ದುಬಾರಿ ಐಫೋನ್ ಬಳಕೆಗಾಗಿ ಸರಳ ಸಲಹೆಗಳು
ಯಾವುದೇ ದುಬಾರಿ ಫೋನೇ ಆಗಲಿ ಅದರ ಬಳಕೆಯಲ್ಲಿ ಹೆಚ್ಚು ಕಡಿಮೆ ಆದರೆ ಅದು ಎಷ್ಟೋ ಅಪಾಯಗಳಿಗೆ ನಮ್ಮನ್ನು ತಂದೊಡ್ಡಬಹುದು. ಆದ್ದರಿಂದ ಫೋನ್ ಖರೀದಿ ಮಾಡಿದ ನಂತರ ಅದರಲ್ಲಿರುವ ಸೆಟ್ಟಿಂಗ್ಸ್ ಅನ್ನು ಅರಿತುಕೊಂಡು ಪೋನ್‌ನ ನಿರ್ವಹಣೆ ಮಾಡುವುದು ಅತಿ ಸಮಂಜಸ ತೀರ್ಮಾನವಾಗಿದೆ.
ಇಂದಿನ ಲೇಖನದಲ್ಲಿ ಐಫೋನ್ ಅಥವಾ ಐಪ್ಯಾಡ್ ಬಳಕೆಯಲ್ಲಿ ಕೆಲವೊಂದು ಸಲಹೆಗಳನ್ನು ಹೇಗೆ ಪಾಲಿಸಬೇಕೆಂಬುದನ್ನು ತಿಳಿದುಕೊಳ್ಳೋಣ. ಈ ಸಲಹೆ ಸೂಚನೆಗಳು ನಿಮ್ಮ ದುಬಾರಿ ಫೋನ್‌ನ ಜೀವರಕ್ಷಕವಾಗಿ ಕೆಲಸ ಮಾಡುವುದರ ಜೊತೆಗೆ ಇದರ ಕಾರ್ಯಯೋಜನೆಗಳನ್ನು ಕುರಿತು ನಿಮಗೆ ಸಮಂಜಸ ವಿವರವಾದ ಮಾಹಿತಿಯನ್ನು ನೀಡುತ್ತದೆ.
ಈ ಸರಳ ಸೂಚನೆಗಳನ್ನು ನೀವು ಪಾಲಿಸಿದಿರಿ ಎಂದಾದಲ್ಲಿ ನಿಮ್ಮ ಫೋನ್‌ನ ಸುರಕ್ಷೆಯನ್ನು ನೀವು ಮಾಡಿದಂತೆಯೇ ಸರಿ. ಹಾಗಿದ್ದರೆ ಇಲ್ಲಿರುವ ಅತಿ ವಿಶಿಷ್ಟವಾದ ಸರಳವಾದ ಮಾಹಿತಿಯನ್ನು ಅರಿತುಕೊಂಡು ಮುಂದುವರಿಯಿರಿ.

#1
ನಿಮ್ಮ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ನಲ್ಲಿ ತಪ್ಪಾದ ಸಂಖ್ಯೆಯನ್ನು ನಮೂದಿಸಿ. ಕ್ಲಿಯರ್ ಬಟನ್ (ಸಿ) ಅನ್ನು ಒತ್ತುವ ಬದಲಿಗೆ, ಸಂಖ್ಯೆಯ ಬಲ ಅಥವಾ ಎಡ ಬದಿಗೆ ನಿಮ್ಮ ಬೆರಳನ್ನು ಸ್ಬೈಪ್ ಮಾಡಿ ಕೊನೆಯ ಸಂಖ್ಯೆಯನ್ನು ಅಳಿಸಿ.

#2
ನಿಮ್ಮ ಐಫೋನ್‌ನಲ್ಲಿನ ನಿಮ್ಮ ಖಾಸಗಿ ಸಂದೇಶಗಳನ್ನು ಇತರರು ನೋಡುವುದನ್ನು ತಪ್ಪಿಸಲು ಸೆಟ್ಟಿಂಗ್ಸ್> ಅಧಿಸೂಚನೆಗಳು> ಸಂದೇಶಗಳು>ಪೂರ್ವವೀಕ್ಷಣೆ ತೋರಿಸಿ ಇದರ ಆಯ್ಕೆಯನ್ನು ಒತ್ತಿ ಮತ್ತು ಇಲ್ಲಿ ಆನ್ ಆಗಿರುವ ಬಟನ್ ಅನ್ನು ಆಫ್ ಮಾಡಿ.

#3
ಡು ನಾಟ್ ಡಿಸ್ಟರ್ಬ್ ಫೀಚರ್ ನಿಮ್ಮ ಐಫೋನ್ ಲಾಕ್ ಆದಾಗ ಸೈಲೆನ್ಸ್ ಕರೆಗಳು, ಸೂಚನೆಗಳು ಅಧಿಸೂಚನೆಗಳನ್ನು ಪ್ರವೇಶಿಸಲು ನಿಮ್ಮನ್ನು ಅನುಮತಿಸುತ್ತದೆ.

#4
ಸೆಟ್ಟಿಂಗ್ಸ್> ಜನರಲ್>ಕೀಬೋರ್ಡ್>ಆಡ್ ನ್ಯೂ ಶಾರ್ಟ್‌ಕಟ್ಸ್

#5
ನಿಮ್ಮ ಫೋನ್ ಅಥವಾ ಐಪ್ಯಾಡ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿಟ್ಟಾಗ, ಇದು ದುಪ್ಪಟ್ಟು ವೇಗದಲ್ಲಿ ಫೋನ್ ಅನ್ನು ಚಾರ್ಜು ಮಾಡುತ್ತದೆ.

#6
ನಿಮ್ಮ ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಇಮೇಲ್‌ಗಳನ್ನು ರಚಿಸುತ್ತಿರುವಾಗ ಅವುಗಳನ್ನು ಫಾರ್ಮೇಟ್ ಮಾಡಬಹುದು

#7
ಸೇರಿಸಲು ಫೋಟೋಗಳನ್ನು ಆಯ್ಕೆಮಾಡುತ್ತಿರುವಾಗ, ಬಲ ಮೇಲ್ಭಾಗದಲ್ಲಿ ಸಂಪಾದಿಸು ಇಲ್ಲಿ ಸ್ಪರ್ಶಿಸಿ ಮತ್ತು ಸ್ಪರ್ಶಿಸುವ ಮೂಲಕ ನೀವು ಕಳುಹಿಸಬೇಕೆಂದಿರುವ ಫೋಟೋಗಳನ್ನು ಆಯ್ಕೆಮಾಡಿ. ಈ ಫೋಟೋಗಳಿಗೆ ಕೆಂಪು ಬಣ್ಣದ ಗುರುತನ್ನು ಮಾಡಿಕೊಳ್ಳಿ ಮತ್ತು ಹಂಚಿ ಕ್ಲಿಕ್ ಮಾಡಿ.

#8
ಸೆಟ್ಟಿಂಗ್ಸ್> ಜನರಲ್>ಆಕ್ಸಸಿಬಿಲಿಟಿ>ಇನ್‌ವರ್ಟ್ ಕಲರ್ಸ್ ಆನ್ ಮಾಡಿ.

#9
ಐಪ್ಯಾಡ್‌ನಲ್ಲಿ ನಿಮ್ಮ ಕೀಬೋರ್ಡ್ ಅನ್ನು ಥಂಬ್ ಮೋಡ್‌ಗೆ ಬದಲಾಯಿಸುವ ಮೂಲಕ ಇನ್ನಷ್ಟು ಆರಾಮದಾಯಕವಾಗಿ ಟೈಪ್ ಮಾಡಿ.

#10
ನಿಮ್ಮ ಶೂಟಿಂಗ್ ದಿಕ್ಕನ್ನು ಬದಲಾಯಿಸಲು ಪನೋರಮಾ ಮೋಡ್‌ನಲ್ಲಿ ಬಾಣವನ್ನು ಮುಟ್ಟಿ ಇದರಿಂದ ನಿಮಗೆ ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಪನೋರಮಾ ಚಿತ್ರಗಳನ್ನು ತೆಗೆಯಬಹುದು.

#11
ನಿಮ್ಮ ಸಿರಿಯನ್ನು ಸಕ್ರಿಯಗೊಳಿಸಿ ಮತ್ತು ರಾಂಡಮ್ ಪಾಸ್‌ವರ್ಡ್ ಎಂದು ಹೇಳಿ ಇದರಿಂದ ನೀವು ಎಂಟು ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಸಿರಿಯಿಂದ ಪಡೆದುಕೊಳ್ಳಬಹುದು.

#12
ಐಮೆಸೇಜ್ ರೀಡ್ ರಿಸಿಪ್ಟ್ಸ್ ನಿಮ್ಮ ಸ್ನೇಹಿತರಿಗೆ ನೀವು ಅವರ ಸಂದೇಶಗಳನ್ನು ಓದಿರುವಿರಾ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸ್ನೇಹಿತರಿಗೆ ಇದರ ಬಗ್ಗೆ ಮಾಹಿತಿ ದೊರೆಯಬಾರದು ಎಂದು ನೀವು ಭಾವಿಸಿದ್ದರೆ, ಸೆಟ್ಟಿಂಗ್ಸ್‌ಗೆ ಹೋಗಿ, ಸಂದೇಶಗಳು>ಸೆಂಡ್ ರೀಡ್ ರೆಸಿಪ್ಟ್ಸ್> ಆಫ್ ಮಾಡಿ.

#13
ಸಫಾರಿಯಲ್ಲಿ, ಸರ್ಚ್ ಪಟ್ಟಿಯಲ್ಲಿ ಡೊಮೇನ್ ಅನ್ನು ತ್ವರಿತವಾಗಿ ಸೇರಿಸಬೇಕಿದ್ದಲ್ಲಿ ಪೂರ್ಣ ವಿರಾಮ ಕೀಯನ್ನು ಒತ್ತಿ ಕೆಳಮುಖವಾಗಿಸಿ.

#14
ಯಾವುದೇ ಅಪ್ಲಿಕೇಶನ್‌ನ ಮೇಲ್ಭಾಗ ಪಟ್ಟಿಯನ್ನು ಒತ್ತಿರಿ ಇದರಿಂದ ಮೇಲ್ಭಾಗಕ್ಕೆ ಹಿಂದಕ್ಕೆ ಸ್ಕ್ರಾಲ್ ಆಗುತ್ತದೆ.

#15
ಬ್ಯಾಕ್‌ಸ್ಪೇಸ್ ಕೀಯನ್ನು ಬಳಸದೆಯೇ, ನಿಮ್ಮ ಐಫೋನ್ ಅನ್ನು ಶೇಕ್ ಮಾಡಿ ಮತ್ತು ಟೈಪಿಂಗ್ ರದ್ದುಮಾಡಿ ಅಥವಾ ಸಂದೇಶವನ್ನು ಅಳಿಸಿ.

#16
ನಿಮ್ಮ ಮ್ಯೂಸಿಕ್ ಅನ್ನು ನಿಲ್ಲಿಸಲು ಟೈಮರ್‌ನ ಸಹಾಯವನ್ನು ನಿಮಗೆ ಪಡೆಯಬಹುದು. ಕ್ಲಾಕ್ ಒತ್ತಿರಿ> ಟೈಮರ್> ವೆನ್ ಟೈಮರ್ ಎಂಡ್ಸ್.

#17
ನಂತರ ಇಲ್ಲಿ ಟೈಮರ್ ಅನ್ನು ನಿರ್ಧರಿಸಿ ನಿಮ್ಮ ಮ್ಯೂಸಿಕ್ ನಿಲ್ಲುವಿಕೆಯ ಅವಧಿಯನ್ನು ನಮೂದಿಸಬಹುದು.

#18
ನಿಮ್ಮ ಸೆಟ್ಟಿಂಗ್ಸ್‌ನಲ್ಲಿ "ಟೆಕ್ಸ್ಟ್ ಟು ಸ್ಪೀಚ್" ಫಂಕ್ಷನ್ ಅನ್ನು ಸಕ್ರಿಯಗೊಳಿಸಿ

#19
ಸೆಟ್ಟಿಂಗ್ಸ್> ಜನರಲ್> ಪಾಸ್‌ಕೋಡ್ ಲಾಕ್ ಅನ್ನು ಸಕ್ರಿಯಗೊಳಿಸಿ.

#20
ನಿಮಗೆ ಇಂಟರ್ನೆಟ್ ಪ್ರವೇಶ ಇದೆ ಎಂದಾದಲ್ಲಿ, ಗೂಗಲ್ ನಕ್ಷೆಯಲ್ಲಿ ನೀವು ಉಳಿಸಬೇಕೆಂದು ಬಯಸಿರುವ ಸ್ಥಳಕ್ಕೆ ಹೋಗಿ. ಈ ಹುಡುಕಾಟ ಪಟ್ಟಿಯಲ್ಲಿ, "ಓಕೆ ಮ್ಯಾಪ್ಸ್" ಎಂದು ಟೈಪ್ ಮಾಡಿ. ಇದರಿಂದ ನಿಮ್ಮ ನಕ್ಷೆ ಆಫ್‌ಲೈನ್ ಬಳಕೆಗಾಗಿ ಇದನ್ನು ಸಂಪರ್ಕಿಸುತ್ತದೆ.

#21
ಚಿತ್ರವನ್ನು ನಿರ್ವಹಿಸಲು ಸುಮ್ಮನೆ ಕಂಪಾಸ್ ಅಪ್ಲೀಕೇಶನ್ ಅನ್ನು ತೆರೆಯಿರಿ ಮತ್ತು ಎಡಕ್ಕೆ ಸ್ಪೈಪ್ ಮಾಡಿ ನೀವು ಲೆವೆಲ್ ಸ್ಕ್ರೀನ್‌ನಲ್ಲಿರುತ್ತೀರಿ.


Click it and Unblock the Notifications