ಟಾಪ್ 5 ಆನ್ಲೈನ್ ಮೊಬೈಲ್ ಬಿಡಿಭಾಗಗಳ ಡೀಲ್

By Varun
|

ಟಾಪ್ 5 ಆನ್ಲೈನ್ ಮೊಬೈಲ್ ಬಿಡಿಭಾಗಗಳ ಡೀಲ್
ಮೊಬೈಲುಗಳಲ್ಲಿ ಹಲವಾರು ಮಾಡಲ್ಗಳು, ವೆರೈಟಿಗಳು ಬಜೆಟ್ ಫೋನುಗಳಿಂದ ಹಿಡಿದು, ಸ್ಮಾರ್ಟ್ ಫೋನುಗಳು ಯಾವುದೇ ಇರಲಿ, ಅದಕ್ಕೆ ಬಿಡಿಭಾಗಗಳ ಅವಶ್ಯಕತೆ ಇರುತ್ತದೆ. ಅದು ಹೆಡ್ ಸೆಟ್ ಇರಬಹುದು, ಬ್ಲೂ ಟೂತ್ ಸಾಧನವಾಗಿರಬಹುದು, ಬ್ಯಾಟರಿ ಇರಬಹುದು.. ಹೀಗೆ

ಮೊದಲೆಲ್ಲಾ ಬಿಡಿ ಭಾಗಳನ್ನು ಖರೀದಿಸಲು ಡೀಲರ್ ಹತ್ತಿರ ಹೋಗಬೇಕಿತ್ತು ಇಲ್ಲವೆ ಎಲೆಕ್ಟ್ರಾನಿಕ್ ಬಜಾರುಗಳಲ್ಲಿ ಖರೀದಿಸಬೇಕಿತ್ತು. ಆದರೆ ಅಸಲಿ ಬೆಲೆ ನಮಗೆ ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಈಗ ಆನ್ಲೈನ್ ಶಾಪಿಂಗ್ ಜನಪ್ರಿಯವಾಗುತ್ತಿರುವುದರಿಂದ ಹಾಗು ತೀವ್ರ ಸ್ಪರ್ಧೆ ಇರುವುದರಿಂದ ಹಲವಾರು ಮಳಿಗೆಗಳು ಒಳ್ಳೊಳ್ಳೆ ಆಫರ್ ನೊಂದಿಗೆ ಹಾಗು ಡಿಸ್ಕೌಂಟ್ ಬೆಲೆಯಲ್ಲಿ ಬಿಡಿಭಾಗಗಳನ್ನು ಕೊಡುತ್ತಿದೆ.

ನಿಮಗಾಗಿ ಕೊಡುತ್ತಿದ್ದೇವೆ ಆನ್ಲೈನ್ ನಲ್ಲಿ ಈ ವಾರದ ಅತ್ಯುತ್ತಮ ಬಿಡಿ ಭಾಗಗಳ ಡೀಲ್ ಅನ್ನು.

1) ಸೋನಿ ಎರಿಕ್ಸನ್ ಒರಿಜಿನಲ್ ಹೆಡ್ ಸೆಟ್ (299 ರೂ)

ನಿಮ್ಮ ಹತ್ತಿರ ಹಳೆಯ ಸೋನಿ ಎರಿಕ್ಸನ್ ಇದ್ದರೆ ಈ ಹೆಡ್ ಸೆಟ್ ಅನ್ನು ಕೊಳ್ಳಬಹುದು. 800 ರೂಪಾಯಿ ಬೆಲೆಗೆ ಮಾರಾಟವಾಗುತ್ತಿದ್ದ ಈ ಹೆಡ್ ಸೆಟ್ ನ ಬೆಲೆ ಈಗ ಕೇವಲ 299 ರೂಪಾಯಿ.

ಹಗುರ ಹ್ಯಾಂಡ್ಸ್ ಫ್ರೀ ಹಾಗು ಬೂಮ್ ಮೈಕ್ ಹೊಂದಿರುವ ಈ ಹೆಡ್ ಸೆಟ್ ನಿಂದ ಕರೆಗೆ ಉತ್ತರಿಸಬಹುದು ಹಾಗು ಹಾಡುಗಳನ್ನು ಕೇಳಬಹುದಾಗಿದೆ. ಈ ಆಫರ್ fommy.com ನಲ್ಲಿ ಲಭ್ಯ.

2) ಟ್ರಾನ್ಸೆಂಡ್ ಮೈಕ್ರೋ SD 16 GB ಕಾರ್ಡ್ Class 10 (1,099 ರೂಪಾಯಿ)

ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇದ್ದರೆ ಮೆಮೊರಿ ಶೇಖರಣೆಯೇ ದೊಡ್ಡ ಸಮಸ್ಯೆಯಾಗಲಿದೆ. ಹಾಗಾಗಿ ಒಂದು ಮೈಕ್ರೋ SD ಕಾರ್ಡ್ ನ ಅವಶ್ಯಕತೆ ಇರುತ್ತದೆ. flipkart ಈಗ ಡಿಸ್ಕೌಂಟ್ ಬೆಲೆಯಲ್ಲಿ 6 GB ಕಾರ್ಡ್ Class 10 ಅನ್ನು 1,099 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಹೆಚ್ಚಿನ ಮೆಮೊರಿ ಇದ್ದಷ್ಟೂ ಫೈಲುಗಳು ಟ್ರಾನ್ಸ್ಫರ್ ಮಾಡುವ ವೇಗ ಹೆಚ್ಚಿರುತ್ತದೆ. ಈ ಕಾರ್ಡ್ ರೈಟ್ ಪ್ರೊಟೆಕ್ಶನ್ ನೊಂದಿಗೆ ಬರುತ್ತದೆ.

3) ಸ್ಯಾಮ್ಸಂಗ್ ಗ್ಯಾಲಕ್ಸಿ S II HDTV ಅಡಾಪ್ಟರ್ (1,295 ರೂಪಾಯಿ)

ಸ್ಯಾಮ್ಸಂಗ್ ಗ್ಯಾಲಕ್ಸಿ S 2 ನಿಮ್ಮ ಹತ್ತಿರ ಇದ್ದರೆ ಟಿವಿ ಅಡಾಪ್ಟರ್ ನಿಮ್ಮ ಹತ್ತಿರ ಇರಲೇಬೇಕು. ಫೋನನ್ನು ನೇರವಾಗಿ ಟಿವಿಗೆ ಕನೆಕ್ಟ್ ಮಾಡಬಹುದಾಗಿದ್ದು HD ಗುಣಮಟ್ಟದ ವೀಡಿಯೋಗಳನ್ನು ಹಾಗು ಫೋಟೋಗಳನ್ನು ಟಿವಿಯಲ್ಲಿ ನೋಡಬಹುದಾಗಿದೆ.

1,700 ರೂಪಾಯಿಗೆ ಮಾರಾಟವಾಗುತ್ತಿದ್ದ ಇದರ ಡಿಸ್ಕೌಂಟ್ ಬೆಲೆ flipkart ನಲ್ಲಿ ಈಗ 1,295 ರೂಪಾಯಿ.

4) DBEST ಬ್ಲೂಟೂತ್ ಸೋಲೋ ಸ್ಪೀಕರ್ (Rs 1,500)

ನೀವೇನಾದರೂ ಪ್ರವಾಸಕ್ಕೆ ಹೋಗುವುದಾದರೆ ಇಲ್ಲವೆ ಸ್ನೇಹಿತರ ಜೊತೆ ಕ್ಯಾಂಪ್, ಟ್ರೆಕ್ಕಿಂಗ್ ಇಲ್ಲವೆ ಪಾರ್ಟಿ ಮಾಡುವಿರಾದರೆ ಈ ಬ್ಲೂಟೂತ್ ಸ್ಪೀಕರ್ ತುಂಬಾ ಉಪಯೋಗಕ್ಕೆ ಬರುತ್ತದೆ.

80 dB signal-to-noise ಅನುಪಾತ ಹೊಂದಿರುವುದರಿಂದ ಮೊಬೈಲ್ ನಲ್ಲಿರುವ ಹಾಡುಗಳನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಿ ಇದರಲ್ಲಿ ಕೇಳಬಹುದು. 20 ಗಂಟೆ ಬ್ಯಾಟರಿ ಬ್ಯಾಕ್ ಅಪ್ ಇದೆ ಹಾಗು USB ಮೂಲಕ ಚಾರ್ಜ್ ಮಾಡಬಹುದಾದ ಈ ಸ್ಪೀಕರ್ ನಿಮ್ಮ ಮೊಬೈಲ್ ಬ್ಯಾಟರಿ ಉಳಿಸುತ್ತದೆ. ಇದೂ ಕೂಡ flipkart ನಲ್ಲಿ ಲಭ್ಯ

5) ಫಿಲಿಪ್ಸ್ SHE 2660 ಕಪ್ಪು ಬಣ್ಣದ ಹೆಡ್ ಫೋನ್ (250 ರೂಪಾಯಿ)

ನಿಮ್ಮ ಫೋನಿಗೆ ಕಡಿಮೆ ಬಜೆಟ್ ನ ಹೆಡ್ ಫೋನನ್ನು ನೀವೇನಾದರೂ ಹುಡುಕುತ್ತಿದ್ದರೆ, ಈ ಫಿಲಿಪ್ಸ್ ಹೆಡ್ ಫೋನ್ ಅನ್ನು ಕೊಳ್ಳಬಹುದು.

ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಉಪಯೋಗಿಸಬಹುದಾದ ಇದು ಇಯರ್ ಬಡ್ ಡಿಸೈನ್ ಹೊಂದಿದೆ. flipkart ನಲ್ಲಿ ಖರೀದಿಸಿದರೆ 150 ರೂಪಾಯಿ ಡಿಸ್ಕೌಂಟ್ ಸಿಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X