ಉತ್ತಮ ಡಿಸ್‌ಪ್ಲೇ, ಓಎಸ್ ಈ ಫೋನ್‌ಗಳ ಹೆಚ್ಚುಗಾರಿಕೆ

By Shwetha
|

ಕಾಣುವುದು ನಂಬಿಕಯಾಗಿದೆ. ಇದೇ ನಿಯಮವನ್ನು ನಾವು ಹೊಸ ಫೋನ್‌ಗಳ ಖರೀದಿಯಲ್ಲಿ ಅನ್ವಯಿಸಿಕೊಂಡರೆ, ಡಿವೈಸ್ ತರುತ್ತಿರುವ ಡಿಸ್‌ಪ್ಲೇ ಪರದೆಗೆ ಗಮನಕೊಡುವುದಾಗಿದೆ.

ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಅತ್ಯಾಕರ್ಷಕವಾಗಿರುವ ಮತ್ತೆಲ್ಲಾ ಅಂಶಗಳಿಗಿಂತಲೂ ಡಿಸ್‌ಪ್ಲೇ ಹೆಚ್ಚು ಮುಖ್ಯವಾಗಿದೆ. ಇದರ ರಚನೆ ಮತ್ತು ವಿನ್ಯಾಸ ಗುಣಮಟ್ಟಗಳನ್ನು ಕೂಡ ಗಮನಕ್ಕೆ ತಂದುಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ಇದೆಲ್ಲಕ್ಕಿಂತಲೂ ಇದು ಒದಗಿಸುವ ಪರದೆ ಹೆಚ್ಚು ಅತ್ಯಗತ್ಯವಾದುದು.

ಕೆಲವೊಂದು ಪರಿಣಾಮಕಾರಿ ಅಂಶಗಳನ್ನು ಅದು ನೀಡಬೇಕೆಂಬ ಕಾರಣದಿಂದ ನಾವು ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ದುಡ್ಡು ನೀಡಿ ಖರೀದಿಸುತ್ತೇವೆ. ಆದ್ದರಿಂದ ನಾವು ತೊಡಗಿಸುವ ಬಜೆಟ್‌ಗೆ ತಕ್ಕಂತೆ ನಮ್ಮ ಫೋನ್ ಇರುವುದು ಮುಖ್ಯವಾಗುತ್ತದೆ.

ಇನ್ನು ಡಿಸ್‌ಪ್ಲೇ ವಿಷಯದಲ್ಲಿ ನಾವು ಅದೃಷ್ಟವಂತರು ಎಂದೇ ಹೇಳಬಹುದು. ಏಕೆಂದರೆ ಮಾರುಕಟ್ಟೆಗೆ ಆಗಮಿಸುತ್ತಿರುವ ಅತ್ಯಾಧುನಿಕ ಫೋನ್‌ಗಳು ವೈಶಿಷ್ಟ್ಯಪೂರ್ಣ ಡಿಸ್‌ಪ್ಲೇಯನ್ನು ಹೊಂದಿಕೊಂಡು ಬಂದಿವೆ. ಈಗ ಬರುವಂತಹ ಡಿಸ್‌ಪ್ಲೇಗಳು ಕ್ಯುಎಚ್‌ಡಿ ಯನ್ನು ಒದಗಿಸುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ನಿಮ್ಮ ಬಜೆಟ್‌ಗೆ ಪೂರಕವಾಗಿರುವ ಮತ್ತು ಕ್ಯುಎಚ್‌ಡಿ ಡಿಸ್‌ಪ್ಲೇಯನ್ನು ಒದಗಿಸುವ ಐದು ಫೋನ್‌ಗಳೊಂದಿಗೆ ನಾವು ಬಂದಿದ್ದು ನೀವು ಪರಿಗಣಿಸಬೇಕಾದ ಆಯ್ಕೆಗಳು ಇದಾಗಿವೆ.

#1

#1

ಕ್ಸೋಲೋ Q600s
ಇದು 4.5 ಇಂಚಿನ (960 x 540) qHD IPS ಡಿಸ್‌ಪ್ಲೇಯನ್ನು ಹೊಂದಿದ್ದು OGS (one glass solution) ಮತ್ತು ಪೂರ್ಣ ಲ್ಯಾಮಿನೇಶನ್ ಅನ್ನು ಹೊಂದಿಕೊಂಡು ಬಂದಿದೆ. ಇದು 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ವೀಡಿಯೋ ಕೋರ್ IV GPU ಮತ್ತು 1 ಜಿಬಿ RAM ಫೋನ್‌ನಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಫೋನ್‌ನಲ್ಲಿ ಚಾಲನೆಯಾಗುತ್ತಿದೆ. 3ಜಿ, ವೈಫೈ ಡಿವೈಸ್‌ನಲ್ಲಿದೆ.

#2

#2

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಲಾಂಜಾ A93
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಜೊತೆಗೆ ಬಂದಿದ್ದು ಇದರ ಡಿಸ್‌ಪ್ಲೇ qHD ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳನ್ನು ಒದಗಿಸುತ್ತದೆ. 1.3 GHz ಡ್ಯುಯೆಲ್ ಕೋರ್ ಪ್ರೊಸೆಸರ್ ಡಿವೈಸ್‌ನಲ್ಲಿದ್ದು 1 ಜಿಬಿ RAM ಇದರಲ್ಲಿದೆ. ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್) ಓಎಸ್ ಫೋನ್‌ನಲ್ಲಿದೆ.

#3

#3

ಮೋಟೋರೋಲಾ ಮೋಟೋ ಇ
ಇದು 4.3 ಇಂಚಿನ 960x540 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬಂದಿದ್ದು ಡ್ಯುಯೆಲ್ ಸಿಮ್ ಅನ್ನು ಹೊಂದಿದೆ. 1.2GHz ಡ್ಯುಯೆಲ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಡಿವೈಸ್‌ನಲ್ಲಿದ್ದು, RAM ಪವರ್ 1 ಜಿಬಿಯಾಗಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4 ಜಿಬಿಯಾಗಿದ್ದು ಇದನ್ನು 32 ಜಿಬಿಗೆ ವಿಸ್ತರಿಬಹುದು. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಪೋನ್ ಒಳಗೊಂಡಿದೆ.

#4

#4

ಇಂಟೆಕ್ಸ್ ಆಕ್ವಾ ಕರ್ವ್
5 ಇಂಚಿನ qHD ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಹೊಂದಿರುವ ಕರ್ವ್ ಡಿಸ್‌ಪ್ಲೇ ಜೊತೆಗೆ ಮನಸೂರೆಗೊಳ್ಳುವ ಇಂಟೆಕ್ಸ್ ಆಕ್ವಾ ಕರ್ವ್ 960 × 540 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಒದಗಿಸುತ್ತದೆ. ಈ ಹ್ಯಾಂಡ್‌ಸೆಟ್ 1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್ ಅನ್ನು ಹೊಂದಿದ್ದು 1 ಜಿಬಿ RAM ಇದರಲ್ಲಿದೆ. ಇದರಲ್ಲಿ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ ಇದೆ.

#5

#5

ಸ್ಪೈಸ್ ಸ್ಟೆಲ್ಲರ್ Mi-600
ಇದು 6 ಟಚ್‌ಸ್ಕ್ರೀನ್‌ನೊಂದಿಗೆ IPS ಡಿಸ್‌ಪ್ಲೇಯನ್ನು ಹೊಂದಿದ್ದು 960 ×540 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಒದಗಿಸುತ್ತದೆ. ಡಿವೈಸ್‌ನಲ್ಲಿ 1.3 GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು 1 ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತದೆ.

Best Mobiles in India

Read more about:
English summary
This article tells that Top 5 qHD Smartphones with Budget Price Tags To Buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X