ಭಾರತದಲ್ಲಿ ಮೈಕ್ರೋಮ್ಯಾಕ್ಸ್ ಖರೀದಿಯ 8 ಆನ್‌ಲೈನ್‌ ಡೀಲ್‌ಗಳು

By Shwetha
|

ಕಳೆದ ತಿಂಗಳಷ್ಟೇ ಮೈಕ್ರೋಮ್ಯಾಕ್ಸ್ ಕಂಪೆನಿಯು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ಅತಿ ಕಡಿಮೆ ದರವಾದ ರೂ 6,999 ಕ್ಕೆ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಅದೇ ಸಮಯದಲ್ಲಿ, ಇನ್ನೊಂದು ಇದೇ ರೀತಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿರುವ ಕಂಪೆನಿ ಆಂಡ್ರಾಯ್ಡ್‌ ಕಿಟ್‌ಕ್ಯಾಟ್ ಓಎಸ್‌ ಅನ್ನು ಇದರಲ್ಲೂ ಚಾಲನೆಯಾಗುವಂತೆ ನೋಡಿಕೊಂಡು ಕ್ಯಾನ್‌ವಾಸ್ ಎಂಗೇಜ್ ಅನ್ನು ಬಿಡುಗಡೆ ಮಾಡಿದೆ.

ಒಟ್ಟಾರೆ ಮೈಕ್ರೋಮ್ಯಾಕ್ಸ್‌ ಈ ಫೋನ್‌ಗಳನ್ನು ಬಿಡುಗಡೆ ಮಾಡಿದ್ದ ಉದ್ದೇಶ ಮೋಟೋ ಜಿ ಯ ಕಿಟ್‌ಕ್ಯಾಟ್ ಬೆಂಬಲಿತ ಮೋಟೋ ಇ ಗೆ ಪೈಪೋಟಿ ನೀಡಲು. ಮೋಟೋ ಇ ಯ ಭರ್ಜರಿ ಮಾರಾಟವು ಇಲ್ಲಿನ ಕಂಪೆನಿಗಳ ಮೇಲೆ ಮಾಡಿದ ಪರಿಣಾಮ ಮಾತ್ರ ಅತ್ಯುದ್ಭುತವಾದದ್ದು. ಇದೇ ಹಾದಿಯಲ್ಲಿ ಮುಂದೆ ಬರಲು ಹವಣಿಸುತ್ತಿರುವ ಎರಡು ಕಂಪೆನಿಗಳಾದ ಲಾವಾ ಹಾಗೂ ಕ್ಸೋಲೋ ಬಳಕೆದಾರರ ಮೇಲೆ ಕಿಟ್‌ಕ್ಯಾಟ್ ಮೋಡಿಯನ್ನು ಮಾಡುವ ನಿಟ್ಟಿನಲ್ಲಿವೆ.

ಮೈಕ್ರೋಮ್ಯಾಕ್ಸ್ ಯುನೈಟ್ 2 A106 ಫೋನ್‌ನ ವೈಶಿಷ್ಟ್ಯಗಳು ನಿಜಕ್ಕೂ ಆಕರ್ಷಕವಾಗಿದ್ದು ಬಳಕೆದಾರರನ್ನು ಖರೀದಿಸುವಂತೆ ಮಾಡುವುದು ಖಂಡಿತ. ಇದು 4.7-ಇಂಚಿನ (800 x 480 ಪಿಕ್ಸೆಲ್‌ಗಳ) ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್ IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.3 GHz ಕ್ವಾಡ್ - ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಫೋನ್‌ಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಅನ್ನು ಬೆಂಬಲಿಸುತ್ತಿದ್ದು ಭವಿಷ್ಯದ ಆಂಡ್ರಾಯ್ಡ್ ಆವೃತ್ತಿಗೆ ಕೂಡ ಇದನ್ನು ಅಪ್‌ಗ್ರೇಡ್ ಮಾಡಬಹುದಾಗಿದೆ. ಡ್ಯುಯೆಲ್ ಸ್ಟ್ಯಾಂಡ್‌ಬೈಯೊಂದಿಗೆ ಡ್ಯುಯೆಲ್ ಸಿಮ್ (GSM + GSM), ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5 ಎಂಪಿ ರಿಯರ್ ಕ್ಯಾಮೆರಾ, 2ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, 1ಜಿಬಿ ರ್‌ಯಾಮ್, 4ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದ್ದು ಇದನ್ನು ಮೈಕ್ರೋಎಸ್‌ಡಿ ಯೊಂದಿಗೆ 32 ಜಿಬಿಗೆ ವಿಸ್ತರಿಸಬಹುದು. 3G HSPA+, ವೈಫೈ 802.11 b/g/n, ಬ್ಲೂಟೂತ್ 4.0, GPS ಮತ್ತು 2000 mAh ಬ್ಯಾಟರಿ ಫೋನ್‌ನಲ್ಲಿದೆ. ಇದು ಗ್ರೇ, ಬಿಳಿ, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X