Home
ಮೊಬೈಲ್

ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಹೆಚ್ಚು ಟ್ರೆಂಡ್ ಆಗಿರುವ 5 ಸ್ಮಾರ್ಟ್‌ಫೋನ್‌ಗಳು ಇವು!!

By Bhaskar N J

ಪ್ರತಿವಾರವೂ ಹತ್ತಾರು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವುದರಿಂದ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬ ಚಿಂತೆ ನಿಮಗೆ ಮಾತ್ರವಲ್ಲ ಎಲ್ಲರಿಗೂ ಕಾಡುತ್ತದೆ. ನಾವು ನೀಡುವ ಹಣಕ್ಕೆ ಸರಿಯಾದ ಸ್ಮಾರ್ಟ್‌ಫೋನ್ ಯಾವುದು? ಆ ಸ್ಮಾರ್ಟ್‌ಪೋನಿನ ಫೀಚರ್ಸ್ ಯಾವುವು? ಪ್ರಸ್ತುತ ಬೆಸ್ಟ್ ಫೋನ್ ಯಾವುದು ಎಂಬ ಪ್ರಶ್ನೆಗಳು ಎಲ್ಲರಿಗೂ ಮೂಡುತ್ತವೆ.

ಹೀಗೆಯೇ ನಿಮಗೂ ಕೂಡ ಪ್ರಸ್ತುತ ಇರುವ ಸ್ಮಾರ್ಟ್‌ಪೋನ್‌ಗಳಲ್ಲಿ ಯಾವ ಸ್ಮಾರ್ಟ್‌ಪೋನ್ ಖರೀದಿಸಬೇಕು ಎಂಬ ಚಿಂತೆ ಇದ್ದರೆ ಕೂಡಲೇ ಆ ಚಿಂತೆಯಿಂದ ಹೊರಬನ್ನಿ. ಏಕೆಂದರೆ, ನಾವು ನಿಮಗೆ ಭಾರತದಲ್ಲಿ ಈ ಒಂದು ವಾರದಲ್ಲಿ ಟ್ರೆಂಡ್ ಆಗಿರುವ ಸ್ಮಾರ್ಟ್‌ಫೋನ್‌ಗಳು ಯಾವುವು? ಆ ಸ್ಮಾರ್ಟ್‌ಪೋನ್‌ಗಳ ವಿಶೇಷತೆಗಳೆನು ಎಂಬುದನ್ನು ತಿಳಿಸಿಕೊಡುತ್ತೇವೆ.

ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಹೆಚ್ಚು ಟ್ರೆಂಡ್ ಆಗಿರುವ 5 ಸ್ಮಾರ್ಟ್‌ಫೋನ್‌ಗಳು!

ಹಾಗಾದರೆ, ಈ ಒಂದು ವಾರದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿಯೇ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳು ಯಾವುವು? ಆ ಸ್ಮಾರ್ಟ್‌ಪೋನ್‌ಗಳು ಹೊಂದಿರುವ ಫೀಚರ್‌ಗಳು ಯಾವುವು? ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ!

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ!

5.99-ಇಂಚ್ (2160 × 1080 ಪಿಕ್ಸೆಲ್ಗಳು) ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರುವ ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಈ ವಾರ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 4000mAh ಬ್ಯಾಟರಿ, 1.8GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್, ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ 13,999 ರೂಪಾಯಿಗಳಾಗಿವೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಪ್ಲಸ್!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಪ್ಲಸ್!

ಸ್ಯಾಮ್‌ಸಂಗ್ ಕಂಪೆನಿಯ ಇತ್ತೀಚಿನ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಸ್ಮಾರ್ಟ್‌ಫೋನ್, ಈ ವಾರ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 6.2 ಇಂಚ್ ಡಿಸ್‌ಪ್ಲೇ, 12 (F1.5/F2.4) ಮೆಗಾಪಿಕ್ಸಲ್ ಇರುವ ಎರಡು ರಿಯರ್ ಕ್ಯಾಮೆರಾಗಳು, 3,000 mAh ಬ್ಯಾಟರಿಯಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ 54,4000 ರೂಪಾಯಿಗಳಾಗಿವೆ.

ಆಪಲ್ ಐಪೋನ್ 10!!

ಆಪಲ್ ಐಪೋನ್ 10!!

ಬಿಡುಗಡೆಯಾಗಿ ಹಲವು ತಿಂಗಳುಗಳೇ ಕಳೆದರೂ ಸಹ ಆಪಲ್ ಕಂಪೆನಿ ಆಪಲ್ ಐಫೋನ್ 10 ಸ್ಮಾರ್ಟ್‌ಪೋನ್, ಈ ವಾರ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 5.8 ಇಂಚಿನ ಬೇಜೆಲ್ ಲೆಸ್ ಸ್ಕ್ರಿನ್ ಸೂಪರ್ ರೆಟೀನಾ ಡಿಸ್‌ಪ್ಲೇ, A11 ಬಯೋನಿಕ್ ಪ್ರೋಸೆಸರ್ ಮತ್ತು 12 MP ಡ್ಯುಯಲ್ ಕ್ಯಾಮೆರಾ ಹೊಮದಿರುವ ಈ ಹೈ ಎಂಡ್ ಸ್ಮಾರ್ಟ್‌ಪೋನ್ ಬೆಲೆ 89,000ರೂಪಾಯಿಗಳಾಗಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 ಪ್ರೈಮ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 ಪ್ರೈಮ್

5.5 ಇಂಚಿನ (1920 x 1080 ಪಿಕ್ಸೆಲ್) ಪೂರ್ಣ ಹೆಚ್‌ಡಿ ಡಿಸ್‌ಪ್ಲೇ, 1.6GHz ಆಕ್ಟಾ-ಕೋರ್ Exynos 7870 ಪ್ರೊಸೆಸರ್ ಮತ್ತು 3 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 ಪ್ರೈಮ್ ಸ್ಮಾರ್ಟ್‌ಪೋನ್ ಈ ವಾರ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 13 ಎಂಪಿ ಮತ್ತು 8MP ಕ್ಯಾಮೆರಾ, 3300mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ 11,990 ರೂಪಾಯಿಗಳಾಗಿವೆ.

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಎಫ್ 7!

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಎಫ್ 7!

ಅತ್ಯಂತ ಕಡಿಮೆ ಬೆಲೆಗೆ 25MP ಸೆಲ್ಫಿ ಕ್ಯಾಮೆರಾದ ಮೂಲಕ ಮಾರುಕಟ್ಟೆಗೆ ಕಾಲಿಟ್ಟ ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ 'ಒಪ್ಪೊ ಎಫ್ 7' ಈ ವಾರ ಹೆಚ್ಚು ಟ್ರೆಂಡ್ ಆಗಿರುವ ಸ್ಮಾರ್ಟ್‌ಪೊನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 6.23-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ, 4GB ಮತ್ತು 64GB ಮೆಮೊರಿAI ತಂತ್ರಜ್ಞಾನ ಆಧಾರಿತ ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಬೆಲೆ 21,990 ರೂಪಾಯಿಗಳಾಗಿವೆ.

Best Mobiles in India

English summary
These smartphones have undoubtedly made their way into the list of trending devices of the last week. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+