ಗೂಗಲ್ ನೆಕ್ಸಸ್ 8 ಕುರಿತ ಟಾಪ್ 5 ವದಂತಿಗಳು

By Shwetha
|

ಗೂಗಲ್‌ನ ನೆಕ್ಸ್ಟ್ ಜನರೇಶನ್ ಟ್ಯಾಬ್ಲೆಟ್ ಎಂಬ ಖ್ಯಾತಿಗೆ ಭಾಜನವಾಗಿರುವ ನೆಕ್ಸಸ್ 8 ಭರ್ಜರಿಯಾಗಿ ಮಾರುಕಟ್ಟೆ ಆರಂಭವನ್ನು ಮಾಡಿದೆ. ಇದು ಟ್ಯಾಬ್ಲೆಟ್ ರೂಪದಲ್ಲಿ ಬಿಡುಗಡೆಯಾಗಲಿದ್ದು ಇದನ್ನು ಆಸಸ್ ಬದಲಿಗೆ ಎಚ್‌ಟಿಸಿ ತಯಾರಿಸುತ್ತಿದೆ.

ಕೆಲವು ತಿಂಗಳ ಹಿಂದೆಯೇ ಎಚ್‌ಟಿಸಿ ನೆಕ್ಸಸ್ 8 ಅನ್ನು ತಯಾರಿಸುವ ವದಂತಿ ಹಬ್ಬಿತ್ತು. ವಿವಿಧ ಸ್ಟೈಲಿಂಗ್‌ನಲ್ಲಿ ನಿಮ್ಮ ಮನತಣಿಸಲಿರುವ ಈ ಟ್ಯಾಬ್ಲೆಟ್ ಆಕರ್ಷಕ ವಿನ್ಯಾಸದಲ್ಲಿ ಹೊರಬರಲಿರುವುದು ಖಾತ್ರಿಯಾಗಿದೆ. ಗೂಗಲ್ ಈಗಾಗಲೇ 8.9 ಇಂಚಿನ ಪ್ರೀಮಿಯರ್ ನೋಟವಿರುವ ಟ್ಯಾಬ್ಲೆಟ್ ಅನ್ನು ತಯಾರಿಸುತ್ತಿದ್ದು ಆಪಲ್ ಐಪ್ಯಾಡ್ ಏರ್‌ನೊಂದಿಗೆ ಸೆಣಸಲು ಇದನ್ನು ಸಿದ್ಧಗೊಳಿಸಲಿದೆ.

#1

#1

ನೆಕ್ಸಸ್ 8 ಅನ್ನು ಉತ್ಪಾದಿಸುವ ಒಪ್ಪಂದವನ್ನು ತೈವಾನ್‌ನ ಎಚ್‌ಟಿಸಿಗೆ ನೀಡಿದ್ದು ಇದು ಜುಲೈ ಮತ್ತು ಸಪ್ಟೆಂಬರ್‌ನಲ್ಲಿ ಹೊರಬರಲಿದೆ. ಹೆಚ್ಚಿನ ಪ್ರದರ್ಶನದ ಮೂಲಕ ಮುಂದಿನ ವರ್ಷಗಳಲ್ಲಿ ದೊಡ್ಡ ನೆಕ್ಸಸ್ ಟ್ಯಾಬ್ಲೆಟ್ ಅನ್ನು ಗೂಗಲ್ ಹೊರತರಲಿದೆ.

#2

#2

ಗೂಗಲ್ ಸದ್ಯದಲ್ಲೇ 8.9 ಇಂಚಿನ ಟ್ಯಾಬ್ಲೆಟ್ ಅನ್ನು ಹೊರತರುವ ನಿರೀಕ್ಷೆಯಲ್ಲಿದೆ ಎಂಬುದನ್ನು ಮಾರ್ಚ್‌ನಲ್ಲೇ ಡಿಜಿಟೈಮ್ಸ್ ವರದಿ ಮಾಡಿತ್ತು. ಗೂಗಲ್ ಇದರ ಬಗ್ಗೆ ಇನ್ನೂ ದೃಢ ನಿರ್ಧಾರಕ್ಕೆ ಬರದಿರುವುದರಿಂದ ಮತ್ತು ದೊಡ್ಡ ಸ್ಕ್ರೀನ್ ಟ್ಯಾಬ್ಲೆಟ್ ಬಗ್ಗೆ ಚಿಂತನೆಯನ್ನು ಮಾಡುತ್ತಿದೆ.

#3

#3

ಮುಂಬರಲಿರುವ ನೆಕ್ಸಸ್ 8 ಟ್ಯಾಬ್ಲೆಟ್ ಇಂಟೆಲ್ ಆಧಾರಿತ ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಯಾವಾಗಲೂ ನೆಕ್ಸಸ್ ಹೊಂದಿರುವಂತಹ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದರಲ್ಲಿಲ್ಲ. ಈ ಚಿಪ್ ಎಲ್‌ಟಿಇ ಸಂಪರ್ಕವನ್ನು ಬೆಂಬಲಿಸಲಿದ್ದು, 22nm 3ಡಿ ಟ್ರಾನ್ಸಿಸಿಸ್ಟರ್ ಆಧಾರಿತವಾಗಿದೆ.

#4

#4

ಮಾರ್ಚ್ 2014 ರ ಹಿಂದೇಯೇ ವರದಿಯೊಂದು ಇದರ ಬಗ್ಗೆ ಮಾಹಿತಿಯನ್ನು ನೀಡಿತ್ತು. ಆಂಡ್ರಾಯ್ಡ್ 4.5 ಓಎಸ್‌ನೊಂದಿಗೆ ಗೂಗಲ್ ನೆಕ್ಸಸ್ ಬಳಕೆದಾರರ ಕೈಗೆ ಬರಲಿದೆ.

#5

#5

ಕೆಲವು ವದಂತಿಗಳ ಪ್ರಕಾರ ಗೂಗಲ್ ತನ್ನ ಮುಂದಿನ ಜನರೇಶನ್ ಟ್ಯಾಬ್ಲೆಟ್‌ಗೆ ನೆಕ್ಸಸ್ 8 ಎಂಬ ಹೆಸರನ್ನಿಡಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X