Subscribe to Gizbot

ರೂ. 20,000 ದಲ್ಲಿ ನೀವು ಖರೀದಿಸಬಹುದಾದ ಫೋನ್‌‌ಗಳು

Posted By:

ಸ್ಮಾರ್ಟ್‌ಫೋನ್ ಜಗತ್ತನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ ನಿಮ್ಮದಾಗಿದ್ದರೆ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ನಿಮ್ಮ ಸ್ಮಾರ್ಟ್‌ಫೋನ್ ಖರೀದಿಗೆ ನಮ್ಮ ಸಹಾಯ ಯಾವತ್ತೂ ಇದ್ದಂತೆ ಈ ಬಾರಿ ಕೂಡ ಗಿಜ್‌ಬಾಟ್ ನಿಮ್ಮ ನೆರವಿಗೆ ಬಂದಿದೆ.

ರೂ 20,000 ದ ಒಳಗೆ ನೀವು ಖರೀದಿಸಬಹುದಾದ 5 ಬೆಸ್ಟ್ ಫೋನ್‌ಗಳ ಶ್ರೇಣಿಯೊಂದಿಗೆ ಇಂದು ನಾವು ಬಂದಿದ್ದು ನಿಮಗಿದು ಖಂಡಿತ ಸಹಕಾರಿಯಾಗಲಿದೆ. ಉತ್ತಮ ಫೋನ್ ಅನ್ನು ಆಯ್ಕೆಮಾಡುವುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ನೀವು ಸ್ಮಾರ್ಟ್‌ಫೋನ್ ಪ್ರಿಯರು ಮತ್ತು ಅತ್ಯುತ್ತಮ ಫೋನ್ ಅನ್ನು ಖರೀದಿಸುವ ಇರಾದೆ ನಿಮ್ಮದಾಗಿದ್ದಲ್ಲಿ ಈ ಫೋನ್‌ಗಳು ನಿಮ್ಮ ಉತ್ತಮ ಚಾಯ್ಸ್ ಆಗುವುದು ಖಂಡಿತ.

ಹಾಗಿದ್ದರೆ ಆ ಫೋನ್‌ಗಳ ಶ್ರೇಣಿಯನ್ನು ಈ ಲೇಖನದಲ್ಲಿ ನೋಡಿ ನಿಮ್ಮ ಕಣ್ತುಂಬಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಯಾನಸೋನಿಕ್ ಪಿ81

#1

ಇದು 5.5 ಇಂಚಿನ ಐಪಿಎಸ್ ಡಿಸ್‌ಪ್ಲೇ ಎಚ್‌ಡಿ ರೆಸಲ್ಯೂಶನ್‌ನೊಂದಿಗೆ ಬಂದಿದ್ದು ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. 1ಜಿಬಿ RAM 4.2.2 ಜೆಲ್ಲಿ ಬೀನ್ ಇದರಲ್ಲಿ ಚಾಲನೆಯಾಗುತ್ತಿದ್ದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಫೋನ್‌ನಲ್ಲಿದೆ. ಇದರ ಫ್ರಂಟ್ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದು ಸೆಲ್ಫೀ ಹಾಗೂ ವೀಡಿಯೋ ರೆಕಾರ್ಡಿಂಗ್ ಮಾಡಲು ಸೂಪರ್ ಆಗಿದೆ. ಇದರ ಸಂಗ್ರಹಣಾ ಸಾಮರ್ಥ್ಯ 8ಜಿಬಿ ಇದ್ದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಇದನ್ನು ವಿಸ್ತರಿಸಬಹುದು. ಇದರ ಸಂಪರ್ಕ ಆಯ್ಕೆಗಳು 3ಜಿ, ವೈ-ಫೈ, ಜಿಪಿಎಸ್ ಮತ್ತು ಬ್ಲೂಟೂತ್ 3.0 A2DP ಯನ್ನು ಒಳಗೊಂಡಿವೆ. ಇದರ ಬೆಲೆ ರೂ. 17,990 ಆಗಿದೆ.

ಆಲ್ಕಾಟೆಲ್ ಒನ್ ಟಚ್ ಐಡಲ್ x+

#2

ಅಲ್ಕಾಟೆಲ್ ಒನ್ ಟಚ್ 5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್‌ನೊಂದಿಗೆ ಬಂದಿದ್ದು ಟ್ರೂ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. 2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ ಇದರಲ್ಲಿದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದು. ಇದು 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು ಎರಡೂ ಕ್ಯಾಮೆರಾಗಳು ವೀಡಿಯೋವನ್ನು ಶೂಟ್ ಮಾಡುವ ಶಕ್ತಿಯನ್ನು ಹೊಂದಿವೆ. ಡ್ಯುಯೆಲ್ ಸಿಮ್ ಬೆಂಬಲ ಡಿವೈಸ್‌ಗಿದೆ. ಇದರ ಬೆಲೆ ರೂ. 16,999 ಆಗಿದೆ.

ನೋಕಿಯಾ ಲ್ಯೂಮಿಯಾ 630

#3

ನೀವು ರೂ 20,000 ದ ಒಳಗೆ ಖರೀದಿ ಮಾಡಬಹುದಾದ ಫೋನ್‌ಗಳಲ್ಲಿ ಇದು ಅಗ್ರಗಣ್ಯ ಸ್ಥಾನದಲ್ಲಿದೆ. ಇದು 4.5 ಇಂಚಿನ ಐಪಿಎಸ್ ಡಿಸ್‌ಪ್ಲೇ 854x480 ರೆಸಲ್ಯೂಶನ್‌ನೊಂದಿಗೆ ಬಂದಿದೆ. ಇದರಲ್ಲಿ 1.2GHZ ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಇದರಲ್ಲಿದೆ. 512 ಎಮ್‌ಬಿ RAM ಫೋನ್‌ನಲ್ಲಿದ್ದು 8 ಜಿಬಿ ಸ್ಥಳೀಯ ಸಂಗ್ರಹಣೆಯೊಂದಿಗೆ ಫೋನ್ ಬಂದಿದೆ ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು. 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಫೋನ್‌ನಲ್ಲಿದೆ ಆದರೆ ದುರಾದೃಷ್ಟವಶಾತ್ ಫೋನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿಲ್ಲ. ಇದರ ಸಂಪರ್ಕ ಆಯ್ಕೆಗಳು 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್ ಇದರಲ್ಲಿದೆ. ಇದರ ಬೆಲೆ ರೂ 10,500 ಆಗಿದೆ.

ಮೋಟೋರೋಲಾ ಮೋಟೋ ಜಿ

#4

ಮಧ್ಯಮ ಶ್ರೇಣಿಯ ಫೋನ್ ವರ್ಗದಲ್ಲಿ ಉತ್ತಮ ಮಾರಾಟವಾಗುವ ಹ್ಯಾಂಡ್‌ಸೆಟ್ ಸಾಲಿನಲ್ಲಿ ಸ್ಥಾನ ಪಡೆದಿರುವ ಮೋಟೋರೋಲಾ ಮೋಟೋ ಜಿ 4.5 ಇಂಚಿನ ಬ್ರೈಟ್ ಹಾಗೂ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದು 1280 X 720 ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. 1 ಜಿಬಿ RAM ಇದರಲ್ಲಿದ್ದು 8ಜಿಬಿ/16ಜಿಬಿ ಸಂಗ್ರಹಣಾ ಸಾಮರ್ಥ್ಯ ಫೋನ್‌ಗಿದೆ. 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಪನೋರಮಿಕ್ ಬೆಂಬಲ ಇದಕ್ಕಿದೆ. ಫ್ರಂಟ್ ಫೇಸಿಂಗ್ ಕ್ಯಾಮೆರಾ ಪವರ್ 1.3 ಮೆಗಾಪಿಕ್ಸೆಲ್ ಇದ್ದು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ನಿಮಗೆ ಖರೀದಿಸಬಹುದಾಗಿದೆ.

ಮೋಟೋರೋಲಾ ಮೋಟೋ ಇ

#5

ಮೋಟೋರೋಲಾ ಮೋಟೋ ಇ 4.3 ಇಂಚಿನ ಡಿಸ್‌ಪ್ಲೇ ರೆಸಲ್ಯೂಶನ್‌ನೊಂದಿಗೆ ಬಂದಿದ್ದು 960x540 ಪಿಕ್ಸೆಲ್‌ಗಳ ರೆಸಲ್ಯೂಶನ್ ಫೋನ್‌ಗಿದೆ. ಡ್ಯುಯೆಲ್ ಸಿಮ್ ಬೆಂಬಲ ಡಿವೈಸ್‌ಗಿದ್ದು 1.2GHZ ಡ್ಯುಯೆಲ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್, 1ಜಿಬಿ RAM ಹಾಗೂ 4ಜಿಬಿ ಆಂತರಿಕ ಸಂಗ್ರಹಣೆ ಫೋನ್‌ಗಿದೆ. ಫೋನ್‌ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಚಾಲನೆಯಾಗುತ್ತಿದ್ದು 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಫೋನ್‌ನಲ್ಲಿದೆ. ಈ ಫೋನ್ ಅನ್ನು ನಿಮಗೆ ರೂ. 6.999 ಕ್ಕೆ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot