ನಿರೀಕ್ಷೆಯನ್ನು ಹೆಚ್ಚಿಸಲಿರುವ ಟಾಪ್ 5 ನೋಕಿಯಾ ಸ್ಮಾರ್ಟ್‌ಫೋನ್‌ಗಳು
ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಹ್ಯಾಂಡ್‌ಸೆಟ್‌ಗಳ ಕಥೆ ಏಳು ಬೀಳಿನಿಂದ ಕೂಡಿದೆ. ಹೌದು ಹೊಸ ಹೊಸ ತಂತ್ರಜ್ಞಾನದ ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆಯೇ ನೋಕಿಯಾ ಹ್ಯಾಂಡ್‌ಸೆಟ್‌ಗಳು ಪಾತಾಳಕ್ಕೆ ಇಳಿಯುತ್ತಿವೆ.
ಐದು ವರ್ಷದಿಂದ ತನ್ನದೇ ಆದ ಒಂದು ಅದ್ಭುತ ಇಮೇಜನ್ನು ಕಾಪಾಡಿಕೊಂಡು ಬಂದಿದ್ದ ನೋಕಿಯಾ ಈ ದಿನಗಳಲ್ಲಿ ಮುಗ್ಗರಿಸುತ್ತಿದೆ. ಆಪಲ್, ಸ್ಯಾಮ್‌ಸಂಗ್ ಮುಂತಾದ ಪ್ರತಿಷ್ಟಿತ ಕಂಪೆನಿಗಳು ನೋಕಿಯಾವನ್ನು ಮೂಲೆಗುಂಪು ಮಾಡಿದೆ ಎಂದೇ ಹೇಳಬಹುದು.
ಪ್ರಸ್ತುತ ಮೈಕ್ರೋಸಾಫ್ಟ್‌ನ ಅಡಿಯಲ್ಲಿರುವ ನೋಕಿಯಾ ಕಂಪೆನಿ ವರ್ಷದ ಆರಂಭದಲ್ಲೇ ಸ್ಮಾರ್ಟ್‌ಫೋನ್ ಶ್ರೇಣಿಯನ್ನೇ ಆರಂಭಿಸಿದೆ. ಈ ಫೋನ್‌ಗಳು ಆಂಡ್ರಾಯ್ಡ್ ಚಾಲನೆಯಲ್ಲಿದ್ದು ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಹಾಗಿದ್ದರೆ ಮರುಕಟ್ಟೆಗೆ ಬರುವ ನಿರೀಕ್ಷೆಯಲ್ಲಿರುವ ಟಾಪ್ ಐದು ಸ್ಮಾರ್ಟ್‌ಫೋನ್‌ಗಳತ್ತ ಒಂದು ವಿಶ್ಲೇಷಣೆ.

#1
ನೋಕಿಯಾ ಲ್ಯೂಮಿಯಾ 1820 ಕ್ಯಾಮೆರಾ ಕೇಂದ್ರೀಕೃತವಾದ ಹ್ಯಾಂಡ್ ಸೆಟ್ ಆಗಿದ್ದು ಮೈಕ್ರೋಸಾಫ್ಟ್ ಮೊಬಿಲಿಟಿ ಬೆಂಚ್‌ಗಳಿಂದ ನೇರವಾಗಿ ಆಗಮಿಸಿದೆ. ಕ್ವಾಲ್‌ಕಾಂ ಲಿಕ್ವಿಡ್‌ನಿಂದ ಅವತರಣಿಕೆಯಲ್ಲಿದ್ದು QHD ಅಥವಾ 2560 x 1440 ಡಿಸ್‌ಪ್ಲೇ ರೆಸಲ್ಯೂಶನ್‌ನಲ್ಲಿ ಬಂದಿದೆ. ಇದು 5.2 ಇಂಚಿನ QHD ಡಿಸ್‌ಪ್ಲೇಯನ್ನು ಹೊಂದಿದೆ.

#2
ಇದು 5 ಇಂಚಿನ AMOLED ಸಾಮರ್ಥ್ಯವುಳ್ಳ ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು ಇದರ ರೆಸಲ್ಯೂಶನ್ 1080 x 1920 ಪಿಕ್ಸೆಲ್‌ಗಳಾಗಿವೆ. ಇದು 32 ಜಿಬಿಯ ಆಂತರಿಕ ಮೆಮೊರಿಯನ್ನು ನೀಡಲಿದ್ದು ಹೆಚ್ಚುವರಿ ಮೆಮೊರಿ ನವೀಕರಣಕ್ಕಾಗಿ ಮೆಮೊರಿ ಸ್ಲಾಟ್ ಅನ್ನು ಹೊಂದಿಲ್ಲ. 20 ಎಂಪಿ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಬಂದಿದ್ದು ಮಾರುಕಟ್ಟೆಯಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಲಿದೆ.

#3
ನೋಕಿಯಾ ಎಕ್ಸ್‌ಎಲ್ ಎಕ್ಸ್ ಸಾಲಿನ ಫೋನ್ ಶ್ರೇಣಿಯಲ್ಲಿ ಬರಲಿದ್ದು ಇತ್ತೀಚೆಗಷ್ಟೇ ಬಿಡುಗಡೆಯ ಭಾಗ್ಯವನ್ನು ಕಂಡಿದೆ. ನೋಕಿಯಾ ಎಕ್ಸ್‌ಗೆ ಹೋಲಿಸಿದಾಗ, ರ್‌ಯಾಮ್ ಬೆಂಬಲವನ್ನು ಇದು ಒದಗಿಸಲಿದ್ದು 4 ಜಿಬಿ ಆಂತರಿಕ ಮೆಮೊರಿಯನ್ನು ಇದು ನೀಡಲಿದೆ.

#4
ನೋಕಿಯಾ ಲ್ಯೂಮಿಯಾ 630 ತನ್ನ ಒಂದೇ ಹೆಸರಿನಲ್ಲಿ ಜಾದೂವನ್ನೇ ಸೃಷ್ಟಿಸಲಿರುವ ಸನ್ನಾಹದಲ್ಲಿದೆ. ತನ್ನ ಬಳಗದಲ್ಲಿ ತುಸು ನಿರೀಕ್ಷೆಯನ್ನು ಹುಟ್ಟು ಹಾಕಲಿರುವ ಫೋನ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಬಹುದು. ಇದು ವಿಂಡೋಸ್ 8.1 ಆಪರೇಟಿಂಗ್ ಸಿಸ್ಟಮ್ ಮಾತ್ರ ನೀಡುತ್ತಿಲ್ಲ ಇದರೊಂದಿಗೆ 128 ಜಿಬಿ ವಿಸ್ತರಣೆಯನ್ನು ಬೆಂಬಲಿಸುವ ಮೈಕ್ರೋ ಎಸ್‌ಡಿಯನ್ನು ಹೊಂದಿದೆ.

#5
ಇದೊಂದು ಹೆಚ್ಚು ವೈವಿಧ್ಯಮಯವಾಗಿರುವ ಹ್ಯಾಂಡ್‌ಸೆಟ್ ಆಗಿದ್ದು ನೋಕಿಯಾ ಬ್ರಾಂಡ್ ಹೆಸರನ್ನು ತನ್ಮೂಲಕ ಪ್ರಸಿದ್ಧವಾಗಿಸಲಿದೆ. ಈ ಡಿವೈಸ್ ಮೈಕ್ರೋಸಾಫ್ಟ್ ಶೀರ್ಷಿಕೆಯಡಿಯಲ್ಲಿ ಬರಲಿದೆ. ಇದು 3 ಡಿ ಸ್ಪರ್ಶದಲ್ಲಿ ಬರಲಿದೆ ಎಂಬುದು ಸದ್ಯಕ್ಕಿರುವ ವದಂತಿಯಾಗಿದೆ.


Click it and Unblock the Notifications








