ಏಪ್ರಿಲ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಇಲ್ಲಿ ನೋಡಿ!
ಭಾರತೀಯ ಮೊಬೈಲ್ ಮಾರುಕಟ್ಟೆಯು ಏಪ್ರಿಲ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಳ ಅಲೆಯನ್ನು ಎದುರು ನೋಡುತ್ತಿದೆ. ಈ ಬೇಸಿಗೆ ರಜೆಯ ಋತುವಿಗೆ ಮುಂಚಿತವಾಗಿ ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಗಳನ್ನು ನೀಡಲು ಹಲವು ಮೊಬೈಲ್ ಬ್ರ್ಯಾಂಡ್‌ಗಳು ಸಜ್ಜಾಗಿದ್ದು, ಬಜೆಟ್-ಸ್ನೇಹಿ ಸಾಧನಗಳಿಂದ ಹಿಡಿದು ಉನ್ನತ-ಮಟ್ಟದ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳವರೆಗೆ ಗ್ರಾಹಕರನ್ನು ತಲುಪಲು ಮುಂದಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪ್ರಸ್ತುತ ನೀವು ಸ್ಮಾರ್ಟ್‌ಫೋನ್ ಖರೀದಿಗೆ ಮುಂದಾಗಿದ್ದರೆ, ಈ ಲೇಖನದಲ್ಲಿ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್ ಕೂಡ ಇರಬಹುದು. ಬನ್ನಿ, ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ನೋಡೋಣ,
1. ರಿಯಲ್‌ಮಿ ನಾರ್ಜೊ 80x ರಿಯಲ್‌ಮಿ ನಾರ್ಜೊ 80 ಪ್ರೊ
ರಿಯಲ್‌ಮಿ ನಾರ್ಜೊ 80x ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಏಪ್ರಿಲ್ 9 ರಂದು ಬಿಡುಗಡೆಯಾಗಲಿವೆ. ಇವುಗಳಲ್ಲಿ ರಿಯಲ್‌ಮಿ ನಾರ್ಜೊ 80x ಫೋನ್ 6,000mAh ಸಾಮರ್ಥ್ಯದ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ನಿಂದ ಚಾಲಿತವಾಗುವ ಈ ಫೋನ್ 120Hz ಡಿಸ್ಪ್ಲೇಯನ್ನು ನೀಡುತ್ತದೆ, ಇದು ಸುಗಮ ದೃಶ್ಯ ಅನುಭವವನ್ನು ಖಾತ್ರಿಗೊಳಿಸುತ್ತದೆ. 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ, ಇದು ತ್ವರಿತವಾಗಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಕೆಲವು ಸೋರಿಕೆಗಳ ಮಾಹಿತಿ ಪ್ರಕಾರ ರಿಯಲ್‌ಮಿ ನಾರ್ಜೊ 80x ಫೋನ್ ಬೆಲೆ 12,999 ರೂ.ಗಳಿಂದ ಆರಂಭವಾಗಲಿದ್ದರೆ, ರಿಯಲ್‌ಮಿ ನಾರ್ಜೊ 80 ಪ್ರೊ ನಿರೀಕ್ಷಿತ ಬೆಲೆ 19,999 ರೂ.ಗಳಿಂದ ಪ್ರಾರಂಭವಾಗುತ್ತದೆ ಎನ್ನಲಾಗಿದೆ.
ರಿಯಲ್‌ಮಿ ನಾರ್ಜೊ 80x
* ಏಪ್ರಿಲ್ 9 ರಂದು ಬಿಡುಗಡೆಯಾಗಲಿದೆ.
* 6,000mAh ಬ್ಯಾಟರಿಯನ್ನು ಹೊಂದಿದೆ.
* ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6400 ಚಿಪ್‌ನಿಂದ ಚಾಲಿತವಾಗಲಿದೆ.
* 120Hz ಡಿಸ್ಪ್ಲೇಯನ್ನು ಹೊಂದಿದೆ.
* 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇವುಗಳಲ್ಲಿ ಪ್ರೊ ಮಾದರಿಯಾದ, ರಿಯಲ್‌ಮಿ ನಾರ್ಜೊ 80 ಪ್ರೊ ಫೋನ್ ಶಕ್ತಿಶಾಲಿಯಾದ ಡೈಮೆನ್ಸಿಟಿ 7400 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಇದು,
* ಡೈಮೆನ್ಸಿಟಿ 7400 ಚಿಪ್‌ಸೆಟ್
* 120Hz ಡಿಸ್ಪ್ಲೇಯನ್ನು ಹೊಂದಿದೆ.
* ಉಳಿದಂತೆ ರಿಯಲ್‌ಮಿ ನಾರ್ಜೊ 80x ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ವಿವೋ V50e:
ವಿವೋ ಕಂಪೆನಿಯ ಕ್ಯಾಮೆರಾ ಫೋಕಸ್ ಕೇಂದ್ರಿಯ ವಿವೋ V50e ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ, ಇದು ಸೋನಿ IMX882 ಸೆನ್ಸರ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು ಉತ್ತಮ ಛಾಯಾಗ್ರಹಣದ ಭರವಸೆ ನೀಡಿದೆ. . 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು IP69 ರೇಟಿಂಗ್‌ನೊಂದಿಗೆ, ಇದು ಬಾಳಿಕೆ ಮತ್ತು ಉತ್ತಮ ಸೆಲ್ಫಿ ಸಾಮರ್ಥ್ಯಗಳ ಸಮತೋಲನವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಭಾರತದಲ್ಲಿ ವಿವೋ V50e ಫೋನಿನ ನಿರೀಕ್ಷಿತ ಬೆಲೆ ₹26,990 ರಿಂದ ಪ್ರಾರಂಭವಾಗುತ್ತದೆ ಎನ್ನಲಾಗಿದೆ.
* ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ.
* ಸೋನಿ IMX882 ಸೆನ್ಸರ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
* 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
* IP69 ರೇಟಿಂಗ್ ಅನ್ನು ಹೊಂದಿದೆ.
iQOO Z10 ಮತ್ತು iQOO Z10x:
ಬಜೆಟ್ ಕೇಂದ್ರಿತ ಬೆಲೆಯ iQOO Z10x ಮತ್ತು iQOO Z10 ಏಪ್ರಿಲ್ 11 ರಂದು ಬಿಡುಗಡೆಯಾಗಲಿವೆ, ಇವುಗಳು ಗೇಮಿಂಗ್ ಮತ್ತು ದೀರ್ಘ ಬ್ಯಾಟರಿ ಅವಧಿಯ ಮೇಲೆ ಕೇಂದ್ರೀಕರಿಸಿದ ಸ್ಮಾರ್ಟ್‌ಫೋನ್‌ಗಳಾಗಿವೆ. iQOO Z10x ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಹೊಂದಿದ್ದು, 8GB RAM ಮತ್ತು 256GB ಸಂಗ್ರಹಣೆಯನ್ನು ನೀಡುತ್ತದೆ, ಮತ್ತು iQOO Z10 ಸ್ನಾಪ್‌ಡ್ರಾಗನ್ 7s Gen 3 ಚಿಪ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿದೆ, ಮತ್ತು 7,300mAh ಬ್ಯಾಟರಿಯನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಸೂಕ್ತವಾಗಿವೆ. ಇವುಗಳಲ್ಲಿ iQOO Z10ನ ನಿರೀಕ್ಷಿತ ಬೆಲೆ ₹21,999 ರಿಂದ ಪ್ರಾರಂಭವಾಗಲಿದ್ದರೆ, iQOO Z10 ಫೋನ್ ಬೆಲೆ ಕುರಿತಂತೆ ಯಾವುದೇ ಮಾಹಿತಿ ಇಲ್ಲ.
iQOO Z10
* ಏಪ್ರಿಲ್ 11 ರಂದು ಬಿಡುಗಡೆಯಾಗಲಿದೆ.
* 7,300mAh ಬ್ಯಾಟರಿಯನ್ನು ಹೊಂದಿದೆ.
* 90W ಫ್ಲ್ಯಾಶ್‌ಚಾರ್ಜ್ ಅನ್ನು ಬೆಂಬಲಿಸುತ್ತದೆ.
* ಸ್ನಾಪ್‌ಡ್ರಾಗನ್ 7s Gen 3 ಚಿಪ್‌ನಿಂದ ಚಾಲಿತವಾಗಲಿದೆ.
* 12GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿದೆ.
* ಕ್ವಾಡ್ ಕರ್ವ್ಡ್ AMOLED ಪರದೆಯನ್ನು ಹೊಂದಿದೆ.
iQOO Z10x:
* 6,000mAh ಬ್ಯಾಟರಿಯನ್ನು ಹೊಂದಿದೆ.
* 80W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.


Click it and Unblock the Notifications








