ಟಾಪ್ 5 ಸ್ಮಾರ್ಟ್ ಫೋನ್

Posted By: Varun
ಟಾಪ್ 5 ಸ್ಮಾರ್ಟ್ ಫೋನ್

 

ಬೆಲೆ ಎಷ್ಟಾದರೂ ಪರವಾಗಿಲ್ಲ ನಮಗೆ ಅತ್ಯುತ್ತಮ ಫೀಚರ್ಗಳು ಇರುವ ಸ್ಮಾರ್ಟ್ ಫೋನ್ ಬೇಕು ಎಂತಾದರೆ ಇದೋ ಇಲ್ಲಿದೆ ನೋಡಿ ಟಾಪ್ 5 ಫೋನ್ ಗಳ ಕಿರುಪಟ್ಟಿ

1.ಮೋಟೊರೋಲ ರೇಜರ್

ಈ ಫೋನ್ ಅನ್ನ ಜಯಲಲಿತಾ ಉಪಯೋಗಿಸುತ್ತಿರಬಹುದು. ಏಕೆ ಗೊತ್ತಾ?ಕೆವ್ಲರ್ ಎಂಬ ಕವಚದ ಹೊರ ಮೈ ಇರುವ ಈ ಫೋನ್ ಪಕ್ಕಾ ಬುಲ್ಲೆಟ್ ಪ್ರೂಫ್. ಅಮೇರಿಕಾದ ಸೇನೆ ಇರಾಕ್ ಯುದ್ಧದಲ್ಲಿ ಉಪಯೋಗಿಸುತ್ತಿರುವುದು ಇದೇ ಕೆವ್ಲರ್ ಕವಚದ ಸೂಟ್ ಅನ್ನ.ಈ ಫೋನ್ಸ್ಲಿಮ್ ಆಗಿದ್ದು , 8 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇತರೆ ಫೋನ್ ಗಳಿಗಿಂತ ಸ್ವಲ್ಪ ಅಗಲವಾಗಿದೆ.

2.ಆಪಲ್ ಐ-ಫೋನ್ 4S

ಬಹುಪಾಲು ಐ-ಫೋನ್ 4 ಹೋಲಿಕೆಯೇ ಇದ್ದು ಉಪಯೋಗಿಸಲು ಆರಾಮಾಗಿದೆ.ವೇಗದ ಪ್ರೋಸೆಸರ್, ಗ್ರಾಫಿಕ್ಸ್, ಉತ್ತಮ ಕ್ಯಾಮರಾ ಹಾಗು ದೊಡ್ಡ ಬ್ಯಾಟರಿ ಹೊಂದಿದೆ. iOS 5 ತಂತ್ರಾಂಶದಿಂದಾಗಿ ಕ್ಲೌಡ್ ಸ್ಟೋರೇಜ್ ಸೌಲಭ್ಯವೂ ಇದೆ.

3. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್

ಆಂಡ್ರಾಯ್ಡ್ ಫೋನ್ ಗಳಲ್ಲೇ ಅತ್ಯಂತ ಬೇಡಿಕೆಯಲ್ಲಿರೋ ಫೋನ್ ಇದು ಅಂದರೆ ನೀವು ನಂಬಲೇ ಬೇಕು.ದೊಡ್ಡ ಸ್ಮಾರ್ಟ್ ಫೋನಾ ಅಥವಾ ಚಿಕ್ಕ ಟ್ಯಾಬ್ಲೆಟ್ ಅಂತ ಸಂಶಯ ಬರುವುದು ಗ್ಯಾರಂಟಿ ಅನ್ನೋ ಥರ ಇದೆ ಇದರ ಟಚ್ ಸ್ಕ್ರೀನ್.

4. ಬ್ಲಾಕ್ ಬೆರಿ ಬೋಲ್ಡ್ ಟಚ್ 9900

ಬ್ಲಾಕ್ ಬೆರಿ ಮಾಡಲ್ಗಳಲ್ಲೇ ಸ್ಲಿಮ್ ಆಗಿರುವ ಫೋನ್ ಇದು ಅದ್ಭುತವಾದ QWERTY ಕೀಪ್ಯಾಡ್ ಹೊಂದಿದೆ. ಟಚ್ ಸ್ಕ್ರೀನ್ ಕೂಡ ಸುಂದರವಾಗಿದ್ದು ಅಫಿಶಿಯಲ್ ಆಗಿ ಉಪಯೋಗಿಸಲು ಹೇಳಿ ಮಾಡಿಸಿದಂಥ ಮೊಬೈಲ್.

5.ಹೆಚ್.ಟಿ.ಸಿ ಸೆನ್ಸೇಶನ್ XE

ಸ್ಯಾಮ್ ಸಂಗ್ ಗ್ಯಾಲಕ್ಸಿ SII ಗಿಂತಲೂ ಚೆನ್ನಾಗಿದ್ದು ಬೀಟ್ಸ್ ಆಡಿಯೋ 1.5 ಗಿಗಾ ಹಾರ್ಟ್ಜ್ ಪ್ರಾಸೆಸರ್ ಹೊಂದಿದೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot