Subscribe to Gizbot

ಭಾರತದ ಮಾರುಕಟ್ಟೆಗೆ ದೊಡ್ಡ ಬೆದರಿಕೆ ಈ ಚೀನಾ ಉತ್ಪನ್ನಗಳು

Written By:

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ತಯಾರಕರ ಸಂಖ್ಯೆ ಹೆಚ್ಚುತ್ತಿದ್ದು, ದೇಶದ ಹೊರಗಿನ ಉತ್ಪಾದಕರನ್ನು ಕಂಡುಹಿಡಿಯುವುದು ತುಂಬಾ ಆಸಕ್ತಿಕರವಾಗಿದೆ. ವಿದೇಶಿ ಕಂಪೆನಿಗಳು ಸ್ಫಳಿಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಇನ್ನು ಇದಕ್ಕೆ ಉದಾಹರಣೆಯೆಂದರೆ ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಯಾಗಿದೆ. ನಾವು ಸ್ಥಳೀಯ ಹೆಸರುವಾಸಿ ತಯಾರಕರನ್ನು ಹೊಂದಿದ್ದರೂ, ಈ ಹೊರಗಿನ ಫೋನ್ ತಯಾರಕರು ಬಳಕೆದಾರರಲ್ಲಿ ಮೋಡಿಯನ್ನು ಮಾಡಿದ್ದಾರೆ.

ಇದೆಲ್ಲಾ ಅಂಶಗಳನ್ನು ನಾವು ತಲೆಯಲ್ಲಿಟ್ಟುಕೊಂಡೇ ಮಾರುಕಟ್ಟೆಯಲ್ಲಿರುವ ಚೀನಾ ಹ್ಯಾಂಡ್‌ಸೆಟ್ ತಯಾರಕರತ್ತ ನಾವು ನೋಟ ಹರಿಸಿದಾಗ ನಮಗೆ ಕೆಲವೊಂದು ಆಘಾತಕಾರಿ ಅಂಶಗಳು ತಿಳಿದುಬರುತ್ತವೆ. ಮಾರುಕಟ್ಟೆಯಲ್ಲಿ ಚೀನಾ ಉತ್ಪನ್ನ ವಸ್ತುಗಳು ಕೆಲವು ಸಮಯ ಮಾಯವಾಗಿದ್ದವು. ಇನ್ನು ಸ್ಮಾರ್ಟ್‌ಫೋನ್‌ಗಳ ಸಮಯದಲ್ಲಿ ಚೀನಾ ತಯಾರಿಕಾ ಮೊಬೈಲ್‌ಗಳು ಮಾರುಕಟ್ಟೆಯಲ್ಲಿದ್ದವು, ಆದರೆ ಅಷ್ಟೊಂದು ಜನಪ್ರಿಯವಾಗಿರಲಿಲ್ಲ.

ಆದರೆ ಈ 2014 ರ ಸಮಯದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಚೀನಾ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಹೊಸದೊಂದು ಜಾದೂವನ್ನು ಉಂಟುಮಾಡುತ್ತಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹೊಸ ಹವಾವನ್ನು ಸೃಷ್ಟಿ ಮಾಡುತ್ತಿರುವ ಈ ಚೀನಾ ಫೋನ್ ತಯಾರಿಕಾ ಕಂಪೆನಿಗಳತ್ತ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾದ ಸ್ಮಾರ್ಟ್‌ಫೋನ್ ತಯಾರಕರು

#1

ಒಪ್ಪೊ:
ಒಪ್ಪೊ ಸ್ಮಾರ್ಟ್‌ಫೋನ್‌ಗಳು ತನ್ನದೇ ನೆಲದಲ್ಲಿ ಹೆಸರನ್ನು ಮಾಡಿರುವಂಥದ್ದಾಗಿದೆ. ಈಗ ಭಾರತೀಯ ಮಾರುಟಕ್ಟೆಯತ್ತ ದೃಷ್ಟಿ ಹರಿಸಿರುವ ಈ ಕಂಪೆನಿ ಇಲ್ಲಿಯೂ ತನ್ನ ಅದೃಷ್ಟ ಪರೀಕ್ಷೆಯನ್ನು ಮುಂದುವರಿಸಿದೆ. ತನ್ನ ಜಾಹೀರಾತಿಗೆ ಹೆಚ್ಚಿನ ಹಾಲಿವುಡ್ ತಾರೆಗಳನ್ನು ಬಳಸಿಕೊಂಡಿದ್ದ ಈ ಕಂಪೆನಿ ಯಶಸ್ಸಿಗಾಗಿ ಪ್ರಯತ್ನಿಸುತ್ತಿದೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕರು

#2

ಶಯೋಮಿ:
ಇತ್ತೀಚಿಗೆ ಭಾರತದ ಹ್ಯಾಂಡ್‌ಸೆಟ್ ಮಾರುಕಟ್ಟೆಯನ್ನು ಪ್ರವೇಶಿಸಿರುವ ಶಯೋಮಿ, ಮಾರುಕಟ್ಟೆಯಲ್ಲಿರುವ ದೊಡ್ಡ ಹೆಸರುಗಳೊಂದಿಗೆ ತೀವ್ರ ತರದ ಪೈಪೋಟಿಯನ್ನು ನಡೆಸಲು ಸಿದ್ಧವಾಗಿದೆ. ಚೀನಾದ ಆಪಲ್ ಎಂದೇ ಈ ಫೋನ್ ಅನ್ನು ಕರೆಯುತ್ತಾರೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕರು

#3

ಜಿಯೋನಿ:
ಜಗತ್ತಿನ ಹತ್ತು ಪ್ರಸಿದ್ಧ ಫೋನ್ ತಯಾರಿಕಾ ಕಂಪೆನಿಗಳಲ್ಲಿ ಒಂದಾಗಿರುವ ಜಿಯೋನಿ 41 ಮಾರಾಟ ಏಜೆಂಟ್‌ಗಳನ್ನು ಮತ್ತು 40 ಸೇವಾ ಕೇಂದ್ರಗಳನ್ನು ಹೊಂದಿದೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕರು

#4

ಕೂಲ್‌ಪ್ಯಾಡ್:
ಚೀನಾದಲ್ಲಿ ಕೂಲ್‌ಪ್ಯಾಡ್ ಭರದಿಂದ ಮಾರಾಟವಾಗುತ್ತಿರುವ ಫೋನ್ ಆಗಿದೆ. ಮಾರಾಟದ ವಿಷಯದಲ್ಲಿ ಚೀನಾದ ಮೂರನೆಯ ದೊಡ್ಡ ಸ್ಮಾರ್ಟ್‌ಫೋನ್ ಆಗಿ ಇದು ಹೊರಹೊಮ್ಮಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 4 Chinese Smartphone makers could threaten to Indian handset makers. Chinese companies going good in India and grabbing the place of many Indian handsets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot