ಟಾಪ್ 6 ಸ್ಮಾರ್ಟ್ ಫೋನುಗಳ ಸಾಮಾನ್ಯ ತೊಂದರೆಗಳು

Posted By: Staff
ಟಾಪ್ 6 ಸ್ಮಾರ್ಟ್ ಫೋನುಗಳ ಸಾಮಾನ್ಯ ತೊಂದರೆಗಳು

ಮನುಷ್ಯನೆ ಪರ್ಫೆಕ್ಟ್ ಇಲ್ಲ ಎಂದಮೇಲೆ ಇನ್ನು ಅವನು ಸೃಷ್ಟಿಸಿರುವ ಉಪಕರಣಗಳು ಏನೂ ಪಕ್ಕಾ ಆಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ತಂತ್ರಜ್ಞಾನ ದಿನದಿಂದ ದಿನಕ್ಕೆ ಮುಂದುವರೆಯುತ್ತಿದ್ದು, ಒಂದು ಕಡೆ ಹೊಸ ಹೊಸ ಫೀಚರುಗಳು ಸೇರ್ಪಡೆಯಾಗುತ್ತಿದ್ದರೆ ಮತ್ತೊಂದು ಕಡೆ ಹಳೆ ತೊಂದರೆಗಳನ್ನು ಸರಿಪಡಿಸಿ ಹೊಸ ಹೊಸ ಉಪಕರಣಗಳು ಬಿಡುಗಡೆಯಾಗುತ್ತಿವೆ. ಇದು ಸ್ಮಾರ್ಟ್ ಫೋನುಗಳಿಗೂ ಅನ್ವಯಿಸುತ್ತವೆ.

ಹಾಗಾಗಿ ಯಾವುದೇ ಕಂಪನಿ ಇರಲಿ, ಅದು ಯಾವುದೇ ಮಾಡೆಲ್ ಅನ್ನು ಬಿಡುಗಡೆ ಮಾಡಿದರೂ, ಎಷ್ಟೇ ಒಳ್ಳೆ ಫೀಚರುಗಳು ಇದ್ದರೂ ತೊಂದರೆಯಿಂದ ಹೊರತಾಗಿಲ್ಲ. ಅದಕ್ಕೆ ಜನ ಕಡಿಮೆ ತೊಂದರೆಗಳು ಇರುವ ಫೋನುಗಳನ್ನು ಹುಡುಕಿ ಖರೀದಿಸುತ್ತಾರೆ. ನೀವೇನಾದರೂ ಖ್ಯಾತ ಸ್ಮಾರ್ಟ್ ಫೋನ್ಗಳನ್ನು ಖರೀದಿ ಮಾಡಬೇಕಾದರೆ ಅವುಗಳ ಸಾಮಾನ್ಯ ಕಂಪ್ಲೇಂಟ್ ಏನು ಎಂದು ತಿಳಿದುಕೊಂಡರೆ ಒಳಿತು.

FixYa ಮತ್ತು Q&A ಎಂಬ ಕಂಪನಿಗಳು ಇದನ್ನು ಗಮನದಲ್ಲಿ ಇಟ್ಟುಕೊಂಡು ಟಾಪ್ 6 ಸ್ಮಾರ್ಟ್ ಫೋನುಗಳಲ್ಲಿ ಬಳಕೆದಾರರಿಗೆ ಎದುರಾಗುವ ಸಾಮಾನ್ಯ ತೊಂದರೆಗಳನ್ನು, ಸುಮಾರು 2 ಕೋಟಿಗೂ ಹೆಚ್ಚು ಜನರನ್ನು ಸಂದರ್ಶಿಸಿ ವರದಿ ಪ್ರಕಟಿಸಿದೆ. ಇಲ್ಲಿದೆ ನೋಡಿ ಟಾಪ್ 6 ಸ್ಮಾರ್ಟ್ ಫೋನುಗಳ 5 ಪ್ರಮುಖ ತೊಂದರೆಗಳು.

 

1) ಸ್ಯಾಮ್ಸಂಗ್ ಗ್ಯಾಲಕ್ಸಿ S3

1. ಅಸಮರ್ಪಕ ಮೈಕ್ರೋಫೋನ್ - 50%

2. ಬ್ಯಾಟರಿ ಲೈಫ್ - 15%

3. ಫೋನ್ ಬಿಸಿಯಾಗುತ್ತದೆ- 15%

4. ಇಂಟರ್ನೆಟ್ ಸಂಪರ್ಕ ಕಷ್ಟ ಇದೆ - 10%

5. ಇತರೆ ತೊಂದರೆಗಳು - 10%

 

 

2) ಆಪಲ್ ಐಫೋನ್ 4S1. ಬ್ಯಾಟರಿ ಲೈಫ್- 45%

2. ವೈಫೈ ಸಂಪರ್ಕ ಸಾಧ್ಯವಾಗುತ್ತಿಲ್ಲ- 20%

3. ಬ್ಲೂಟೂತ್ ಸಂಪರ್ಕ ಕಷ್ಟ- 15%

4. ಸಿರಿ ತಂತ್ರಾಂಶದ ತೊಂದರೆ- 10%

5. ಇತರೆ ತೊಂದರೆಗಳು - 10%

 

 

3) ಗ್ಯಾಲಕ್ಸಿ ನೆಕ್ಸಸ್1.ಅಸಮರ್ಪಕ ಮೈಕ್ರೋಫೋನ್ - 55 %

2. ಬ್ಯಾಟರಿ ಲೈಫ್- 20%

3. ವೈಫೈ ಸಂಪರ್ಕ ಸಾಧ್ಯವಾಗುತ್ತಿಲ್ಲ-10%

4. ಸಾಮಾನ್ಯ ಬಳಕೆ - 10%

5. ಇತರೆ ತೊಂದರೆಗಳು - 5%

 

 

4) ಬ್ಲ್ಯಾಕ್ ಬೆರಿ  ಕರ್ವ್

1. ಆಗಾಗ ರೀಬೂಟ್ ಆಗುತ್ತದೆ- 40%

2. ಸಾಫ್ಟ್ ವೇರ್ ಎರರ್- 20%

3. ಕಾಣೆಯಾಗುವ ಆಪ್ಸ್- 20%

4. ಮೆಮೊರಿ ಕಾರ್ಡ್ ಎರರ್- 10%

5. ಇತರೆ ತೊಂದರೆಗಳು- 10%

 

5) HTC ಟೈಟಾನ್ II

1. ಸ್ಕ್ರೀನ್ ರೆಸಲ್ಯೂಶನ್ ನಲ್ಲಿ ತೊಂದರೆ- 35%

2. ಕಾಣೆಯಾಗುವ ಆಪ್ಸ್- 20%

3. ಕ್ಯಾಮರಾ ಗುಣಮಟ್ಟ ಸರಿಯಲ್ಲ- 15%

4. ಬ್ಯಾಟರಿ ಲೈಫ್- 15%

5. ಇತರೆ ತೊಂದರೆಗಳು- 15%

 

 

6) ನೋಕಿಯಾ ಲುಮಿಯಾ  9001. ಟಿಂಟ್ ಪರ್ಪಲ್ ಸ್ಕ್ರೀನ್- 25%

2. ಕ್ಯಾಮರಾ ಬಟನ್ ನಲ್ಲಿ ತೊಂದರೆ- 20%

3. ಆಪ್ಸ್ ಹುಡುಕಲು ಕಷ್ಟವಾಗುತ್ತಿದೆ- 20%

4. ಬ್ಯಾಟರಿ ಲೈಫ್- 20%

5. ಇತರೆ ತೊಂದರೆಗಳು- 15%

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot