Home
ಮೊಬೈಲ್

ನಿಮ್ಮ ಸಂಗಾತಿಗೆ ದುಬಾರಿ ಸ್ಮಾರ್ಟ್‌ಫೋನ್ ಹುಡುಕ್ತಿದೀರಾ? ಬೆಸ್ಟ್ 5 ದುಬಾರಿ ಮೊಬೈಲ್​ಗಳು ಇಲ್ಲಿವೆ

ದುಬಾರಿ ಗಿಫ್ಟ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ವಿಶೇಷ ಸಂದರ್ಭಗಳಲ್ಲಿ ಎಕ್ಸ್​ಪೆನ್ಸಿವ್ ಗಿಫ್ಟ್, ಲಕ್ಷುರಿ ಕಾರು, ಆಭರಣ ಇತ್ಯಾದಿಗಳನ್ನು ಉಡುಗೊರೆ ಕೊಡುವುದು ಸಂಪ್ರದಾಯ. ಬರ್ತ್‌ಡೇ, ಫ್ರೆಂಡ್‌ಶಿಪ್ ಡೇ, ವ್ಯಾಲೆಂಟೈನ್ಸ್ ಡೇ, ಮೊದಲ ಭೇಟಿ.. ಹೀಗೆ ಹಲವು ಸ್ಪೆಷಲ್‌ ಡೇಗಳಲ್ಲಿ ದುಬಾರಿ ಗಿಫ್ಟ್‌ನದ್ದೇ ಕಾರುಬಾರು!

ಹೌದು, ಸಂಬಂಧದಲ್ಲಿ ಗಿಫ್ಟ್‌ಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಇತ್ತೀಚೆಗೆ ದುಬಾರಿ ಗಿಫ್ಟ್‌ ನೀಡುವ ಪದ್ಧತಿ ಹುಟ್ಟಿಕೊಂಡಿದೆ. ಅದರಲ್ಲೂ ದುಬಾರಿ ಪೋನ್‌ಗಳನ್ನು ಗಿಫ್ಟ್‌ ಕೊಡುವ (ಪಡೆದುಕೊಳ್ಳುವ) ಸಂಪ್ರದಾಯ ಹೆಚ್ಚಾಗಿದೆ. ಯಾಕೆಂದರೆ, ಮೊಬೈಲ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಹೀಗಾಗಿ, ತಮ್ಮ ಆಪ್ತರಿಗೆ, ಸ್ನೇಹಿತರಿಗೆ, ಸಂಗಾತಿಗಳಿಗೆ ದುಬಾರಿ ಬೆಲೆಯ ಫೋನ್ ಗಿಫ್ಟ್ ಮಾಡುತ್ತಾರೆ.

ದುಬಾರಿ ಸ್ಮಾರ್ಟ್‌ಫೋನ್ ಹುಡುಕ್ತಿದೀರಾ? ಬೆಸ್ಟ್ 5  ಮೊಬೈಲ್​ಗಳು ಇಲ್ಲಿವೆ

ಸ್ಪೆಷಲ್ ಡೇಗಳು ಬಂದಾಗ ಹೆಚ್ಚು ಜನರು ದುಬಾರಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸರ್ಚ್ ಮಾಡುತ್ತಾರೆ. ನಿಮ್ಮ ಸಂಗಾತಿಗೆ ಏನು ಉಡುಗೊರೆ ನೀಡಬೇಕೆಂದು ನೀವು ಗೊಂದಲಕ್ಕೊಳಗಾಗಿದ್ದರೆ, ಅಂತವರಿಗೆ ಇಲ್ಲಿರುವ ದುಬಾರಿ ಮೊಬೈಲ್‌ ಫೋನ್‌ ಲೀಸ್ಟ್ ತುಂಬಾನೇ ಉಪಯೋಗವಾಗಲಿದೆ. ನಾವು ಇಂದು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಈ ಫೊನ್‌ಗಳ ಕ್ಯಾಮೆರಾ ಗುಣಮಟ್ಟ, ಪ್ರೊಸೆಸರ್, ಬ್ಯಾಟರಿ ಬ್ಯಾಕಪ್‌, ಡಿಸ್ಪ್ಲೇ, ಅತ್ಯುತ್ತಮ ಫೀಚರ್ ಹಾಗೂ ವೈಶಿಷ್ಟ್ಯಗಳನ್ನು ಹೊಂದಿವೆ. ಅವು ಈ ಕೆಳಗಿನಂತಿವೆ ನೋಡಿ.

ಟಾಪ್ 5 ದುಬಾರಿ ಸ್ಮಾರ್ಟ್‌ಫೋನ್‌ಗಳ ಪಟ್ಟಿ

ಐಫೋನ್ 15 ಪ್ರೊ ಮ್ಯಾಕ್ಸ್ : ನಾವು ಪಟ್ಟಿ ಮಾಡಿರುವ ದುಬಾರಿ ಸ್ಮಾರ್ಟ್‌ಫೋನ್‌ಗಳ ಪೈಕಿ ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಒಂದಾಗಿದೆ. ಇದರ ಬೆಲೆ ಬರೋಬ್ಬರಿ 1,59,900 ರೂಪಾಯಿ. ಇದು ಅತಿ ದುಬಾರಿ ಸ್ಮಾರ್ಟ್ ಫೋನ್ ಆಗಿದೆ. ಈ ಫೋನ್ ಸೂಪರ್-ಶಾರ್ಪ್ OLED ಡಿಸ್ಪ್ಲೇ, ಶಕ್ತಿಯುತ A17 ಪ್ರೊ ಚಿಪ್, ಮತ್ತು ಸಖತ್ ಕ್ಯಾಮೆರಾ ವ್ಯವಸ್ಥೆ, ಅತ್ಯುತ್ತಮ ವೀಡಿಯೊಗಳನ್ನು ನೀಡುತ್ತದೆ. ಐಫೋನ್ 15 ಪ್ರೊ ಮ್ಯಾಕ್ಸ್ ನಯವಾದ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಅವಧಿಯನ್ನು ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5 : ಐಫೋನ್ ಬಳಿಕ ನಮಗೆ ದುಬಾರಿ ಎನಿಸಿದ ಮೊಬೈಲ್‌ ಪೈಕಿ ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5 (Samsung Galaxy Z Fold 5) ಕೂಡ ಒಂದು. ಇದರ ಬೆಲೆ 1,54,999 ರೂಪಾಯಿ. ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5 ಸುಲಭವಾಗಿ ಮಡಚಬಹುದಾದ ಫೀಚರ್‌ನಿಂದ ಗ್ರಾಹಕರ ಗಮನ ಸೆಳೆದಿದೆ. ಅತ್ಯುತ್ತಮ ಫೋಲ್ಡಬಲ್ ಫೋನ್‌ಗಳಲ್ಲಿ ಗ್ಯಾಲಕ್ಸಿ Z ಫೋಲ್ಡ್ 5 ಒಂದಾಗಿದೆ. ಮಡಚಿದಾಗ ಇದನ್ನು ಸಾಮಾನ್ಯ ಸ್ಲ್ಯಾಬ್ ಫೋನ್‌ನಂತೆ ಬಳಸಬಹುದು. ಇದು ಶಕ್ತಿಯುತ ಪ್ರೊಸೆಸರ್, ಬಹುಮುಖ ಕ್ಯಾಮೆರಾ ವ್ಯವಸ್ಥೆ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಒನ್ ಪ್ಲಸ್ ಓಪನ್ : ಪ್ರಸ್ತುತ ಹೆಚ್ಚು ಜನರು ಒನ್ ಪ್ಲಸ್ ಮೊಬೈಲ್‌ ಖರೀದಿಯತ್ತ ಮುಖಮಾಡಿದ್ದಾರೆ. ಈ ಪೈಕಿ ಒನ್ ಪ್ಲಸ್ ಓಪನ್ (OnePlus Open) ಮೋಬೈಲ್‌ ಕೂಡ ಒಂದಾಗಿದೆ. ಇದ ಬೆಲೆ 1,39,999 ರೂಪಾಯಿ. ಇದು ಫೋಲ್ಡಬಲ್ ಫೋನ್‌ಗಳಲ್ಲಿ OnePlusನ ಮೊದಲ ಪ್ರವೇಶವಾಗಿದೆ. OnePlus ಓಪನ್ ದೊಡ್ಡ ಫೋಲ್ಡಬಲ್ ಡಿಸ್‌ಪ್ಲೇ, ಶಕ್ತಿಯುತ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್ ಮತ್ತು ಟ್ರಿಪಲ್ ಲೆನ್ಸ್ ಕ್ಯಾಮೆರಾ ಹೊಂದಿದೆ.

ಆ್ಯಪಲ್ ಐಫೋನ್ 15 ಪ್ರೊ : ಆ್ಯಪಲ್ ಐಫೋನ್ 15 ಪ್ರೊ (iPhone 15 Pro) ಬೆಲೆ 1,34,900 ರೂಪಾಯಿ. ಐಫೋನ್ 15 ಪ್ರೊ , ಐಫೋನ್ 15 ಪ್ರೊ ಮ್ಯಾಕ್ಸ್‌ನಂತೆಯೇ ಅನೇಕ ವೈಶಿಷ್ಟ್ಯಗಳನ್ನು ಒಂದಿದೆ. ಐಫೋನ್ 15 ಪ್ರೊ ಅದ್ಭುತವಾದ ಕ್ಯಾಮರಾ ಸಿಸ್ಟಮ್, ಅದೇ ಶಕ್ತಿಶಾಲಿ A17 Pro ಚಿಪ್ ಮತ್ತು ಅದ್ಭುತ OLED ಡಿಸ್ಪ್ಲೇಯನ್ನು ಹೊಂದಿದೆ. ಬ್ಯಾಟರಿ ಬ್ಯಾಕಪ್ ಸಾಕಷ್ಟು ಉತ್ತಮವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ : ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ (Samsung Galaxy S24 Ultra) ಮೊಬೈಲ್‌ ಬೆಲೆ 1,29,999 ರೂಪಾಯಿ. ಇದು ಬೃಹತ್ AMOLED ಡಿಸ್ಪ್ಲೇ, 8 Gen 3 ಪ್ರೊಸೆಸರ್ ಮತ್ತು ಬಹುಮುಖ ಕ್ಯಾಮೆರಾ ವ್ಯವಸ್ಥೆಗಳನ್ನು ಹೊಂದಿದೆ. ಇದು ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್‌ ಹೊಂದಿದೆ.

ದುಬಾರಿ ಫೋನ್ ಎಲ್ಲರಿಗೂ ಸರಿ ಹೊಂದುವುದಿಲ್ಲ. ನೀವು ಯಾವ ವೈಶಿಷ್ಟ್ಯಗಳು ಹೆಚ್ಚು ಮುಖ್ಯ ಎಂದು ಪರಿಗಣಿಸುತ್ತೀರೋ ಆ ಮೊಬೈಲ್‌ಗಳನ್ನು ಖರೀದಿಸುವುದು ಉತ್ತಮ. ಕ್ಯಾಮೆರಾ ಗುಣಮಟ್ಟ, ಸ್ಪೀಡ್‌ ಪ್ರೊಸೆಸರ್, ದೀರ್ಘಕಾಲೀನ ಬ್ಯಾಟರಿ ಬ್ಯಾಕಪ್‌, ಅದ್ಭುತ ಡಿಸ್ಪ್ಲೇ ಸೇರಿದಂತೆ ನಿಮ್ಮ ಅಭಿರುಚಿಗೆ ತಕ್ಕಂತೆ ಸರಿಯಾಗಿ ಫೋನ್ ಆಯ್ಕೆ ಮಾಡಿ.

Best Mobiles in India

English summary
we give you the Top 5 list of the most expensive available smartphones on the market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+