ನೀವು ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಫೋನ್‌ಗಳು

By Shwetha
|

ಕೆಲವು ತಿಂಗಳುಗಳಿಂದ ನಮ್ಮ ಕಿವಿಗೆ ಬೀಳುತ್ತಿರುವ ಸುದ್ದಿ ಒಂದೇ ಆಪಲ್‌ನ ಹೊಸ ಹ್ಯಾಂಡ್‌ಸೆಟ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂಬುದು. ಐಫೋನ್ 6 ನ ಬಿಡುಗಡೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿ ಇವೆ ಆದರೂ ಈ ಸಮಯದಲ್ಲಿ ನಾವು ಏಕೆ ಕೆಲವು ಉತ್ಕೃಷ್ಟವಾದ ಫೋನ್‌ಗಳತ್ತ ನಮ್ಮ ನೋಟವನ್ನು ಹರಿಸಬಾರದು. ಆಪಲ್ ಅಲ್ಲದೆ ನಿಮ್ಮ ಮನಸೆಳೆಯುವ ಮತ್ತು ಭಾರತದಲ್ಲಿ ದಿ ಬೆಸ್ಟ್ ಎಂದೇ ಚಿರಪರಿಚಿತವಾದ ಹಲವಾರು ಬ್ರಾಂಡ್‌ಗಳಿವೆ.

ನೋಕಿಯಾ, ಸೋನಿ, ಎಚ್‌ಟಿಸಿ, ಅಲಾಕ್ಟಲ್ ಹಾಗೂ ಮೋಟೋರೋಲಾ ಹೆಚ್ಚು ಬ್ರಾಂಡೆಡ್ ಫೋನ್‌ಗಳಾಗಿವೆ. ನೋಕಿಯಾವನ್ನು ಮೈಕ್ರೋಸಾಫ್ಟ್ ಪೂರ್ಣವಾಗಿ ಕೊಂಡುಕೊಂಡಿದ್ದರೂ ಕಂಪೆನಿ ನೋಕಿಯಾ ಹೆಸರಿನಲ್ಲೇ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಹೆಸರಿಗಿರುವ ಮಹತ್ವವನ್ನು ಸಾರುತ್ತಿದೆ. ಇತ್ತೀಚೆಗೆ ಮಾರುಕಟ್ಟೆಗೆ ಲಾಂಚ್ ಆಗಿರುವ ನೋಕಿಯಾ 630 ನಿಮಗೆ ಆರಾಮದಾಯಕವಾದ ದರದಲ್ಲಿ ಲಭ್ಯವಿದೆ. ಲ್ಯೂಮಿಯಾ 630 ಸಿಂಗಲ್ ಸಿಮ್ ಬೆಲೆ ರೂ. 10,500 ಆಗಿದ್ದು ಡ್ಯುಯೆಲ್ ಸಿಮ್ ಬೆಲೆ ರೂ 11,500 ಆಗಿದೆ.

ಮೊಟೋರೋಲಾದ ಯಶಸ್ಸಿನ ಕಥೆ ನಾವು ಹೇಳದೆಯೇ ನಿಮಗೆ ಗೊತ್ತಿರುವಂಥದ್ದೇ. ಅತಿ ಕಡಿಮೆ ದರದಲ್ಲಿ ಮೋಟೋ ಇ ಯನ್ನು ಉತ್ಪಾದಿಸಿ ಇದಕ್ಕೆ ಅತ್ಯಾಧುನಿಕವಾದ ಆಂಡ್ರಾಯ್ಡ್ ಓಎಸ್ ಅನ್ನು ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಮೋಟೋರೋಲಾ ಯಶಸ್ಸಿ ಮುನ್ನುಡಿಯನ್ನು ತಾನೇ ತಾನಾಗಿ ಬರೆಯಿತು. ಅದೇ ರೀತಿ ಸೋನಿ ಕೂಡ ಎಕ್ಸ್‌ಪೀರಿಯಾ z2 ಮೂಲಕ ಮಾರುಕಟ್ಟೆಯಲ್ಲಿ ಮೋಡಿ ಮಾಡುತ್ತಿದೆ. ಶಕ್ತಿಯುತವಾದ ಪ್ರೊಸೆಸರ್ ಅತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿರುವ ಸೋನಿಯ ಈ ಸ್ಮಾರ್ಟ್‌ಫೋನ್ ತನ್ನ ಬಳಕೆದಾರರ ಮೇಲೆ ಸುಂದರವಾದ ಮಾಯಾಜಾಲವನ್ನೇ ಮಾಡುತ್ತಿದೆ.

ನಿಮ್ಮನ್ನು ಅತ್ಯಾಕರ್ಷಿಸುವ ಕೆಲವೊಂದು ಸ್ಮಾರ್ಟ್‌ಫೋನ್‌ಗಳ ವಿವರವಾದ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದು ಅವುಗಳು ಏಕೆ ಪ್ರತ್ಯೇಕ ಮತ್ತು ಬೆಸ್ಟ್ ಎಂಬುದು ನಿಮಗೆ ತಿಳಿಯುತ್ತದೆ.

#1

#1

ನೋಕಿಯಾ ಲ್ಯೂಮಿಯಾ 630 4.5 ಇಂಚಿನ ಕ್ಲಿಯರ್ ಬ್ಲ್ಯಾಕ್ IPS LCD ಡಿಸ್‌ಪ್ಲೇ ಜೊತೆಗೆ FWVGA ರೆಸಲ್ಯೂಶನ್‌ನ 854 x 480 ಪಿಕ್ಸೆಲ್‌ಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ಇದರಲ್ಲಿ 1.2Ghz ಕ್ವಾಡ್-ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 ಸಿಪಿಯು ಇದ್ದು, 512 ರ್‌ಯಾಮ್‌ನೊಂದಿಗೆ ಸಂಯೋಜನೆಗೊಂಡಿದೆ. 8ಜಿಬಿ ಮೆಮೊರಿ ಕಾರ್ಡ್‌ ಫೋನ್‌ನಲ್ಲಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಬಹುದಾಗಿದೆ. ಆಟೋ ಫೋಕಸ್‌ನೊಂದಿಗೆ 5ಎಂಪಿ ಕ್ಯಾಮೆರಾ ಇದ್ದು ಅಪಾರ್ಚರ್ ಮೌಲ್ಯ f/2.4 ಫೋನ್‌ನಲ್ಲಿದೆ. ನಿಜವಾಗಿ ಇದು ಮುಂಭಾಗದಲ್ಲಿ ಅಷ್ಟೊಂದು ಪರಿಪೂರ್ಣವಾದ ಕ್ಯಾಮೆರಾ ಗುಣಮಟ್ಟವನ್ನು ನೀಡುವುದಿಲ್ಲ. ಇತರ ಸಂಪರ್ಕ ಆಯ್ಕೆಗಳಾದ ಮೈಕ್ರೋ - ಯುಎಸ್‌ಬಿ, ಬ್ಲುಟೂತ್ 4.0, ವೈ-ಫೈ, WLAN, 3ಜಿ, ಡ್ಯುಯೆಲ್ ಸಿಮ್ ಮತ್ತು 1830mAh ಬ್ಯಾಟರಿ ಫೋನ್ ಒಳಗಡೆ ಇದೆ. ಇದು ವಿಂಡೋಸ್ ಫೋನ್ 8.1 ಮೊಬೈಲ್ ಓಎಸ್‌ನಲ್ಲಿ ಚಾಲನೆಯಾಗುತ್ತದೆ.

#2

#2

ಮೋಟೋರೋಲಾ ಮೋಟೋ ಇ 4.3- ಇಂಚಿನ ಡಿಸ್‌ಪ್ಲೇಯೊಂದಿಗೆ 960x540 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಂದಿದೆ. ಡ್ಯುಯೆಲ್ ಸಿಮ್ ಬೆಂಬಲ ಫೋನ್‌ಗಿದ್ದು 1.2GHz ಡ್ಯುಯೆಲ್ - ಕೋರ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದರಲ್ಲಿದೆ. 1ಜಿಬಿ ರ್‌ಯಾಮ್ ಹಾಗೂ 4ಜಿಬಿ ಆಂತರಿಕ ಸಂಗ್ರಹಣೆ ಫೋನ್‌ಗಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು 32ಜಿಬಿಗೆ ವಿಸ್ತರಿಸಬಹುದು. ಫೋನ್ ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಆವೃತ್ತಿಯಲ್ಲಿ ಚಾಲನೆಯಾಗುತ್ತದೆ. ಇದು 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಜೊತೆ ಬಂದಿದ್ದು ಇದು ಎಲ್‌ಇಡಿ ಫ್ಲ್ಯಾಶ್ ಮತ್ತು ಮುಂಭಾಗ ಕ್ಯಾಮೆರಾವನ್ನು ಹೊಂದಿಲ್ಲ. ಇದರ ತಯಾರಕರು ಫೋನ್‌ಗೆ 1,989mAh ಬ್ಯಾಟರಿಯನ್ನು ಅಳವಡಿಸಿದ್ದು ಮೋಟೋರೋಲಾ ಮೋಟೋ ಇ ನ್ಯಾನೋ ಕೋಟಿಂಗ್ ಅನ್ನು ಹೊಂದಿದೆ ಮತ್ತುಜಲ ಪ್ರತಿರೋಧಕವಾಗಿದೆ.

#3

#3

ಇದು ದೀರ್ಘವಾದ 5 ಇಂಚಿನ, ಪೂರ್ಣ ಎಚ್‌ಡಿ ಸ್ಕ್ರೀನ್‌ನೊಂದಿಗೆ ಸೂಪರ್ ಕ್ರಿಸ್ಪ್ 441ppi ಅನ್ನು ಹೊಂದಿದೆ. ಇದು 2GHz ಮೀಡಿಯಾ ಟೆಕ್ ಪವರ್ ಉಳ್ಳ "ಟ್ರೂ" ಓಕ್ಟಾ ಕೋರ್ ಸಿಪಿಯು ಅನ್ನು ಹೊಂದಿದ್ದು 2ಜಿಬಿ ರ್‌ಯಾಮ್ ಮತ್ತು 16ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿಕೊಂಡು 32ಜಿಬಿಗೆ ವಿಸ್ತರಿಬಹುದು. ಇದು 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಇದು 2 ಮೆಗಾಪಿಕ್ಸೆಲ್‌ಗಳ ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಕೂಡ ಹೊಂದಿದೆ. ಇವೆರಡೂ ಕ್ಯಾಮೆರಾಗಳು 1080p ಪೂರ್ಣ ಎಚ್‌ಡಿ ವೀಡಿಯೋವನ್ನು ದಾಖಲಿಸುವ ಸಾಮರ್ಥ್ಯವುಳ್ಳವಂತಹವು. ಇದರ ಸಂಪರ್ಕ ಆಯ್ಕೆಗಳು 140.4×69.1×8.1 mm ಅಳತೆಯಲ್ಲಿದ್ದು, ತೂಕ 125 ಗ್ರಾಂ ಆಗಿದೆ. ಇದರೊಂದಿಗೆ 3ಜಿ, ವೈ-ಫೈ802.11 b/g/n, DLNA, ವೈಫೈ ಡೈರೆಕ್ಟ್ ಬ್ಲುಟೂತ್ 4.0 ಹಾಗೂ GPS ಫೋನ್‌ನಲ್ಲಿದೆ. ಇದು ಡ್ಯುಯೆಲ್ ಸ್ಟ್ಯಾಂಡ್‌ಬೈ ಮೋಡ್‌ನೊಂದಿಗೆ ಡ್ಯುಯೆಲ್ ಸಿಮ್ ಬೆಂಬಲವನ್ನು ಕೂಡ ಹೊಂದಿದೆ.

#4

#4

ಅಬರ್ ಕೂಲರ್ ಎಚ್‌ಟಿಸಿ ಒನ್ (ಎಮ್8) 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1920 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಫೋನ್ ಹೊಂದಿದೆ. 2.5GHz ಕ್ವಾಡ್ ಕೋರ್ ಪ್ರೊಸೆಸರ್ ಫೋನ್‌ನಲ್ಲಿದ್ದು ಸ್ನ್ಯಾಪ್‌ಡ್ರಾಗನ್ 801 SoC ಫೋನ್‌ನಲ್ಲಿದ್ದು 2ಜಿಬಿ ರ್‌ಯಾಮ್ ಶಕ್ತಿಯನ್ನು ಫೋನ್ ಹೊಂದಿದೆ. 16 ಜಿಬಿ ಆಂತರಿಕ ಮೆಮೊರಿಯನ್ನು ಎಚ್‌ಟಿಸಿ ಹೊಂದಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 128ಜಿಬಿಗೆ ವಿಸ್ತರಿಬಹುದು. ಡಿವೈಸ್‌ನಲ್ಲಿ 4.4 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದ್ದು ಎಚ್‌ಟಿಸಿ ಯ ಸ್ಥಳೀಯ ಸೆನ್ಸೀವ್ 6.0 ಕೂಡ ಉತ್ತಮವಾಗಿ ಚಾಲನೆಯಾಗುತ್ತಿದೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದ್ದು ಇದು 4 ಮೆಗಾಪಿಕ್ಸೆಲ್ ಅಲ್ಟ್ರಾ ಪ್ರೈಮರಿ ರಿಯರ್ ಕ್ಯಾಮೆರಾದೊಂದಿಗೆ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಈ ಬಾರಿ ಹ್ಯಾಂಡ್‌ಸೆಟ್‌ನಲ್ಲಿ ಎರಡು ರಿಯರ್ ಕ್ಯಾಮೆರಾಗಳನ್ನು ಅಳವಡಿಸಿದ್ದು ಎರಡನೇ ಕ್ಯಾಮೆರಾ ವಿಷಯದ ಪೂರ್ಣ ಮಾಹಿತಿಯನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇತರ ಸಂಪರ್ಕ ಆಯ್ಕೆಗಳೆಂದರೆ 3ಜಿ HSPA+, ವೈಫೈ 802.11 a/ac/b/g/n (2.4 ಹಾಗೂ 5 GHz), ಬ್ಲೂಟೂತ್ 4.0 ನೊಂದಿಗೆ aptX codec, NFC ಮತ್ತು GPS ಜೊತೆಗೆ GLONASS. ಡಿವೈಸ್ 9.35 ಎಮ್‌ಎಮ್ ದಪ್ಪವಾಗಿದ್ದು ತೂಕ 160 ಗ್ರಾಮ್‌ಗಳಾಗಿವೆ. ಬ್ಯಾಟರಿ ಪವರ್ 2600mAh ಆಗಿದೆ.

#5

#5

ಸೋನಿಯು ಎಕ್ಸ್‌ಪೀರಿಯಾ z2 ವನ್ನು ಈ ವರ್ಷದ ಆರಂಭದಲ್ಲೇ ಲಾಂಚ್ ಮಾಡಿತ್ತು. ಸೋನಿ ಎಕ್ಸ್‌ಪೀರಿಯಾ z2, ಮೂಲ ಎಕ್ಸ್‌ಪೀರಿಯಾ z1 ಯಶಸ್ಸಿಗೆ ಕಾರಣವಾಗಿದೆ. ಇದು 5.2 ಇಂಚಿನ "ಟ್ರಿಲ್ಯುಮಿನಿಯಸ್" ಡಿಸ್‌ಪ್ಲೇಯನ್ನು ಹೊಂದಿದ್ದು 2.26 GHz MSM8974AB ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದರಲ್ಲಿ ಚಾಲನೆಯಾಗುತ್ತಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಉಳ್ಳ ಡಿವೈಸ್ ಇದಾಗಿದ್ದು 3ಜಿಬಿ ರ್‌ಯಾಮ್, 16ಜಿಬಿ/32ಜಿಬಿ ರೋಮ್ ಅನ್ನು ಇದು ಒದಗಿಸುತ್ತದೆ. 3200 mAh ಶಕ್ತಿಶಾಲಿ ಬ್ಯಾಟರಿ ಫೋನ್‌ನ ಒಳಗಡೆ ಇದ್ದು ಫ್ರಂಟ್ ಕ್ಯಾಮೆರಾ, 20.7 ಮೆಗಾಪಿಕ್ಸೆಲ್‌ನೊಂದಿಗೆ 4ಕೆ ವೀಡಿಯೋ ದಾಖಲಿಸುವ ಸಾಮರ್ಥ್ಯ ಕೂಡ ಫೋನ್‌ಗಿದೆ. ಫ್ರಂಟ್ ಫೇಸಿಂಗ್ ಕ್ಯಾಮೆರಾ ಸಾಮರ್ಥ್ಯ 2 ಎಂಪಿ ಯಾಗಿದ್ದು ಉತ್ತಮವಾಗಿದೆ. ಇದು ಧೂಳು ಮತ್ತು ನೀರು ಪ್ರತಿಶೋಧಕ ಶಕ್ತಿಯನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X