ಯುವ ಮನಸ್ಸುಗಳಿಗೆ ಇಷ್ಟವಾಗುವ ಟಾಪ್ 5 ಫೋನ್

Posted By: Staff

ಬಹುತೇಕ ಕಾಲೇಜುಗಳು ಈಗಾಗ್ಲೇ ತೆರೆದಿವೆ. ತಂದೆ ತಾಯಿಗಳಿಗೆ ಮಕ್ಕಳ  ಅಡ್ಮಿಶನ್, ಪುಸ್ತಕ, ಟ್ಯೂಶನ್, ಬಟ್ಟೆಬರೆ, ಇದೆಲ್ಲಾ ಮುಗಿದ ಮೇಲೆ ಕೊಡಿಸೋದಕ್ಕೆ ಬಾಕಿ ಉಳಿಯೋದು ಓಡಿಸುವುದಕ್ಕೆ ಗಾಡಿ, ತಿಂಗಳ ಶುರುವಿನಲ್ಲಿ ಮಕ್ಕಳ ಜೇಬಲ್ಲಿ ಪಾಕೆಟ್ ಮನಿ, ಜೊತೆಗೆ ಕೈಯಲ್ಲಿ ಮೊಬೈಲ್ ಕೊಡಿಸಿಬಿಟ್ಟರೆ ಈ ವರ್ಷ ಅವರ ಮೇಲೆ ಖರ್ಚು ಮುಗಿದಂತೆಯೇ.

ಆದರೆ ಮಕ್ಕಳ ಲೈಫ್ ಸ್ಟೈಲ್ ಗೆ ಹೊಂದುವ ಹಾಗೆ, ನಿಮ್ಮ ಬಜೆಟ್ಟಿಗೆ ತಕ್ಕ ಮೊಬೈಲ್ ಅನ್ನು ಆಯ್ಕೆ ಮಾಡುವುದು ಕಷ್ಟ. ಹಾಗಾಗಿ ಇಲ್ಲಿದೆ  ಟಾಪ್ 5 ಫೋನುಗಳು, ಯುವ ಮನಸ್ಸಿಗೆ ಇಷ್ಟವಾಗುವ ಯುವ ಮನಸಿನ ಹುಡುಗ/ಹುಡುಗಿಯರಿಗಾಗಿ.

1) ಸ್ಯಾಮ್ಸಂಗ್ ಗ್ಯಾಲಕ್ಸಿ Y:


ಆಂಡ್ರಾಯ್ಡ್ 2.3 ತಂತ್ರಾಂಶ ಇರುವ ಈ ಸ್ಮಾರ್ಟ್ ಫೋನ್ 3 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ ಹೊಂದಿದ್ದು,  7,400 ರೂಪಾಯಿಗೆ ಬರಲಿದೆ.

 

2) HTC ಎಕ್ಸ್ಪ್ಲೋರರ್:
3.2 ಇಂಚ್ TFT ಟಚ್ ಸ್ಕ್ರೀನ್ ಇರುವ ಈ ಫೋನ್ ಆಂಡ್ರಾಯ್ಡ್ 2.3 ತಂತ್ರಾಂಶ ಹೊಂದಿದ್ದು, 10 ಸಾವಿರಕ್ಕೆ ಬರಲಿದೆ.

 

3) ಮೈಕ್ರೊಮ್ಯಾಕ್ಸ್ ಸೂಪರ್ ಫೋನ್ ನಿಂಜಾ A52:

AISHA ವಾಯ್ಸ್ ರೆಕಗ್ನಿಷನ್ ತಂತ್ರಾಂಶವಿರುವ ಈ ಫೋನ್, 3.2 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು, ಆಂಡ್ರಾಯ್ಡ್ 2.3 ತಂತ್ರಾಂಶ ಹಾಗು ಡ್ಯುಯಲ್ ಸಿಮ್ ಜೊತೆ ಬರಲಿದೆ. ಇದರ ಬೆಲೆ 5,999 ರೂಪಾಯಿ.

 

4) ನೋಕಿಯಾ ಆಶಾ 200:

ದ್ವಿಸಿಮ್ ಹೊಂದಿರುವ ಈ ಫೋನ್ QWERTY ಕೀಪ್ಯಾಡ್ ಹೊಂದಿದ್ದು, ಸಿಮ್ಬಿಯನ್ S40 ತಂತ್ರಾಂಶ ಹೊಂದಿದೆ. 2.4 TFT ಡಿಸ್ಪ್ಲೇ ಇರುವ ಇದು 4,500 ರೂಪಾಯಿಗೆ ಬರಲಿದೆ.

 

5) ಬ್ಲ್ಯಾಕ್ ಬೆರಿ ಕರ್ವ್ 8520:

ಯುವ ಮನಸ್ಸುಗಳಿಗೆ ಇಷ್ಟವಾಗುವ ಟಾಪ್ 5 ಫೋನ್

ಬ್ಲ್ಯಾಕ್ ಬೆರಿ ಇರಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ಇದು ಹೇಳಿ ಮಾಡಿಸಿದಂಥ ಫೋನ್ ಆಗಿದ್ದು, ಈ ಫೋನ್ ಬ್ಲ್ಯಾಕ್ ಬೆರಿ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 2.4 ಇಂಚ್ ಸ್ಕ್ರೀನ್, 2 ಮೆಗಾಪಿಕ್ಸೆಲ್ ಕ್ಯಾಮರಾ ಕೂಡ ಇದರಲ್ಲಿ ಇದ್ದು, 8,300 ರೂಪಾಯಿಗೆ ಬರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot