ಟಾಪ್ 5 ಮೊಬೈಲ್ ಫೋನ್

Posted By: Varun
 ಟಾಪ್ 5 ಮೊಬೈಲ್ ಫೋನ್

ಮೊಬೈಲ್ ಫೋನ್ ಕಂಪನಿಗಳು ದಿನಕ್ಕೊಂದು ಹೊಸ ಫೋನ್ ಗಳನ್ನ ಬಿಡುಗಡೆ ಮಾಡುತ್ತವೆ. ಯಾವುದನ್ನ ತೆಗೆದುಕೊಳ್ಳಬೇಕೆಂಬ ವಿಚಾರ ಬಂದಾಗ ನಮ್ಮ ಬಜೆಟ್ ಗೆ ಹೊಂದುವಂತೆ ಹುಡುಕುವುದು ಕಷ್ಟದ ಕೆಲಸ. ಹಾಗಾಗಿಯೇ ನಾವು 5 ಸಾವಿರ ರೂಪಾಯಿ ಒಳಗೆ ಸಿಗುವ ಉತ್ತಮ ಮೊಬೈಲ್ ಗಳ ಪಟ್ಟಿ ನಿಮಗಾಗಿ ಕೊಡುತ್ತಿದ್ದೇವೆ

1. ನೋಕಿಯಾ C2-03

ಅತ್ಯಂತ ಬೇಡಿಕೆಯಲ್ಲಿರುವ ಫೋನ್ ನಲ್ಲಿ ಒಂದಾದ ಇದು ಟಚ್ ಮತ್ತು ಟೈಪ್ ಎರಡನ್ನೂ ಹೊಂದಿದೆ. ಡ್ಯುಯಲ್ ಸಿಮ್, 2 ಮೆಗಾ ಪಿಕ್ಸೆಲ್ ಕ್ಯಾಮರಾ, 32 ಜಿ.ಬಿ ಮೈಕ್ರೋ ಎಸ್.ಡಿ ಕಾರ್ಡ್ ಹಾಗು 2.6 ಇಂಚ್ ಪರದೆ ಹೊಂದಿದೆ .ಇದರ ಬೆಲೆ 4,425.

2. ಮೋಟೊರೋಲ ಕ್ವಾರ್ಟ್ಜ್ EX212

ಅತ್ಯುತ್ತಮ ಡಿಸೈನ್ ಹೊಂದಿರುವ ಈ ಫೋನ್ ಡ್ಯುಯಲ್ ಸಿಮ್, 2 ಮೆಗಾ ಪಿಕ್ಸೆಲ್ ಕ್ಯಾಮರಾ, 2.4 ಇಂಚ್ ಪರದೆ ಮತ್ತು 16 ಜಿ.ಬಿ ಆಂತರಿಕ ಮೆಮೊರಿ ಹೊಂದಿದೆ. ಇದರ ಬೆಲೆ 4,599.

3. ನೋಕಿಯಾ ಆಶಾ 200

ಇತ್ತೇಚೆಗೆ ತಾನೇ ಬಿಡುಗಡೆ ಆದ ಕಡಿಮೆ ಬಜೆಟ್ ನ ಮೊಬೈಲ್ ಗಳಲ್ಲಿ ಇದು ಮೊದಲಿಗ. ಡ್ಯುಯಲ್ ಸಿಮ್, 2.4 ಇಂಚ್ ಪರದೆ, 2 ಮೆಗಾ ಪಿಕ್ಸೆಲ್ ಕ್ಯಾಮರಾ, QWERTY ಕೀ ಪ್ಯಾಡ್ ಹೊಂದಿದ್ದು, 32 ಜಿ.ಬಿ ಮೆಮೊರಿ ವರೆಗೂ ಮೆಮೊರಿ ವಿಸ್ತರಿಸುವ ಅವಕಾಶವಿದೆ .ಇದರ ಬೆಲೆ 4,370.

4. ಸ್ಯಾಮ್ ಸಂಗ್ ಚಾಟ್ C3222

ಉತ್ತಮ ಫೀಚರ್ ಒಳಗೊಂಡಿರುವ ಇದು ಕೂಡ ಡ್ಯುಯಲ್ ಸಿಮ್ ಹೊಂದಿದೆ. 2.2 ಇಂಚ್ ಪರದೆ, 1.3 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು 8 ಜಿ.ಬಿ ಮೆಮೊರಿ ವರೆಗೂ ವಿಸ್ತರಿಸಬಹುದು. ಇದರ ಬೆಲೆ 3,850.

5. ಕಾರ್ಬನ್ ೧೬೧೬ ಮ್ಯಾಜಿಕ್

ಭಾರತೀಯ ಕಂಪನಿಯಾದ ಕಾರ್ಬನ್ ಉತ್ಪಾದಿಸಿರುವ ಮೊಬೈಲ್ ಆದ ಇದರಲ್ಲಿ 3.5 ಇಂಚ್ ಪರದೆ, 3D ,ಡ್ಯುಯಲ್ ಸಿಮ್ , 3.2 ಮೆಗಾ ಪಿಕ್ಸೆಲ್ ಕ್ಯಾಮರಾ ಮತ್ತು 8 ಜಿ.ಬಿ ಮೆಮೊರಿ ಹೊಂದಿದೆ. ಇದರ ಬೆಲೆ 3,850.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot