Subscribe to Gizbot

ಅತ್ಯುತ್ತಮ ಮಾರಾಟವನ್ನು ಹೊಂದಿರುವ ಟಾಪ್ 5 ಫೋನ್ಸ್

Written By:

ಭಾರತದಲ್ಲಿ ಈಗಿನ ಕಾಲಮಾನದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೆಂದರೆ ಅತಿ ದೊಡ್ಡ ವಿಷಯವಾಗಿದೆ. ಐಓಸ್ ಪವರ್ ಉಳ್ಳ ಐಫೋನ್ ಮಾಡೆಲ್‌ಗಳು ಹೆಚ್ಚು ಪರಿಣಾಮ ಬೀರಿದ್ದರೂ, ಆಂಡ್ರಾಯ್ಡ್ ಫೋನ್‌ಗಳೆಡೆಗೆ ಬಳಕೆದಾರ ತನ್ನ ಪ್ರಾಥಮಿಕ ಗಮನವನ್ನು ಹರಿಸುತ್ತಾನೆ ಎಂಬುದು ನಿಜವಾದ ಮಾತಾಗಿದೆ.

ಮಾರುಕಟ್ಟೆಯಲ್ಲಿ ಅಸಂಖ್ಯ ಸಂಖ್ಯೆಯ ಆಂಡ್ರಾಯ್ಡ್ ಫೋನ್‌ಗಳು ಆಯ್ಕೆಯ ಪಟ್ಟಿಯಲ್ಲಿವೆ. ಇದರ ಬೆಲೆ ಕೂಡ ಹ್ಯಾಂಡ್‌ಸೆಟ್‌ನಿಂದ ಹ್ಯಾಂಡ್‌ಸೆಟ್‌ಗೆ ವಿಭಿನ್ನವಾಗುತ್ತದೆ. ಇನ್ನು ವೈಶಿಷ್ಟ್ಯಗಳು ಮತ್ತು ವೀಕ್ಷಣೆಯತ್ತ ಹೊರಟಾಗ ಪ್ರತಿಯೊಂದು ಸ್ಮಾರ್ಟ್‌ಫೋನ್ ಕೂಡ ತನ್ನದೇ ಪ್ರತ್ಯೇಕ ಅಂಶಗಳಿಂದ ಶೋಭಿಸುತ್ತಿದೆ.

ಈ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಮತ್ತು ರೀಟೈಲ್ ಶಾಪ್‌ಗಳಲ್ಲಿ ಕೂಡ ಲಭ್ಯವಿದ್ದು ಇದರ ಬೆಲೆಗಳು ಈ ಎರಡೂ ಕಡೆಗಳಲ್ಲಿ ಬೇರೆ ಬೇರೆಯಾಗಿರುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಉತ್ತಮ ಡೀಲ್‌ಗಳನ್ನು ಹೊಂದಿರುವ ಆಂಡ್ರಾಯ್ಡ್ ಫೋನ್‌ಗಳ ಕಡೆಗೆ ನಾವು ಗಮನ ಹರಿಸೋಣ. ಈ ಟಾಪ್ ಐದು ಫೋನ್‌ಗಳು ಬೆಸ್ಟ್ ಡೀಲ್‌ಗಳೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋನಿ ಇ ಲೈಫ್ S5.5

#1

ಜಿಯೋನಿ ಇ ಲೈಫ್ S5.5 ಪೂರ್ಣ ಎಚ್‌ಡಿ 5.0 ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದೆ. ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ ಕೂಡ ಡಿವೈಸ್‌ಗಿದೆ. 1.7GHz ಓಕ್ಟಾ ಕೋರ್ MediaTek MT6592 ಪ್ರೊಸೆಸರ್ ಜೊತೆಗೆ Mali 450-MP4 GPU ಜೊತೆಗಿದ್ದು 2 ಜಿಬಿ LPDDR3 RAM ಮತ್ತು 16 ಜಿಬಿ ಆಂತರಿಕ ಮೆಮೊರಿ ಫೋನ್‌ಗಿದೆ. ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್) ಇದರೊಂದಿಗಿದ್ದು ಅಮಿಗೋ 2.0 UI ಇದರಲ್ಲಿದೆ. 13 ಎಮ್‌ಪಿ ರಿಯರ್ ಕ್ಯಾಮೆರಾ ಫೋನ್‌ನ ವೈಶಿಷ್ಟ್ಯವಾಗಿದ್ದು 5 ಎಮ್‌ಪಿ ಫ್ರಂಟ್ ಕ್ಯಾಮೆರಾ ಡಿವೈಸ್‌ನಲ್ಲಿದೆ. ಸಂಪರ್ಕ ಅಂಶಗಳೆಂದರೆ 3 ಜಿ, ವೈಫೈ, 802.11 b/g/n, ವೈ-ಫೈ ನೇರ, ಬ್ಲ್ಯೂಟೂತ್ 4.0, A-GPS, USB, OTG ಮತ್ತು ಇನ್ನಷ್ಟು. ಇದರ 3 ಜಿ ಆರು ವಿಭಿನ್ನ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 2300 mAh ಬ್ಯಾಟರಿ ಇದರಲ್ಲಿದೆ.

ರೂ.18,624 ಅಮೆಜಾನ್‌ನಲ್ಲಿ, ಲಭ್ಯವಿದೆ.

ಮೋಟೋರೋಲಾ ಮೋಟೋ ಇ

#2

ರೂ: 6,999
ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮೋಟೋರೋಲಾ ಮೋಟೋ ಇ 4.3 ಇಂಚಿನ 960x540 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. 1.2GHz ಡ್ಯುಯಲ್ ಕೋರ್ 1 ಜಿಬಿ RAM ಫೋನ್ ವಿಶೇಷತೆಯಾಗಿದೆ. 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿರುವ ಡಿವೈಸ್ 32 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಓಎಸ್ ಇದರಲ್ಲಿದೆ. 5 ಎಮ್‌ಪಿ ರಿಯತ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಫೋನ್‌ನಲ್ಲಿದೆ. 1,989mAh ಬ್ಯಾಟರಿಯನ್ನು ಡಿವೈಸ್‌ನಲ್ಲಿ ನಿಮಗೆ ಕಾಣಬಹುದು.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಪ್ಲಸ್

#3

ಇನ್‌ಫೀಬಿಮ್‌ನಲ್ಲಿ ಪಟ್ಟಿಯಲ್ಲಿದೆ ದರ ರೂ: 11,499
ಇದು 5 ಇಂಚಿನ ಡಿಸ್‌ಪ್ಲೇ 1280 x 720p ಗೋರಿಲ್ಲಾ ಗ್ಲಾಸ್ ಅನ್ನು ಹೊಂದಿದೆ. HD A190 5GHz MediaTek MT6591 hexa-core CPU ನೊಂದಿಗೆ 1ಜಿಬಿ RAM ಅನ್ನು ಹೊಂದಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಆವೃತ್ತಿ 4.4 ಡಿವೈಸ್‌ನಲ್ಲಿದೆ. 8MP ರಿಯರ್ ಕ್ಯಾಮೆರಾ 2 ಎಮ್‌ಪಿ ಫ್ರಂಟ್ ಕ್ಯಾಮೆರಾ, 3ಜಿ, ಡ್ಯುಯಲ್-ಸಿಮ್, ವೈ-ಫೈ, ಬ್ಲ್ಯೂಟೂತ್ ಮತ್ತು 2000mAh ಬ್ಯಾಟರಿ ಫೋನ್‌ನಲ್ಲಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 2

#4

ಯುನೈಟ್ 2 ಅನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ರೂ 6,000 ಕ್ಕೆ ಪಟ್ಡಿ ಮಾಡಲಾಗಿದೆ. ಈ ಡಿವೈಸ್ 4 ಇಂಚಿನ IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು 800 x 480 ಪಿಕ್ಸೆಲ್‌ಗಳು, 5 ಎಮ್‌ಪಿ ರಿಯರ್ ಕ್ಯಾಮೆರಾ VGA ಗುಣಮಟ್ಟದ ಫ್ರಂಟ್ ಫೇಸಿಂಗ್ ಶೂಟರ್ ಇದರಲ್ಲಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದು. 1,500mAh ಬ್ಯಾಟರಿ ಡಿವೈಸ್‌ನಲ್ಲಿದ್ದು 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 1 ಜಿಬಿ RAM, 8 ಜಿಬಿ ROM ಇದರಲ್ಲಿದೆ. ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಡಿವೈಸ್‌ನಲ್ಲಿದ್ದು, ಸಂಪರ್ಕ ವಿಶೇಷತೆಗಳೆಂದರೆ ವೈ-ಫೈ, 3 ಜಿ, ಡ್ಯುಯಲ್ ಸಿಮ್, GPS ಮತ್ತು ಇತರ ಅಂಶಗಳಿವೆ.

ಎಚ್‌ಟಿಸಿ ಡಿಸೈರ್

#5

ಇಬೇನಲ್ಲಿ ಇದರ ಬೆಲೆ ರೂ 21,390 ಆಗಿದೆ. 5.5 ಇಂಚಿನ 720 ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಡಿವೈಸ್ ಕ್ವಾಡ್ ಕೋರ್ 1.6GHz ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ ಬಂದಿದ್ದು 1.5 ಜಿಬಿ RAM ಹ್ಯಾಂಡ್‌ಸೆಟ್‌ನಲ್ಲಿದೆ. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್ ಇದರ ವಿಶೇಷತೆಯಾಗಿದ್ದು ಕಂಪೆನಿಯ ಅಂಶ 5.5 UI ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 5 android Kitkat smartphones offering the best deals in town.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot