Subscribe to Gizbot

ಟಾಪ್ 6 ಆಂಡ್ರಾಯ್ಡ್ QWerty ಸ್ಮಾರ್ಟ್ ಫೋನ್

Posted By: Varun
ಟಾಪ್ 6 ಆಂಡ್ರಾಯ್ಡ್ QWerty ಸ್ಮಾರ್ಟ್ ಫೋನ್

ಮೊಬೈಲ್ ಬಳಸುವವರು ಹೊಸದಾಗಿ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕಾದರೆ ಅವುಗಳಲ್ಲಿ ಟಚ್ ಸ್ಕ್ರೀನ್ ಇದೆಯೋ, Qwerty ಕೀ ಪ್ಯಾಡ್ ಇದೆಯೋ ಅಥವಾ ಟಚ್ ಮತ್ತು ಟೈಪ್ ಎರಡೂ ಇರುವ ಫೋನ್ ಇದೆಯೋ ಎಂದು ನೋಡಿ ಖರೀದಿಸುತ್ತಾರೆ. ಕೆಲವರಿಗೆ ಟಚ್ ಸ್ಕ್ರೀನ್ ಉಪಯೋಗಿಸಲು ಕಷ್ಟವಾಗುವುದರಿಂದ Qwerty ಕೀ ಪ್ಯಾಡ್ ಇರುವ ಫೋನ್ ಖರೀದಿಸಲು ಇಷ್ಟ ಪಡುತ್ತಾರೆ. ಅಂಥವರಿಗಾಗಿ ಇಲ್ಲಿದೆ ಟಾಪ್ 6 Qwerty ಕೀಪ್ಯಾಡ್ ಇರುವ ಆಂಡ್ರಾಯ್ಡ್ ಫೋನುಗಳ ಪಟ್ಟಿ:

1) ಸ್ಯಾಮ್ಸಂಗ್ ಗ್ಯಾಲಕ್ಸಿ ಪ್ರೊ B7510 - ಆಂಡ್ರಾಯ್ಡ್ ಫ್ರೋಯೋ ತಂತ್ರಾಂಶ, 2.8 ಇಂಚ್ ಸ್ಕ್ರೀನ್, 3 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 10,190 ರೂಪಾಯಿ.

2) ಸೋನಿ ಎರಿಕ್ಸನ್ Xperia ಮಿನಿ ಪ್ರೊ - 3 ಇಂಚ್ ತರಚು ನಿರೋಧಕ TFT ಟಚ್ ಸ್ಕ್ರೀನ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ,1 GHz ಸ್ನಾಪ್ ಡ್ರಾಗನ್ ಪ್ರೋಸೆಸರ್ ಹೊಂದಿರುವ ಈ ಫೋನಿನ ಬೆಲೆ 14,000.ರೂಪಾಯಿ.

3)HTC ಚಾಚಾ- ಪ್ರತ್ಯೇಕ ಫೆಸ್ ಬುಕ್ ಬಟನ್, 2.6 ಇಂಚ್ ಟಚ್ ಸ್ಕ್ರೀನ್, 5 ಮೆಗಾ ಪಿಕ್ಸೆಲ್ ಕ್ಯಾಮರಾ(ಆಟೋ ಫೋಕಸ್ ಹಾಗು LED ಫ್ಲಾಶ್) ಹಾಗು ಸಾಮಾಜಿಕ ಜಾಲ ತಾಣಗಳ ಅನುಕಲನ ಹೊಂದಿದೆ. ಇದರ ಬೆಲೆ 10,000.ರೂಪಾಯಿ.

4) LG ಆಪ್ಟಿಮಸ್ ಪ್ರೊ C660 - 2.8 ಇಂಚ್ ಡಿಸ್ಪ್ಲೇ, 3 ಮೆಗಾ ಪಿಕ್ಸೆಲ್ ಕ್ಯಾಮರಾ, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ ಹೊಂದಿದೆ. ಇದರ ಬೆಲೆ 10,100 ರೂಪಾಯಿ.

5)ಮೋಟೊರೋಲ ಫೈರ್- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ, ಟಚ್ ಮತ್ತು QWERTY ಕೀಪ್ಯಾಡ್ ಹೊಂದಿದ್ದು, 2.8 ಇಂಚ್ ಸ್ಕ್ರೀನ್ ಇದೆ. 3 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ.ಇದರ ಬೆಲೆ 7,500 ರೂಪಾಯಿ.

6) ಏಸರ್ ಬಿ ಟಚ್ E130 - 2.6 ಇಂಚ್ ಟಚ್ ಸ್ಕ್ರೀನ್, 3.2 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು ಆಂಡ್ರಾಯ್ಡ್ ತಂತ್ರಾಂಶ ಹೊಂದಿರುವ ಈ ಫೋನಿನ ಬೆಲೆ 6,000 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot