ಭಾರತದಲ್ಲಿ ನೀವು ಖರೀದಿಸಬಹುದಾದ ಬಜೆಟ್ ಸ್ನೇಹಿ ಹ್ಯಾಂಡ್‌ಸೆಟ್‌ಗಳು

Written By:

ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ಲಾಂಚಿಂಗ್ ಈ ವಾರ ಭರ್ಜರಿಯಾಗಿಯೇ ನಡೆದಿದೆ. ಅದರಲ್ಲೂ ನಮಗೆ ಅತ್ಯುತ್ತಮವಾಗಿ ಕಂಡುಬಂದಿರುವಂತಹದ್ದು ಮೈಕ್ರೋಮ್ಯಾಕ್ಸ್ ಯೂನಿಟ್ 2 ಉತ್ತಮ ವೈಶಿಷ್ಟ್ಯ ಮತ್ತು ಓಎಸ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ನಿಮ್ಮ ಕೈಗೆ ಸಿಗಲಿದೆ.

ಇದೇ ಸಮಯದಲ್ಲಿ ಐಬಾಲ್ ಕೂಡ ಮೂರು ಫೋನ್‌ಗಳನ್ನು ಅಧಿಕೃತವಾಗಿ ಘೋಷಿಸಿದ್ದು ಇದು ಆಂಡಿ 4 ಶ್ರೇಣಿ ಎಂಬ ಹೆಸರಿನಲ್ಲಿ ಖ್ಯಾತವಾಗಿದೆ. ಈ ಹ್ಯಾಂಡ್‌ಸೆಟ್‌ಗಳು ಕೂಡ ರೂ. 6,000 ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ. ಮೈಕ್ರೋಮ್ಯಾಕ್ಸ್ ಯೂನಿಟ್ 2 ಅನ್ನು ಕಂಪೆನಿ ರೂ 6,999 ದರದಲ್ಲಿ ಲಾಂಚ್ ಮಾಡಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ ಹಾಗೂ ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಈ ಫೋನ್ ಬಳಕೆದಾರರಿಗೆ ಭರ್ಜರಿ ಕೊಡುಗೆಯಾಗಿದೆ.

ಈ ವಾರ ಬಿಡುಗಡೆಯಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಡಿಮೆ ವೆಚ್ಚದ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಶ್ರೇನಿಯನ್ನು ನಿಮಗೆ ಈ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಯೂನಿಟ್ 2

#1

ಇದರ ಬೆಲೆ ರೂ. 6,999

ಮೈಕ್ರೋಮ್ಯಾಕ್ಸ್ ಯೂನಿಟ್ 2 4.7-ಇಂಚಿನ (800 x 480 ಪಿಕ್ಸೆಲ್‌ಗಳ) ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್‌ನೊಂದಿಗೆ ಬಂದಿದ್ದು IPS ಡಿಸ್‌ಪ್ಲೇಯನ್ನು ಹೊಂದಿದೆ. 1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್ ಇದರಲ್ಲಿದ್ದು 1ಜಿಬಿ ರ್‌ಯಾಮ್ ಅನ್ನು ಇದು ಹೊಂದಿದೆ. ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಇದರಲ್ಲಿ ಚಾಲನೆಯಾಗುತ್ತಿದ್ದು, ಓಎಸ್‌ನ ಇತ್ತೀಚಿನ ಆವೃತ್ತಿಯನ್ನು ಇದರಲ್ಲಿ ನವೀಕರಿಸಲಾಗಿದೆ.
ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5 ಎಂಪಿ ರಿಯರ್ ಕ್ಯಾಮೆರಾ ಮತ್ತು 2 ಎಂಪಿ ಮುಂಭಾಗ ಶೂಟಿಂಗ್ ಕ್ಯಾಮೆರಾ ಇದರಲ್ಲಿದೆ. ಈ ಬೆಲೆಗೆ ಸೂಕ್ತವಾಗಿರುವ ಫೋನ್ ಇದಾಗಿದೆ. ಯೂನಿಟ್ 2 ನಲ್ಲಿ 4ಜಿಬಿ ಆಂತರಿಕ ಮೆಮೊರಿ ಇದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದು. ಸಂಪರ್ಕ ಆಯ್ಕೆಗಳು ಇದರಲ್ಲಿ 3ಜಿ HSPA+, ವೈಫೈ 802.11 b/g/n, ಬ್ಲೂಟೂತ್ 4.0, GPS ಹೆಚ್ಚುವರಿಯಾಗಿ ಇದರಲ್ಲಿದೆ. ಡ್ಯುಯೆಲ್ ಸ್ಟ್ಯಾಂಡ್ ಬೈ ಮೋಡ್‌ನೊಂದಿಗಿರುವ ಡ್ಯುಯೆಲ್ ಸಿಮ್ ಹ್ಯಾಂಡ್‌ಸೆಟ್ ಇದಾಗಿದ್ದು 2000 mAh ಬ್ಯಾಟರಿ ಫೋನ್‌ನಲ್ಲಿದೆ.

ಐಬಾಲ್ ಆಂಡಿ IPS ಟೈಗರ್

#2

ಇದರ ಬೆಲೆ ರೂ. 6,299

ಇದು 4-ಇಂಚಿನ (480 x 800 ಪಿಕ್ಸೆಲ್‌ಗಳು) ಟಚ್ ಸ್ಕ್ರೀನ್ IPS ಡಿಸ್‌ಪ್ಲೇಯೊಂದಿಗೆ ಬಂದಿದೆ. 1.3 GHz ಕ್ವಾಡ್-ಕೋರ್ ಪ್ರೊಸೆಸರ್ ಇದರಲ್ಲಿದ್ದು 512ಎಂಬಿ ರ್‌ಯಾಮ್ ಫೋನ್‌ನಲ್ಲಿದೆ. ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್) ಓಎಸ್ ಇದರಲ್ಲಿ ಚಾಲನೆಯಾಗುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 5ಎಂಪಿ ರಿಯರ್ ಕ್ಯಾಮೆರಾ ಇದ್ದು ಫ್ರಂಟ್ ಫೇಸಿಂಗ್ VGA ಶೂಟರ್ ಇದೆ. ಐಬಾಲ್ ಆಂಡಿ ಟೈಗರ್ 4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದು. ಸಂಪರ್ಕ ಆಯ್ಕೆಗಳು 3G HSPA+,ವೈಫೈ 802.11 b/g/n, ಬ್ಲೂಟೂತ್ 4.0 ಜೊತೆಗೆ A2DP ಹಾಗೂ GPS ಇದರಲ್ಲಿದೆ. ಡ್ಯುಯೆಲ್ ಸಿಮ್ ಸ್ಲಾಟ್ ಅನ್ನು ಕೂಡ ಹ್ಯಾಂಡ್‌ಸೆಟ್‌ನಲ್ಲಿ ನಿಮಗೆ ಪಡೆದುಕೊಳ್ಳಬಹುದು. 1300 mAh ಬ್ಯಾಟರಿ ಫೋನ್‌ನಲ್ಲಿದೆ.

ಐಬಾಲ್ ಆಂಡಿ4 IPS ವೆಲ್ವೇಟ್

#3

ಇದರ ಬೆಲೆ ರೂ. 4,098
ಐಬಾಲ್ ಆಂಡಿ4 IPS ವೆಲ್ವೇಟ್ 4-ಇಂಚಿನ (480 x 800 ಪಿಕ್ಸೆಲ್‌ಗಳ) ಸ್ಪರ್ಶ ಪರದೆ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದೆ.
1.3 GHz ಡ್ಯುಯೆಲ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 256ಎಂಬಿ ರ್‌ಯಾಮ್ ಫೋನ್‌ನಲ್ಲಿದೆ. ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್) ಫೋನ್‌ನಲ್ಲಿ ಚಾಲನೆಯಾಗುತ್ತದೆ. ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5 ಎಂಪಿ ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು ಫ್ರಂಟ್ -ಫೇಸಿಂಗ್ VGA ಶೂಟರ್ ಫೋನ್‌ನ ವಿಶೇಷತೆಯಾಗಿದೆ. ಇದು 2ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 32ಜಿಬಿಗೆ ವಿಸ್ತರಿಬಹುದು. 3ಜಿ ಕನೆಕ್ಟಿವಿಟಿ ಫೋನ್‌ನ ವಿಶೇಷತೆಯಾಗಿದೆ. 2ಜಿ (EDGE),ವೈಫೈ 802.11 b/g/n, ಬ್ಲೂಟೂತ್ 4.0 ನೊಂದಿಗೆ A2DP, aGPS ಫೋನ್‌ನಲ್ಲಿದೆ. ಡ್ಯುಯೆಲ್ ಸಿಮ್ ಬೆಂಬಲ ಫೋನ್‌ಗಿದ್ದು (GSM + GSM) 1300 mAh ಬ್ಯಾಟರಿ ಇದರಲ್ಲಿದೆ.

ಐಬಾಲ್ ಆಂಡಿ4 IPS ಜೆಮ್

#4

ಇದರ ಬೆಲೆ ರೂ 4,999
ಐ ಬಾಲ್ ಆಂಡಿ4 IPS ಜೆಮ್ 4 ಇಂಚಿನ (480 x 800 pixels) ಸ್ಪರ್ಶ ಪರದೆಯನ್ನು ಹೊಂದಿದ್ದು IPS ಡಿಸ್‌ಪ್ಲೇ ಇದರಲ್ಲಿದೆ. 1.3 GHz ಡ್ಯುಯೆಲ್ - ಕೋರ್ ಪ್ರೊಸೆಸರ್ ಫೋನ್‌ನಲ್ಲಿದ್ದು 256ಎಂಬಿ ರ್‌ಯಾಮ್ ಇದರ ವಿಶೇಷತೆಯಾಗಿದೆ. ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್) ಓಎಸ್ ಫೋನ್‌ನಲ್ಲಿದ್ದು ಆಂಡಿ4 IPS ವೆಲ್ವೇಟ್‌ನಲ್ಲಿರುವ ಫೀಚರ್ ಇದಲ್ಲಿದೆ. 3ಜಿ HSPA+ ಸಂಪರ್ಕ ಆಯ್ಕೆ ಫೋನ್‌ನಲ್ಲಿದೆ. ವೈಫೈ 802.11 b/g/n, ಬ್ಲೂಟೂತ್ 4.0 ನೊಂದಿಗೆ A2DP, GPS ಹಾಗೂ ಡ್ಯುಯೆಲ್ ಸಿಮ್ ಅನ್ನು (GSM + GSM) ಕಂಪೆನಿ ಕೊಡುಗೆಯಾಗಿ ನೀಡುತ್ತಿದೆ. 1300 mAh ಬ್ಯಾಟರಿ ಸಾಮರ್ಥ್ಯ ಫೋನ್‌ನಲ್ಲಿದೆ.

ಮೋಟೋರೋಲಾ ಮೋಟೋ ಇ

#5

ಇದರ ಬೆಲೆ ರೂ 6,999
ಮೋಟೋರೋಲಾ ಮೋಟೋ ಇ 4.3ಇಂಚಿನ (960x540 ಪಿಕ್ಸೆಲ್‌ಗಳು) ರೆಸಲ್ಯೂಶನ್ ಡಿಸ್‌ಪ್ಲೇ ಇದರಲ್ಲಿದೆ. 1.2 GHz ಡ್ಯುಯೆಲ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 200 ಪ್ರೋಸೆಸರ್ ಫೋನ್‌ನಲ್ಲಿದ್ದು ಆಂಡ್ರೆನೋ 302 GPU ಫೋನ್‌ನಲ್ಲಿದೆ. ಆಂಡ್ರೀನೋ 302 GPU ನೊಂದಿಗೆ 1ಜಿಬಿ ರ್‌ಯಾಮ್ ಮತ್ತು 4ಜಿಬಿ ಆಂತರಿಕ ಸಂಗ್ರಹಣೆಯನ್ನು ಇದು ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಬಳಸಿಕೊಂಡು 32ಜಿಬಿವರೆಗೆ ಇದನ್ನು ವಿಸ್ತರಿಸಬಹುದು. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಆವೃತ್ತಿಯನ್ನು ಫೋನ್ ನಿಮಗೆ ನೀಡಲಿದ್ದು 5-ಮೆಗಾಪಿಕ್ಸೆಲ್‌ಗಳ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡುತ್ತಿದೆ. 1,989mAh ಬ್ಯಾಟರಿ ಸಾಮರ್ಥ್ಯ ಫೋನ್‌ನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot