ಈ ಸಪ್ಟೆಂಬರ್‌ನ ಅದ್ಭುತ ಮಾರಾಟದ ಫೋನ್‌ಗಳಿವು

By Shwetha
|

ಸ್ಮಾರ್ಟ್‌ಫೋನ್‌ಗಳು ನಮ್ಮ ಸಂವಹಿಸುವ ವಿಧಾನವನ್ನೇ ಈಗ ಬದಲಾಯಿಸಿವೆ. ವೈಯಕ್ತಿಕ ಕಂಪ್ಯೂಟರ್‌ಗಿಂತಲೂ ಈಗ ಜಗತ್ತು ಸ್ಮಾರ್ಟ್‌ಫೋನ್‌ಗಳನ್ನೇ ಹೆಚ್ಚು ಅವಲಂಬಿಸಿದೆ ಎಂದು ವಿಶ್ಲೇಷಕರು ತಿಳಿಸುತ್ತಿದ್ದಾರೆ. ಆದರೆ ಬಹಳಷ್ಟು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್ ಅನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗಿತ್ತು. ಆದರೆ ಈ ಯೋಜನೆ ಕಾಲಕಳೆದಂತೆ ಬದಲಾಗುತ್ತಿದೆ ಎಂಬುದಕ್ಕೆ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆಯಾಗುವುದೇ ಇದಕ್ಕೆ ಕಾರಣವಾಗಿದೆ.

ಅಂತೂ ಹಲವಾರು ವಿಧಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಒಂದು ಭಾಗವಾಗಿ ಈಗ ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‌ಫೋನ್‌ನ ವಿನ್ಯಾಸದಿಂದ ಹಿಡಿದು ಬ್ಯಾಟರಿವರೆಗೆ ಇಲ್ಲಿ ಎಲ್ಲವೂ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಹೆಚ್ಚಿನ ವಿಶೇಷತಗಳನ್ನು ಕೊಡುಗೆಯಾಗಿ ನೀಡುತ್ತಿದೆ.

ಉದಾಹರಣೆಗೆ, ಹೊಸದಾಗಿ ಲಾಂಚ್ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನೋಡಲು ಅತ್ಯಾಕರ್ಷಕವಾಗಿದೆ. ಇನ್ನು ಐಫೋನ್ 6 ಆಗಮನ ಜಗತ್ತನ್ನೇ ಬದಲಾಯಿಸುವ ತಾಕತ್ತುಳ್ಳದ್ದಾಗಿ ಕಾರ್ಯನಿರ್ವಹಿಸಲಿದೆ.

ಖರೀದಿಸಬಹುದಾದ ಟಾಪ್ 15 ಮೈಕ್ರೋಮ್ಯಾಕ್ಸ್‌ ಫೋನ್ಸ್

ಇದೇ ರೀತಿಯ ಪವಾಡಗಳನ್ನು ಮಾಡಿರುವ ಸಪ್ಟೆಂಬರ್‌ನ ಟಾಪ್ ಐದು ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

#1

#1

ಮೂಲತಃ ಐಫೋನ್ 5S ಕೂಡ ಭಾರತದಲ್ಲಿ ಹೆಚ್ಚಿನ ಮೋಡಿಯನ್ನು ಮಾಡುತ್ತಿದೆ. ಐಫೋನ್ 5S ಮಾದರಿಯಲ್ಲಿ ಐಫೋನ್ ಅತ್ಯುತ್ತಮ ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಉತ್ತಮ ಕ್ಯಾಮೆರಾ ಮಾತ್ರವಲ್ಲದೆ ಅದ್ಭುತ ಹಾರ್ಡ್‌ವೇರ್ ಅನ್ನು ಈ ಫೋನ್ ಹೊಂದಿದೆ.

#2

#2

ಎಚ್‌ಟಿಸಿ ಒನ್ (M8) ನಂತೆ ನೆಕ್ಸಸ್ 5 ಕೂಡ ತುಂಬಾ ಗಂಭೀರವಾದ ಹ್ಯಾಂಡ್‌ಸೆಟ್ ಆಗಿ ಗಮನ ಸೆಳೆದಿದೆ. ಇದು ಅತ್ಯಾಧುನಿಕ ಆಂಡ್ರಾಯ್ಡ್ ಆವೃತ್ತಿಯ ಚಾಲನೆಯನ್ನು ಹೊಂದಿದ್ದು ಉತ್ತಮ ಪರದೆ, ವೇಗವಾದ ಪ್ರೊಸೆಸರ್, ಅದ್ಭುತ ಕ್ಯಾಮೆರಾ ಮತ್ತು ದೀರ್ಘ ಬ್ಯಾಟರಿ ಜೀವನವನ್ನು ನೀಡುತ್ತದೆ.

#3

#3

ಹೊಸ ಮೋಟೋ ಜಿಯನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಇದು ಗಂಭೀರ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಒದಗಿಸುತ್ತಿದ್ದು ಇದುವರೆಗೂ ಕಾಣದ ಅಂಶಗಳನ್ನು ಈ ಫೋನ್ ಹೊಂದಿದೆ. ಮೋಟೋ ಜಿ ಒಂದು ಅತ್ಯುತ್ತ ಸೆಟ್ ಆಗಿ ಮನಸೆಳೆಯುವಂತಿದೆ ಎಂಬುದು ಮಾತ್ರ ಸುಳ್ಳಲ್ಲ.

#4

#4

ಮೋಟೋ ಇ ಲಾಂಚ್‌ನೊಂದಿಗೆ ಮೋಟೋರೋಲಾ ನಮ್ಮ ಗಮನವನ್ನು ಮತ್ತೊಮ್ಮೆ ತನ್ನತ್ತ ಸೆಳೆದಿದೆ. ಇದರ ಬೆಲೆ ಕೇವಲ 7,000 ಆಗಿದ್ದು ಇದು ಉತ್ತಮ qHD ಡಿಸ್‌ಪ್ಲೇ ಒಳಗೊಂಡಂತೆ ಮನಮೋಹಕ ಹಾರ್ಡ್‌ವೇರ್ ಅನ್ನು ಒದಗಿಸುತ್ತಿದೆ. ಇದು ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ದೀರ್ಘ ಬ್ಯಾಟರಿ ಬಾಳಿಕೆಯೊಂದಿಗೆ ಲಭ್ಯವಿದೆ. ಇದು ಸಣ್ಣ ದಾಗಿದ್ದು ಹಗುರವಾಗಿದೆ.

#5

#5

ಮೈಕ್ರೋಮ್ಯಾಕ್ಸ್ ಯುನೈಟ್ 2 ನೊಂದಿಗೆ ಮಾಡಿರುವ ಅದ್ಭುತ ಕಮಾಲನ್ನು ಮಾತ್ರ ಮೆಚ್ಚುವಂಥದ್ದಾಗಿದೆ. ಮೋಟೋ ಇ ನಂತೆ ಇದು ಆಕರ್ಷಕವಾಗಿಲ್ಲದಿದ್ದರೂ, ಇದರ ವಿನ್ಯಾಸ ಯಾರನ್ನೂ ಕೂಡ ಮನಮೋಹಕಗೊಳಿಸುವಂತಿದೆ. ಇದು ದೊಡ್ಡ ಪರದೆ, ವೇಗವಾದ ಪ್ರೊಸೆಸರ್, ಉತ್ತಮ ಕ್ಯಾಮೆರಾ ಮತ್ತು ಬಹು ಭಾಷೆ ಬೆಂಬಲವನ್ನು ಈ ಡಿವೈಸ್ ಒದಗಿಸುತ್ತಿದೆ.

Best Mobiles in India

English summary
This article tells about Top 5 best smartphones buy for this September.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X