ನಿಮ್ಮ ಸಮಯ ಹಣವನ್ನು ಉಳಿಸಲಿರುವ ಟಾಪ್ ಟ್ಯಾಬ್ಲೆಟ್‌ಗಳಿವು

By Shwetha
|

ಮಾರುಕಟ್ಟೆಯಲ್ಲಿ ಹೆಸರನ್ನು ಬಲಾಬಲಾವನ್ನು ಪ್ರದರ್ಶಿಸುತ್ತಿರುವ ಆಪಲ್ ಮತ್ತು ಸ್ಮಾರ್ಟ್‌ಫೋನ್ ಕಂಪೆನಿಗಳು ಹೊಸ ಹೊಸ ಉತ್ಪನ್ನಗಳ ಮೂಲಕ ಗ್ರಾಹಕರ ಮನವನ್ನು ಸೂರೆಗೊಳ್ಳಲು ಪ್ರಯತ್ನಿಸುತ್ತಿದೆ.

ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಾ ಯಾರು ಉತ್ತಮರು ಎಂಬ ಸಂಘರ್ಷವನ್ನು ನಡೆಸುತ್ತಿರುವ ಕಂಪೆನಿಗಳು ಅತ್ಯಾಧುನಿಕವಾಗಿ ತಮ್ಮ ಉತ್ಪನ್ನಗಳ ಮೋಡಿಯನ್ನು ಬಳಕೆದಾರರ ಮೇಲೆ ಉಂಟುಮಾಡುತ್ತಿದೆ. ಸ್ಮಾರ್ಟ್‌ಫೋನ್‌ನಿಂದ ಹಿಡಿದು ಲ್ಯಾಪ್‌ಟಾಪ್‌, ಐಪೋಡ್, ಕ್ಯಾಮೆರಾ ಹೀಗೆ ಒಂದಿಲ್ಲೊಂದು ವ್ಯವಹಾರ ವಿಭಾಗದಲ್ಲಿ ಇವುಗಳ ಉತ್ಪನ್ನಗಳ ಸುರಿಮಳೆ ನಡೆಯುತ್ತಿದೆ.

ಇಂದಿನ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಟ್ಯಾಬ್ಲೆಟ್‌ಗಳ ಬಗ್ಗೆ. ನಮ್ಮಲ್ಲಂತೂ ಲ್ಯಾಪ್‌ಟಾಪ್‌ ಮೋಡಿಯೇ ಹೆಚ್ಚಾಗಿರುವುದರಿಂದ ಟ್ಯಾಬ್ಲೆಟ್ ತಂಟೆಗೆ ಯಾರೂ ಬರುವುದಿಲ್ಲ. ಆದರೂ ಕ್ರಮೇಣ ಲ್ಯಾಪ್‌ಟಾಪ್‌ಗಳೆಲ್ಲಾ ಮೂಲೆಗುಂಪಾಗಿ ಟ್ಯಾಬ್ಲೆಟ್ ಜಮಾನಾ ತುಂಬಿಕೊಳ್ಳುವ ಕಾಲ ಸನಿಹದಲ್ಲಿದೆ. ಹಾಗಿದ್ದರೆ ನಿಮ್ಮ ಮನವನ್ನು ಕದಿಯಲು ಹೊರಟಿರುವ ಮತ್ತು ನಿಮ್ಮ ಪ್ರೇಮ ಟ್ಯಾಬ್ಲೆಟ್ ಕಡೆಗಿದ್ದರೆ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನೀವು ಆಸಕ್ತರಾಗಿದ್ದರೆ ಈ ಮಾಹಿತಿ ಖಂಡಿತ ನಿಮಗೆ ನೆರವು ನೀಡುತ್ತದೆ.

ಹಾಗಿದ್ದರೆ ನಿಮ್ಮ ಖರೀದಿಗೆ ಸೂಕ್ತವಾಗಿರುವ ಅತ್ಯುತ್ತಮ ಲ್ಯಾಪ್‌ಟಾಪ್ ವರದಿ ಮಾಹಿತಿಯನ್ನು ನಿಮಗಿಲ್ಲಿ ನೀಡುತ್ತಿದ್ದೇವೆ. ಸುಮ್ಮನೆ ಅವುಗಳನ್ನು ನೋಡುತ್ತಾ ಹೋಗಿ.

#1

#1

ಗೂಗಲ್‌ನ ಮುಂದಿನ ನೆಕ್ಸೆಸ್ ಟ್ಯಾಬ್ಲೆಟ್ ನೆಕ್ಸಸ್ 8 ಮಾರುಕಟ್ಟೆಯಲ್ಲಿ ಉತ್ತಮವಾಗಿ ಚಾಲ್ತಿಯಲ್ಲಿದೆ. Google Nexus 7 ಟ್ಯಾಬ್ಲೆಟ್‌ನ ಯಶಸ್ಸಿನ ನಂತರ ನೆಕ್ಸಸ್ 8 ಹೊರಬಂದಿದೆ. ಇದು ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು 2 ಜಿಬಿ ರ್‌ಯಾಮ್ ಇದರಲ್ಲಿದೆ.

#2

#2

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಶೀಘ್ರವೇ ಬರುವ ಸನ್ನಾಹದಲ್ಲಿದೆ. ಐಫೋನ್ 5s ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S5 ನಂತೆ ಈ ಟ್ಯಾಬ್ಲೆಟ್ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು 8.5-ಇಂಚು ಮತ್ತು 10.5-ಇಂಚುಗಳೆರಡರಲ್ಲೂ ಲಭ್ಯವಿದ್ದು, ನೋಡಲು ಆಕರ್ಷಕವಾಗಿರುವಂತಹ ಗಾತ್ರದಲ್ಲಿ ಲಭ್ಯವಿದೆ.

#3

#3

ಈ ಟ್ಯಾಬ್ಲೆಟ್ ಅನ್ನು ಅಮೆಜಾನ್ ತಾಣದಲ್ಲಿ ನಿಮಗೆ ಇದೇ ಹೆಸರಿನಲ್ಲಿ ಕಾಣಬಹುದಾಗಿದೆ. ಆದರೆ ಇದೇ ಹೆಸರು ಈ ಟ್ಯಾಬ್ಲೆಟ್‌ಗೆ ಖಾತ್ರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

#4

#4

ಮೈಕ್ರೋಸಾಫ್ಟ್ ಹೊಸ ಸರ್ಫೇಸ್ ಪ್ರೊ 3 ಟ್ಯಾಬ್ಲೆಟ್ ಅನ್ನು ನ್ಯೂಯಾರ್ಕ್‌ನಲ್ಲಿ ಗುರುವಾರ ಪ್ರಸ್ತುತಪಡಿಸಿದೆ. ಇದರ ಅಳತೆ 12 ಇಂಚಿನದಾಗಿದೆ. ಇದು ಸಿಲ್ವರ್ ಮತ್ತಯ ಕಪ್ಪು ಬಣ್ಣದ ವಿನ್ಯಾಸದ ಬೆಜಿಲ್‌ಗಳನ್ನು ಹೊಂದಿದೆ. ಈ ಆಗಸ್ಟ್‌ನಲ್ಲಿ ವಿಶ್ವದಾದ್ಯಂತ ಈ ಟ್ಯಾಬ್ಲೆಟ್ ಬಿಡುಗಡೆಗೊಳ್ಳಲಿದೆ.

#5

#5

ಆಪಲ್ ಕಂಪೆನಿ ತನ್ನ ಮುಂಬರುವ ಟ್ಯಾಬ್ಲೆಟ್ ಕುರಿತು ಹೆಚ್ಚು ರಹಸ್ಯವನ್ನು ಮೇಂಟೇನ್ ಮಾಡುತ್ತಿದೆ. ಇದು ಹೆಚ್ಚು ತೆಳುವಾಗಿದ್ದು ಶಕ್ತಿಶಾಲಿಯಾಗಿದೆ ಎಂಬುದು ವರದಿಗಳಿಂದ ತಿಳಿದುಬಂದಿರುವ ಅಂಶವಾಗಿದೆ. ಇದು ಸಾಕಷ್ಟು ದೊಡ್ಡ ಗಾತ್ರದಲ್ಲಿದ್ದು 12 - 13 ಇಂಚು ಡಿಸ್‌ಪ್ಲೇಯಲ್ಲಿ ಕಂಡುಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X