ಉತ್ತಮ ಗುಣಮಟ್ಟದ ಮೊಬೈತಯಾರಿಕೆಗೆ ಹೆಸರು ವಾಸುಯಾದಂತಹ ನೋಕಿಯಾ ಇತ್ತೀಚೆಗೆ ವಿಂಡೋಸ್ ಫೋನ್ 8 ಚಾಲಿತ ನೋಕಿಯಾ ಲೂಮಿಯಾ 920 ಹಾಗೂ 820 ಬಿಡುಗಡೆ ಮಾಡಿ ಸುದ್ದಿಯಲ್ಲಿತ್ತು. ಆದರೂ ಕೂಡ ನೋಕಿಯಾ ಭಾರತೀಯ ಗ್ರಾಹಕರುಗಳ ನಾಡಿಮಿಡಿತ ವಾದಂತಹ ಕಡಿಮೆ ಬೆಲೆಯ ಫೋನ್ ತಯಾರಿಕೆಯಲ್ಲಿ ತನ್ನಯ ಹಿಡಿತ ಮಾತ್ರ ಬಿಟ್ಟುಕೊಟ್ಟಿಲ್ಲ. ಈಗಲೂ ಕೂಡ ಹಲವರು ತಮ್ಮ ನಿತ್ಯ ಬಳಕೆಗೆ ಹಾಗೂ ನಿರಂತರ ಬಳಕೆಗಾಗಿ ಕಡಿಮೆ ಬೆಲೆಯ ಫೋನ್‌ಗಳ ಮೊರೆ ಹೋಗುತ್ತಾರೆ, ನೀವು ಕೂಡ ಇಂತಹ ಕಡಿಮೆ ಬೆಲೆಯ ಮೊಬೈಲ್ ಕೊಂಡುಕೊಳ್ಳ ಬೇಕೆಂದಿದ್ದಲ್ಲಿ 3,000 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿನ ನೋಕಿಯಾದ ಫೀಚರ್ ಫೋನ್ಸ್‌ಗಳ ಪಟ್ಟಿಯನ್ನು ಗಿಜ್ಬಾಟ್ ನಿಮಗಾಗಿ ಸಿದ್ಧಪಡಿಸಿದೆ ಒಮ್ಮೆ ಓದಿನೋಡಿ.