ಮೈಕ್ರೋಮ್ಯಾಕ್ಸ್ ಯುನೈಟ್ 2 ಇದೀಗ 7,649 ಕ್ಕೆ

By Shwetha
|

ಫೋನ್ ಮಾರುಕಟ್ಟೆ ಸದ್ಯಕ್ಕಂತೂ ಸ್ಯಾಮ್‌ಸಂಗ್, ಆಪಲ್, ಸೋನಿ ಆಡಳಿತದಲ್ಲಿದೆಯಾದರೂ ಸ್ಥಳೀಯ ಫೋನ್ ಉತ್ಪಾದಕ ಕಂಪೆನಿಗಳಾದ ಕಾರ್ಬನ್ ಹಾಗೂ ಲಾವಾ ಕೂಡ ಗ್ರಾಹಕರ ಮನಸೆಳೆಯಲು ಮತ್ತು ಮಾರುಕಟ್ಟೆಯನ್ನು ತಮ್ಮತ್ತ ಸೆಳೆದುಕೊಳ್ಳುವ ಕಾಯಕದಲ್ಲಿ ನಿರತವಾಗಿವೆ.

ಇಂತಹ ಡೊಮೆಸ್ಟಿಕ್ ಫೋನ್ ಕಂಪೆನಿಗಳಿಂದ ಆಕರ್ಷಿತವಾಗಿ ಪ್ರಭಾವಿತಗೊಂಡಿರುವ ಒಂದು ಕಂಪೆನಿ ಸದ್ದಿಲ್ಲದೆ ತನ್ನ ಸ್ಮಾರ್ಟ್‌ಫೋನ್ ಲಾಂಚಿಂಗ್ ಮೂಲಕ ಪ್ರಸಿದ್ಧಿಯ ತುತ್ತ ತುದಿಯನ್ನು ಏರುವ ಸನ್ನಾಹದಲ್ಲಿದೆ.

ಅಷ್ಟಲ್ಲದೇ ಕಂಪೆನಿಯು ತನ್ನ ಸ್ಮಾರ್ಟ್‌ ಫೋನ್ ಮಾರಾಟವನ್ನು ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದಾದ್ಯಂತ ಹರಡಿದ್ದು ಯುಎಇ ಮತ್ತು ಬ್ರೆಜಿಲ್‌ಗೂ ತಲುಪುವಂತೆ ಮಾಡಿದೆ. ಮೈಕ್ರೋಮಾಕ್ಸ್ ಹೊಸ ಯುನೈಟ್ 2 ಹ್ಯಾಂಡ್‌ಸೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಭಾರೀ ಬೇಡಿಕೆಯಲ್ಲಿರುವ ಮೋಟೋ ಇ ಗೆ ಸಿಕ್ಕಾಪಟ್ಟೆ ಪೈಪೋಟಿಯನ್ನು ನೀಡುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹವಾವನ್ನೇ ಸೃಷ್ಟಿಸುತ್ತಿರುವ ಮೈಕ್ರೋಮ್ಯಾಕ್ಸ್ ಯುನೈಟ್ 2 ಗ್ರಾಹಕರ ಅಚ್ಚುಮೆಚ್ಚಿನದಾಗುವಲ್ಲಿ ಶತಪ್ರಯತ್ನವನ್ನು ಮಾಡುತ್ತಿದೆ. ಈ ಫೋನ್‌ ಅಂತೂ ಬಿಸಿ ದೋಸೆಯಂತೆ ಖರ್ಚಾಗುತ್ತಿದ್ದು ನೀವು ಇದನ್ನು ಖರೀದಿಸಲೇಬೇಕಾಗಿರುವ ಐದು ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

#1

#1

ಫೋನ್‌ನ ಕಡಿಮೆ ಮೌಲ್ಯವನ್ನು ಗಮನಿಸಿದಾಗ, ಮೈಕ್ರೋಮ್ಯಾಕ್ಸ್ ತನ್ನ ಹೊಸ ಫೋನ್‌ಗೆ ಆಕರ್ಷಕ ವಿನ್ಯಾಸವನ್ನು ಒದಗಿಸಿದೆ. ನಿಮ್ಮ ಕೈಯಲ್ಲಿ ಈ ಫೋನ್ ಅನ್ನು ಒಮ್ಮೆ ನೀವು ಹಿಡಿದರೆ ಸಾಕು ನಿಮಗಿದು ಮಧುರ ಅನುಭೂತಿಯನ್ನು ನೀಡುವುದಂತೂ ಖಂಡಿತ. ಇದರ ಸುಂದರವಾದ ಕಾರ್ನರ್‌ಗಳು ಹಾಗೂ ರಬ್ಬರ್ ಕೋಟ್ ಉಳ್ಳ ಹಿಂದಿನ ಭಾಗ ಮಜಬೂತಾಗಿದೆ.

#2

#2

ಮೈಕ್ರೋಮ್ಯಾಕ್ಸ್ ಯುನೈಟ್ 2 A106 4.7 ಇಂಚಿನ ಪರದೆಯನ್ನು ಹೊಂದಿದ್ದು, ಮಧ್ಯಮ ಗಾತ್ರದಲ್ಲಿದೆ. ಹೆಚ್ಚು ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಈ ಫೋನ್ ಗಾತ್ರ ಮನಮೋಹಕವಾಗಿದೆ.

#3

#3

ಡಿವೈಸ್‌ನ ಬೆಲೆಗೆ ಅನುಗುಣವಾಗಿ ಇದರ ಕ್ಯಾಮೆರಾ ಫೀಚರ್‌ನಲ್ಲೂ ಮಹತ್ವವಾದುದನ್ನೇ ನಾವು ಅನ್ವೇಷಿಸುತ್ತಿದ್ದೇವೆ. ಕಂಪೆನಿಯು ಇದರ ಕ್ಯಾಮೆರಾದಲ್ಲೂ ಅದ್ಭುತ ವಿನ್ಯಾಸಗಳನ್ನು ಮಾಡಿದ್ದು ಸುಂದರವಾಗಿದೆ. ಇದರ ವೀಡಿಯೋ ಮೋಡ್ ಕೂಡ ಇಐಎಸ್ ಬೆಂಬಲವನ್ನು ಹೊಂದಿದ್ದು ಇದು ಫ್ರೇಮ್‌ನಲ್ಲಿ ಬರುವ ಎಲ್ಲಾ ದೋಷಗಳನ್ನು ನಿವಾರಿಸುತ್ತದೆ.

#4

#4

ಮೈಕ್ರೋಮ್ಯಾಕ್ಸ್ ಯುನೈಟ್ 2 ಮೇಲೆ ಒಮ್ಮೆ ನೀವು ಖರ್ಚು ಮಾಡಿದರೆಂದರೆ ಸಾಕು ಇದು ನಿಮಗೆ ಅನೂಹ್ಯವಾದುದುನ್ನು ನೀಡುವುದಂತೂ ಖಂಡಿತ. ಇದು 21 ಭಾಷೆಗಳನ್ನು ಬೆಂಬಲಿಸುತ್ತಿದ್ದು, 5ಎಂಪಿ ರಿಯರ್ ಕ್ಯಾಮೆರಾ, ಡ್ಯುಯೆಲ್ ಸಿಮ್ ಬೆಂಬಲ, 32ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ, ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.2.2. ಹೀಗೆ ಸಾಕಷ್ಟು ವೈಶಿಷ್ಟ್ಯಪೂರ್ಣವಾಗಿದೆ.

#5

#5

ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡೇ ಮೈಕ್ರೋಮ್ಯಾಕ್ಸ್ ಯುನೈಟ್ 2 ಬೆಲೆಯನ್ನು 7,649 ಕ್ಕೆ ಫಿಕ್ಸ್ ಮಾಡಲಾಗಿದೆ. ಮೋಟೋ ಇ ಗೆ ಹೋಲಿಸಿದಾಗ ಇದರ ಬೆಲೆ ಜಾಸ್ತಿಯಾಯಿತು. ಆದರೂ ಮೋಟೋ ಇ ಗೆ ನೀವು ರೂ. 7,000 ಕೊಡುವುದಿದ್ದಲ್ಲಿ ಹೆಚ್ಚುವರಿ ರೂ 500 ಅನ್ನು ಮೈಕ್ರೋಮ್ಯಾಕ್ಸ್‌ಗೆ ಕೊಟ್ಟು ಇದನ್ನೇ ಖರೀದಿಸಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X