ಮಾರುಕಟ್ಟೆಯಲ್ಲಿರುವ ಟಾಪ್ ಗೇಮಿಂಗ್ ಸ್ಮಾರ್ಟ್‌ಫೋನ್ಸ್
ಸ್ಮಾರ್ಟ್‌ಫೋನ್‌ಗಳು ಇಂದಿನ ಜಾಗತಿಕ ಫೋನ್ ಮಾರುಕಟ್ಟೆಯ ಅಸಲಿ ನಾಯಕರುಗಳು ಎಂದೆನಿಸಿದ್ದಾರೆ. ಇವುಗಳಲ್ಲಿ ಬಳಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಶಕ್ತಿಯುತ ಪ್ರೊಸೆಸರ್‌ಗಳು ಇಂದಿನ ಕಂಪ್ಯೂಟರ್‌ಗಳ ಪ್ರಾಬಲ್ಯವನ್ನು ಫೋನ್‌ಗಳಿಗೆ ತಂದುಕೊಟ್ಟಿವೆ ಎಂದೇ ಹೇಳಬಹುದು.
ಇದು ಕಂಪ್ಯೂಟರ್‌ಗೆ ಸಮನಾಗಿದೆ ಎಂದು ಹೇಳುವಾಗಲೇ ಜನರು ಮನಸ್ಸಿನಲ್ಲಿ ಆಲೋಚಿಸುವುದು ಒಂದೇ ಮಾತು. ಇದು ಆಟವಾಡುವುದಕ್ಕೆ ಎಷ್ಟು ಬೆಂಬಲವನ್ನು ನೀಡಬಹುದೆಂದು. ಏಕೆಂದರೆ ಇಂದು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಅದರಲ್ಲಿ ಬೆಂಬಲಿಸವ ಆಟದ ಕಡೆಗೂ ಖರೀದಿಸುವವರು ಗಮನ ನೀಡುತ್ತಾರೆ. ಇಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಆಟಗಳು ಫೋನ್‌ಗಳಲ್ಲಿ ದೊರೆಯುತ್ತಿದ್ದು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ದಿ ಬೆಸ್ಟ್ ಎನ್ನಿಸುವಂತಹ ಕಾರ್ಯಗಳನ್ನು ಮೊಬೈಲ್ ಫೋನ್‌ಗಳು ತಮ್ಮ ಬಳಕೆದಾರರಲ್ಲಿ ಮಾಡಿಸುತ್ತಿವೆ.
ಹಾಗಿದ್ದರೆ ನೀವು ಗೇಮ್‌ನ ಆರಾಧಕರಾಗಿದ್ದರೆ, ನಿಮ್ಮ ಪಟ್ಟಿಯಲ್ಲಿ ಗೇಮಿಂಗ್ ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದರ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಹಾಗಿದ್ದರೆ ನಾವಿಲ್ಲಿ ಗೇಮ್ ಅನ್ನು ಬೆಂಬಲಿಸುವ ಟಾಪ್ ಐದು ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಇದರತ್ತ ನೀವೂ ಗಮನಹರಿಸಿ.

#1
ಸೋನಿ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್
ಇದು ಎಕ್ಸ್‌ಪೀರಿಯಾ ಶ್ರೇಣಿಯ ಫೋನ್‌ಗಳಾದ್ದರಿಂದ ಕೆಲವೊಂದು ವರ್ಷಗಳಿಂದೀಚೆಗೆ ಸೋನಿ ಕೆಲವೊಂದು ಉತ್ತಮ ಮಟ್ಟದ ಫೋನ್‌ಗಳನ್ನು ವಿತರಿಸುವಲ್ಲಿ ಸಿದ್ಧಹಸ್ತವಾಗಿದೆ. ಅದೇ ರೀತಿ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್ ಕೂಡ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

#2
ಎಚ್‌ಟಿಸಿ ಒನ್ ಎಮ್8
ಕೆಲವೊಂದು ವರ್ಷಗಳಿಂದೀಚೆಗೆ ಹಲವಾರು ಟೀಕೆಗಳಿಗೆ ಒಳಗಾಗಿ ಗರಿಷ್ಟ ಮಟ್ಟದ ಆದಾಯವನ್ನು ತಲುಪಲು ವಿಫಲವಾಗಿರುವ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಚ್‌ಟಿಸಿ. ಅದಕ್ಕಾಗಿಯೇ ಕಂಪೆನಿ ಎಚ್‌ಟಿಸಿ ಒನ್ ಎಮ್8 ನಂತಹ ಡಿವೈಸ್‌ನೊಂದಿಗೆ ಬಂದಿದ್ದು ನಿಮ್ಮ ಖರೀದಿಗೆ ತಕ್ಕುದಾದ ಮೌಲ್ಯವನ್ನು ಇದು ಒದಗಿಸುತ್ತದೆ.

#3
ಎಲ್‌ಜಿ ನೆಕ್ಸಸ್ 5
ಇತ್ತೀಚಿನ ದಿನಗಳಲ್ಲಿ ಗೂಗಲ್ ತಯಾರಿತ ನೆಕ್ಸಸ್ ಡಿವೈಸ್‌ಗಳು ಉತ್ತಮ ಮಾರುಕಟ್ಟೆಯನ್ನು ಗಳಿಸಿಕೊಳ್ಳುತ್ತಿವೆ. ಇದು ಅತ್ಯಾಧುನಿಕ ಪ್ರೊಸೆಸಿಂಗ್ ಪವರ್‌ನೊಂದಿಗೆ ಬಂದಿದ್ದು ಅತ್ಯಾಧುನಿಕ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

#4
ಎಲ್‌ಜಿ ಜಿ 2
ದಕ್ಷಿಣ ಕೊರಿಯಾದ ಕಂಪೆನಿ ಸ್ಯಾಮ್‌ಸಂಗ್ ಮಾಡುತ್ತಿರುವಂತಹ ವಿಶೇಷ ಜಾದೂವನ್ನು ವ್ಯವಹಾರದಲ್ಲಿ ಎಲ್‌ಜಿ ಜಿ2 ಮಾಡದದಿದ್ದರೂ, ತನ್ನ ಉತ್ತಮ ಪ್ರೊಸೆಸರ್ ಮತ್ತು ಬ್ಯಾಟರಿ ಸಾಮರ್ಥ್ಯದೊಂದಿಗೆ ಉತ್ತಮ ಗೇಮಿಂಗ್ ಬೆಂಬಲವನ್ನೊದಗಿಸುತ್ತದೆ.

#5
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್
ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ನಮಗೆ ಬೇಕಾಗಿರುವ ಕ್ವಾಡ್ ಕೋರ್ ಫೋನ್‌ಗಳನ್ನು ಕುರಿತು ನಾವಿಲ್ಲಿ ಚರ್ಚಿಸಿದ್ದು, ಓಕ್ಟಾ ಕೋರ್ ಪವರ್ ಏನೆಂಬುದನ್ನು ಕೂಡ ತಿಳಿದುಕೊಳ್ಳೋಣ. ಕ್ಯಾನ್‌ವಾಸ್ ನೈಟ್ ಎಂಟು ಕೋರ್‌ಗಳನ್ನು ಒದಗಿಸುತ್ತಿರುವ ಡಿವೈಸ್ ಆಗಿದೆ. ಇದು ಗೇಮ್ ಆಡಲು ಹೇಳಿ ಮಾಡಿಸಿದಂತಹ ಫೋನ್ ಆಗಿದೆ.


Click it and Unblock the Notifications








