೆಗಿನ ಫೋನಿನ ಪಟ್ಟಿ ಇದು.

ಶಿಯೋಮಿ ರೆಡ್ಮಿ 6ಎ
ಎಂಟ್ರಿ ಲೆವೆಲ್ ಫೋನ್ ನಿಂದ ಆರಂಭಿಸುವುದಾದರೆ ಎಲ್ಲಾ ಬೇಸಿಕ್ ಫೀಚರ್ ಗಳನ್ನು ಒಳಗೊಂಡಿರುವ ಶಿಯೋಮಿ ರೆಡ್ಮಿ 6ಎ 6,000 ರುಪಾಯಿ ಒಳಗಿನ ಫೋನ್ ಗಳಲ್ಲಿ ಅತ್ಯುತ್ತಮ ಆಯ್ಕೆಯಾಗಲಿದೆ. 18:9 ವೈಡ್ ಸ್ಕ್ರೀನ್ ಡಿಸ್ಪ್ಲೇ, ಸ್ಟ್ಯಾಂಡರ್ಡ್ ಬ್ಯಾಟರಿ, ಸಾಧಾರಣ ಕ್ಯಾಮರಾ ಎಲ್ಲವೂ 5,999 ರುಪಾಯಿಗಳ ಒಳಗೆ ಲಭ್ಯವಾಗುತ್ತದೆ. ಅಕ್ಟೋಬರ್ 10 ರಿಂದ ಆರಂಭವಾಗುವ ಅಮೇಜಾನ್ ಗ್ರೇಟ್ ಇಂಡಿಯಾ ಸೇಲ್ ನಲ್ಲಿ ಎಸ್ ಬಿಐ ಕಾರ್ಡ್ ಬಳಸಿ ಖರೀದಿಸಿದರೆ ಈ ಫೋನ್ ಶೇ.10 ರ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ರಿಯಲ್ ಮಿ ಸಿ1
ಮುಂದಿನ ಹಂತದ ಫೋನ್ ಗಳಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ರಿಯಲ್ ಮಿ ಸಿ1 ಬೆಸ್ಟ್ ಆಯ್ಕೆಯಾಗುತ್ತದೆ. ಎಂಟ್ರಿ ಲೆವೆಲ್ ನ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಟಾಪ್ ಲೆವೆಲ್ ವೈಶಿಷ್ಟ್ಯತೆಗಳನ್ನು ಹೊಂದಿದೆ. ದಸರಾ ಪ್ರಯುಕ್ತ ಇದರ ಬೆಲೆ ಸದ್ಯ 6,999 ರುಪಾಯಿಗಳು. ನಂತರದ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುತ್ತದೆ. 19:9 ನ ನಾಚ್ ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 450, ಡುಯಲ್ ಕ್ಯಾಮರಾ, 4,230 mAh ನ ಬ್ಯಾಟರಿಯನ್ನು ಇದು ಹೊಂದಿದ್ದು 8,000 ರುಪಾಯಿ ಒಳಗೆ ಲಭ್ಯವಾಗುವ ಬೆಸ್ಟ್ ಸ್ಟಾರ್ಟ್ ಫೋನ್ ಇದಾಗಿದೆ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನ ಅಕ್ಟೋಬರ್ 11 ರ ಮಧ್ಯಾಹ್ನ 12 ಘಂಟೆಗೆ ಈ ಫೋನಿನ ಮೊದಲ ಸೇಲ್ ಆರಂಭವಾಗುತ್ತದೆ. ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಹೆಚ್ಚುವರಿ 10 ಶೇ ರಿಯಾಯಿತಿ ಪಡೆಯುವ ಅವಕಾಶವೂ ಇದೆ.

ರಿಯಲ್ ಮಿ 2
ಹೊಸದಾಗಿ ಬಿಡುಗಡೆಗೊಂಡಿರುವ ರಿಯಲ್ ಮಿ 2 ಹೆಚ್ಚುಕಡಿಮೆ ರಿಯಲ್ ಮಿ ಸಿ1 ನ ವೈಶಿಷ್ಟ್ಯತೆಗಳನ್ನೇ ಹೊಂದಿದೆ. ಆದರೆ ಹೆಚ್ಚು ಸ್ಟೋರೇಜ್ ಅವಕಾಶ ಇದರಲ್ಲಿದ್ದು ಉತ್ತಮ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. 19:9 ನಾಚ್ ಡಿಸ್ಪ್ಲೇ, ಡುಯಲ್ ಕ್ಯಾಮರಾ , ಸ್ನ್ಯಾಪ್ ಡ್ರ್ಯಾಗನ್ 450, 4,230 4,230mAh ನ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿವೆ. ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಆಫರ್ ಬೆಲೆಯಲ್ಲಿ ಖರೀದಿಸಬಹುದು ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಸಿ ಹೆಚ್ಚುವರಿ ಶೇ.10 ರಿಯಾಯಿತಿಯನ್ನೂ ಪಡೆಯಬಹುದು.

ಆಸುಸ್ ಜೆನ್‌ಫೋನ್ ಮ್ಯಾಕ್ಸ್ ಎಂ1 ಪ್ರೋ
ಮಿಡ್-ರೇಂಜಿನ ಆಸೂಸ್ ಮಧ್ಯಮ ಬಜೆಟ್ ಹೊಂದಿರುವವರಿಗೆ ಬೆಸ್ಟ್ ಆಯ್ಕೆಯಾಗಲಿದೆ. 5,000 mAh ನ ಬ್ಯಾಟರಿ, ಡುಯಲ್ ಕ್ಯಾಮರಾ,ಸ್ನ್ಯಾಪ್ ಡ್ರ್ಯಾಗನ್ 636 ಮತ್ತು ಸ್ಟಾಕ್ ಆಂಡ್ರಾಯ್ಡ್ ಇದರಲ್ಲಿದ್ದು 11,000 ಬೆಲೆಗೆ ಒಂದು ಕಂಪ್ಲೀಟ್ ಪ್ಯಾಕೇಜ್ ಇರುವ ಫೋನ್ ಇದಾಗಲಿದೆ. ಆಸೂಸ್ ಮ್ಯಾಕ್ಸ್ ಪ್ರೋ ಎಂ1 ಸಾಮಾನ್ಯಕ್ಕಿಂತ ಹೆಚ್ಚು ಗುಣಮಟ್ಟದ ಕ್ಯಾಮರಾ ಪ್ರದರ್ಶನದೊಂದಿಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ಇದು ನೀಡುತ್ತದೆ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ನೀವಿದನ್ನು ಆಫರ್ ಬೆಲೆಯಲ್ಲಿ ಖರೀದಿಸಬಹುದು ಮತ್ತು ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಹೆಚ್ಚುವರಿ ಶೇ.10 ರ ರಿಯಾಯಿತಿಯನ್ನೂ ಪಡೆಯಬಹುದು.

ರಿಯಲ್ ಮಿ 2 ಪ್ರೋ
ಕಳೆದ ಹಲವು ಸಮಯಗಳಿಂದ 15,000 ರುಪಾಯಿ ಒಳಗಿನ ಫೋನ್ ಗಳಲ್ಲಿ ರಿಯಲ್ ಮಿ 2 ಪ್ರೋ ಅತ್ಯುತ್ತಮ ಫೋನ್ ಎನ್ನಿಸಿಕೊಂಡಿದೆ.ಸ್ನ್ಯಾಪ್ ಡ್ರ್ಯಾಗನ್ 660, ಡುಯಲ್ ಕ್ಯಾಮರಾ, ವಾಟರ್-ಡ್ರಾಪ್ ನಾಚ್ ಎಮ್ಮರ್ಸೀವ್ ಡಿಸ್ಪ್ಲೇ,3,500mAhನ ಬ್ಯಾಟರಿ ಮತ್ತು ಒಟ್ಟಾರೆ ಅಧ್ಬುತ ಪ್ರದರ್ಶನವನ್ನು ನೀಡುವ ಫೋನ್ ಇದಾಗಿದೆ. ಸಧ್ಯ ಭಾರತದಲ್ಲಿರುವ ಮಿಡ್ ರೇಂಜ್ ಫೋನ್ ಗಳಲ್ಲಿ ಇದು ಅತ್ಯುತ್ತಮ ಆಯ್ಕೆ ಎನ್ನಿಸಿಕೊಂಡಿದೆ. ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಖರೀದಿಸುವ ಅವಕಾಶವಿದೆ. ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಅಕ್ಟೋಬರ್ 11 ರಿಂದ ಆರಂಭವಾಗುವ ಈ ಸೇಲ್ ನಲ್ಲಿ ಶೇ.10 ರ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಾಗುತ್ತದೆ.

ರೆಡ್ಮಿ ನೋಟ್ 5 ಪ್ರೋ
ಸ್ನ್ಯಾಪ್ ಡ್ರ್ಯಾಗನ್ 636 ಹೊಂದಿರುವ ಹಲವು ಸ್ಮಾರ್ಟ್ ಫೋನ್ ಗಳು ಈ ಪಟ್ಟಿಯಲ್ಲಿದೆ. ಅದೇ ಗುಂಪಿಗೆ ಸೇರುವ ಮತ್ತೊಂದು ಫೋನ್ ಎಂದರೆ ಅದು ರೆಡ್ಮಿ ನೋಟ್ 5 ಪ್ರೋ. ಉತ್ತಮ ಕ್ಯಾಮರಾ ಪ್ರದರ್ಶನ, 18:9 ವೈಡ್ ಸ್ಕ್ರೀನ್ ಡಿಸ್ಪ್ಲೇ, MIUI 10 ,4,000 mAh ಬ್ಯಾಟರಿಯನ್ನು ಇದು ಹೊಂದಿದೆ.ಈ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಕ್ಯಾಮರಾ ಫೋನ್ ಇದಾಗಿದೆ.ಹಿಂಭಾಗದ ಮತ್ತು ಮುಂಭಾಗದ ಎರಡೂ ಕ್ಯಾಮರಾಗಳು ಒಂದಕ್ಕಿಂತ ಒಂದು ಸೂಪರ್ ಆಗಿದೆ. ಫ್ಲಿಫ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಇದನ್ನು ಆರಿಸಿಕೊಳ್ಳಬಹುದು. ಈ ಸೇಲ್ ನಲ್ಲಿ ಹೆಚ್ ಡಿಎಫ್ ಸಿ ಕಾರ್ಡ್ ಬಳಸುವವರಿಗೆ ಶೇ.10 ರ ಹೆಚ್ಚುವರಿ ರಿಯಾಯಿತಿ ಲಭ್ಯವಾಗುತ್ತದೆ.

ನೋಕಿಯಾ 6.1 ಪ್ಲಸ್
ರಿಬ್ರ್ಯಾಂಡ್ ಆಗಿರುವ ನೋಕಿಯಾ ಎಕ್ಸ್6 ಮಾರುಕಟ್ಟೆಯಲ್ಲಿ ಅತ್ಯಧ್ಬುತವಾಗಿ ಮಾರಾಟವಾಗುತ್ತಿದೆ. ಸೀಮ್ ಲೆಸ್ ಸ್ಟಾಕ್ ಆಂಡ್ರಾಯ್ಡ್, ಡುಯಲ್ ಕ್ಯಾಮರಾ, ನಾಚ್ಡ್ 19:9 ಡಿಸ್ಪ್ಲೇ ಇರುವ ಫೋನ್ ಒಂದನ್ನು ನೀವು ಈ ದಸರಾ ಸಮಯದಲ್ಲಿ ಹುಡುಕಾಡುವುದಾದರೆ ಖಂಡಿತ ನೋಕಿಯಾ 6.1 ಪ್ಲಸ್ ಬೆಸ್ಟ್ ಆಯ್ಕೆ. ಉತ್ತಮ ಕ್ಯಾಮರಾ, ಒಳ್ಳೆಯ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಅವಕಾಶ ಇದರಲ್ಲಿದೆ. ಸ್ನ್ಯಾಪ್ ಡ್ರ್ಯಾಗನ್ 636 ಉತ್ತಮ ಪ್ರದರ್ಶನಕ್ಕೆ ಕಾರಣವಾಗುತ್ತದೆ. 4GB RAM ಮತ್ತು 64GB ಸ್ಟೋರೇಜ್ ಆಯ್ಕೆ ಇದರಲ್ಲಿದೆ. ನೋಕಿಯಾ 6.1 ಪ್ಲಸ್ ನ್ನು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಖರೀದಿಸಬಹುದು. ಈಗಾಗಲೇ ಇತರೆ ಫೋನ್ ಗಳಿಗೆ ಹೇಳಿರುವಂತೆ ಹೆಚ್ ಡಿ ಎಫ್ ಸಿ ಕಾರ್ಡ್ ಬಳಸಿದರೆ ಹೆಚ್ಚುವರಿ ಶೇ.10 ರ ರಿಯಾಯಿತಿ ಲಭ್ಯವಾಗುತ್ತದೆ.

ಮೋಟೊರೋಲಾ ಒನ್ ಪವರ್
ಬ್ಯಾಟರಿ ಒಂದನ್ನು ಹೊರತು ಪಡಿಸಿ ಹೆಚ್ಚು ಕಡಿಮೆ ನೋಕಿಯಾ 6.1 ಪ್ಲಸ್ ನ ವೈಶಿಷ್ಟ್ಯತೆಗಳನ್ನೇ ಇದು ಒಳಗೊಂಡಿದೆ.ಒಂದು ವೇಳೆ ನೀವು ನಾಚ್ ಇರುವ ಸ್ಮಾರ್ಟ್ ಫೋನ್ ಜೊತೆಗೆ ದೊಡ್ಡ ಬ್ಯಾಟರಿ ಇರುವ ಆಂಡ್ರಾಯ್ಡ್ ಫೋನ್ ಒಂದನ್ನು ಖರೀದಿಸುವ ಆಸಕ್ತಿ ಹೊಂದಿದ್ದರೆ ಮೋಟೊರೋಲಾ ಒನ್ ಪವರ್ ನ್ನು ಆರಿಸಿಕೊಳ್ಳಬಹುದು. 5,000 mAhನ ಬ್ಯಾಟರಿಯನ್ನು ಇದು ಹೊಂದಿದ್ದು ಟರ್ಬೋ ಚಾರ್ಜ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯತೆಯಿಂದ ಕೂಡಿದೆ. ಸ್ನ್ಯಾಪ್ ಡ್ರ್ಯಾಗನ್ 636, ಡುಯಲ್ ಕ್ಯಾಮರಾ ,19:9 ಇಲಾನ್ಗೇಟೆಡ್ ಡಿಸ್ಪ್ಲೇ, ಸ್ಟೀರಿಯೋ ಸ್ಪೀಕರ್ ಮತ್ತು ಹಲವು ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ. ಮೋಟೊರೋಲಾ ಒನ್ ಪವರ್ ನ್ನು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಖರೀದಿಸಬಹುದಾಗಿದ್ದು ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಸುವವರಿಗೆ ಹೆಚ್ಚುವರಿ ಶೇ.10 ರ ರಿಯಾಯಿತಿ ಲಭ್ಯವಿದೆ.

ಶಿಯೋಮಿ ಎಂಐ ಎ2
ಮುಂದಿನ ಜನರೇಷನ್ನಿನ ಸ್ಮಾರ್ಟ್ ಫೋನ್ ಎಂದು ಕರೆಸಿಕೊಳ್ಳುವ ಶಿಯೋಮಿ ಎಂಐ ಎ2 ಫೋನ್ 18:9 ವೈಡ್ ಸ್ಕ್ರೀನ್ ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 660,64GB ಸ್ಟೋರೇಜ್, ಡುಯಲ್ ಕ್ಯಾಮರಾ ಮತ್ತು 3,000 mAh ಬ್ಯಾಟರಿಯನ್ನು ಹೊಂದಿದ್ದು QC 4.0 ತಂತ್ರಜ್ಞಾನವವನ್ನು ಒಳಗೊಂಡಿದೆ. 17,000 ರುಪಾಯಿ ಒಳಗಿನ ಫೋನ್ ಗಳಲ್ಲಿ ಇದು ಉತ್ತಮ ಪ್ರದರ್ಶನವನ್ನು ನೀಡುವ ಫೋನ್ ಆಗಿದೆ.ಒಂದು ವೇಳೆ ದಸರಾ ಸಂದರ್ಬದಲ್ಲಿ ನೀವು ಉತ್ತಮ ಕ್ಯಾಮರಾದೊಂದಿಗೆ ಆಂಡ್ರಾಯ್ಡ್ ಫೋನ್ ಒಂದರ ನಿರೀಕ್ಷೆಯಲ್ಲಿದ್ದರೆ ಶಿಯೋಮಿ ಎಂಐ ಎ2 ನಿಮಗೆ ನಿರಾಸೆ ಮಾಡುವುದಿಲ್ಲ. ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಎಸ್ ಬಿಐ ಕಾರ್ಡ್ ಬಳಸಿ ಹೆಚ್ಚುವರಿ ಶೇ.10 ರ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಹಾನರ್ ಪ್ಲೇ
20,000 ರುಪಾಯಿ ಒಳಗಿನ ಬೆಸ್ಟ್ ಸ್ಮಾರ್ಟ್ ಫೋನ್ ಹಾನರ್ ಪ್ಲೇ. ವೇಗವಾಗಿರುವ, ಮೃದುವಾದ ಪ್ರದರ್ಶನ ನೀಡುವ ಮತ್ತು ಉತ್ತಮ ಆಯ್ಕೆಗಳಲ್ಲಿ ಒಂದೆನಿಸುವ ಸ್ಮಾರ್ಟ್ ಫೋನ್ ಇದು. Kirin 970 ಪ್ರೊಸೆಸರ್ ನ್ನು ಇದು ಹೊಂದಿದೆ. ಎಐ ಕೆಪಾಬಿಲಿಟಿಯೊಂದಿಗೆ ಉತ್ತಮ ಗೇಮಿಂಗ್ ಅನುಭವ ನೀಡುವ ಫೋನ್ ಇದಾಗಿದೆ. ಪ್ರೊಫೆಷನಲ್ ಫೋಟೋಗ್ರಫಿ ಅನುಭವವನ್ನು ಇದು ನೀಡುತ್ತದೆ. ಹಿಂಭಾಗದಲ್ಲಿ ಡುಯಲ್ ಕ್ಯಾಮರಾವಿದೆ. 3,750 mAh ನ ಬ್ಯಾಟರಿಯನ್ನು ಇದು ಒಳಗೊಂಡಿದೆ. ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಎಸ್ ಬಿಐ ಕಾರ್ಡ್ ಬಳಸಿ ಖರೀದಿಸುವುದಾದರೆ ಹೆಚ್ಚುವರಿ ಶೇ.10 ರ ರಿಯಾಯಿತಿ ಕೂಡ ಲಭ್ಯವಾಗುತ್ತದೆ.


Click it and Unblock the Notifications








