ಮೌಲ್ಯಕ್ಕೆ ತಕ್ಕ ಉತ್ಪನ್ನವಾಗಿ ಟಾಪ್ 5 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

By Shwetha
|

ಸ್ಮಾರ್ಟ್‌ಫೋನ್ ಇತ್ತೆಂದರೆ ಅದರಲ್ಲಿ ಮನಸೆಳಯುವ ಅಪ್ಲಿಕೇಶನ್‌ಗಳು ಬೇಕು ಎಂಬುದು ನಿಮಗೆ ಗೊತ್ತೇ? ಹೀಗಿದ್ದರೆ ಮಾತ್ರ ನೀವು ಸ್ಮಾರ್ಟ್‌ಫೋನ್ ಖರೀದಿಸಿದ್ದಕ್ಕೂ ಸಾರ್ಥಕ ಉಂಟಾಗುವುದು. ನೀವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಕೂಡ ನಿಮಗದು ಪ್ರಯೋಜನಕಾರಿಯೇ ಎಂಬುದನ್ನು ನೀವು ಆಲೋಚಿಸಬೇಕು.

ಹೀಗೆ ಯೋಚಿಸಿ ತೀರ್ಮಾನಿಸುವುದು ಕಷ್ಟದ ಕೆಲಸವೇನಲ್ಲ ಓದುಗರೇ? ಹೌದು ನೀವು ಉಚಿತವಾಗಿ ಮತ್ತು ಬೆಲೆ ತೆತ್ತು ಕೆಲವೊಂದು ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡುತ್ತೀರಿ. ಉಚಿತವಾಗಿ ದೊರೆಯುವ ಅಪ್ಲಿಕೇಶನ್‌ಗಳಂತೂ ಎಲ್ಲಾ ಗ್ರಾಹಕರು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಆದರೆ ಹಣ ತೆತ್ತು ಡೌನ್‌ಲೋಡ್ ಮಾಡಿಕೊಳ್ಳುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹಾಗಿದ್ದರೆ ನೀವು ಬೆಲೆ ತೆತ್ತು ಕೂಡ ಅತ್ಯುತ್ತಮವಾಗಿ ಬಳಸಬಹುದಾದ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಕುರಿತು ಈ ಲೇಖನದಲ್ಲಿ ಚರ್ಚಿಸೋಣ. ಅದೂ ಈ ತಿಂಗಳಿನಲ್ಲಿ ನೀವು ಖರೀದಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಅಪ್ಲಿಕೇಶನ್ ಆಗರ ಇಲ್ಲಿದೆ.

#1

#1

ಈ ಗೇಮಿಂಗ್ ಆಪ್ ಅನ್ನು ನೀವು ಡೌನ್‌ಲೋಡ್ ಮಾಡುವ ಮೊದಲು ಉತ್ತಮ ಮೌಲ್ಯವನ್ನು ನೀವು ಪಾವತಿಸಬೇಕು. ಈ ಆಪ್ ಗೇಮ್‌ನೊಂದಿಗೆ ಆಟದ ಮಜಾವನ್ನು ನಿಮಗೆ ಉಣಬಡಿಸುತ್ತದೆ. ನೀವು ಕೊಟ್ಟ ಮೌಲ್ಯಕ್ಕೆ ಈ ಆಪ್ ಮೋಸ ಮಾಡುವುದಿಲ್ಲ. ಇದರ ಬೆಲೆ ರೂ. 270 ಆಗಿದೆ.

#2

#2

ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ನೀವು ಡೌನ್‌ಲೋಡ್ ಮಾಡಲೇಬೇಕಾದ ಅಪ್ಲಿಕೇಶನ್ಸ್ಮಾರ್ಟ್ ಟೂಲ್ಸ್ ಆಗಿದೆ. ಇದರಲ್ಲಿ ಪೂರ್ಣ 5 ಸೆಟ್‌ಗಳ ಅಪ್ಲಿಕೇಶನ್ ಬರಲಿದ್ದು ಒಟ್ಟು 15 ಪರಿಕರಗಳನ್ನು ಹೊಂದಿದೆ.
ಈ ಆಪ್ ನಿಮಗೆ ರೂ. 145 ಕ್ಕೆ ದೊರೆಯಲಿದೆ ಈ ಆಪ್ ಲೆಕ್ಕಾಚಾರ, ಗಾತ್ರ, ಪ್ರದೇಶ, ಮುಂತಾದವಕ್ಕೆ ಸಂಬಂಧಪಟ್ಟದ್ದಾಗಿದೆ.

#3

#3

ನೀವು ಹೆಚ್ಚು ಧಾವಂತದಲ್ಲಿರುವ ವ್ಯಕ್ತಿಯಾಗಿದ್ದು ಮತ್ತು ನಿಮ್ಮೆಲ್ಲಾ ಎಂಎಸ್ ಆಫೀಸ್ ಸಂಬಂಧಿತ ಕೆಲಸಗಳಿಗೆ ನೀವು ನಿಲ್ಲುವುದಿಲ್ಲವೆಂದಲ್ಲಿ ಈ ಆಪ್ ನಿಮಗೆ ಅತ್ಯವಶ್ಯಕ. ಈ ಅಪ್ಲಿಕೇಶನ್ ನಿಮಗೆ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್ ಹಾಗೂ ಪವರ್ ಪಾಯಿಂಟ್ ಫೈಲ್‌ಗಳನ್ನು ವೀಕ್ಷಿಸಲು, ರಚಿಸಲು, ಸಂಪಾದಿಸಲು, ಮುದ್ರಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುತ್ತದೆ. ಆಫೀಸ್ ಸೂಟ್ 7 ಪ್ರೊ ಬೆಲೆ ರೂ 898.80 ಆಗಿದೆ.

#4

#4

ನಿಮ್ಮ ಸ್ಮಾರ್ಟ್‌ಫೋನ್‌ಗೆ ಬ್ರಾಂಡ್ ಹೊಸ ನೋಟವನ್ನು ಕೊಡಬೇಕೆಂಬ ಮನಸ್ಸು ನಿಮ್ಮದಾಗಿದ್ದಲ್ಲಿ ನೋವಾ ಲಾಂಚರ್ ಪ್ರೈಮ್ ಅನ್ನು ನೀವು ಸ್ಥಾಪಿಸಿಕೊಳ್ಳಲೇಬೇಕು. ಇದನ್ನು ನೀವು ಕಸ್ಟಮೈಸ್ ಮಾಡಬಹುದು, ನಿಮ್ಮ ಹೋಮ್ ಸ್ಕ್ರೀನ್ ಅನ್ನು ಸ್ಥಳಾಂತರಿಸಬಹುದು.
ನೋವಾ ಲಾಂಚರ್ ಪ್ರೈಮ್ ಪ್ರಸ್ತುತ ರೂ. 246 ಕ್ಕೆ ಲಭ್ಯವಿದೆ.

#5

#5

ಇದನ್ನು ಮೈಂಡ್ ರೀಡಿಂಗ್ ಕೀಬೋರ್ಡ್ ಎಂದೂ ಕರೆಯುತ್ತಾರೆ.ಇದು ನಿಮ್ಮ ಟಚ್‌ಸ್ಕ್ರೀನ್ ಟೈಪಿಂಗ್ ಅನ್ನು ಇನ್ನಷ್ಟು ವೇಗ ಮತ್ತು ಸರಳಗೊಳಿಸುತ್ತದೆ. ಇದು 61 ಭಾಷೆಗಳ ಸೌಲಭ್ಯವನ್ನು ಒದಗಿಸುತ್ತದೆ.

ಸ್ವಿಫ್ಟ್ ಕೀ ಕೀಬೋರ್ಡ್ ನಿಮಗೆ ರೂ. 99 ಕ್ಕೆ ಲಭ್ಯವಿದ್ದು ನಿಮ್ಮೆಲ್ಲಾ ಡಿವೈಸ್‌ಗಳಾದ್ಯಂತ ವೇಗವಾಗಿ ಸಂಪರ್ಕವನ್ನು ಒದಗಿಸುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X