4000 ಡಿಸ್ಕೌಂಟ್ಸ್‌ನಲ್ಲಿ ಲಭ್ಯವಿದೆ ಇತ್ತೀಚಿಗಷ್ಟೇ ಕಾಲಿಟ್ಟಿ 'ಹುವಾವೆ Y9 (2019)'!

|

ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಕಾಲಿಟ್ಟಿರುವ ಹುವಾವೆ ಕಂಪೆನಿಯ ಹುವಾವೆ Y9 (2019) ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಎಸ್‌ಕ್ಲೂಸಿವ್ ಆಗಿ ಮಾರಾಟಕ್ಕಿದೆ. ಬಜೆಟ್ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳಲ್ಲಿ ಒಂದಾಗಿರುವ ಹುವಾವೆ Y9 (2019) ಸ್ಮಾರ್ಟ್‌ಪೋನ್ ಅನ್ನು ಅಮೆಜಾನ್ 4000 ಡಿಸ್ಕೌಂಟ್ಸ್ನಲ್ಲಿ ಮಾರಾಟಕ್ಕಿಟ್ಟಿರುವುದನ್ನು ನೋಡಬಹುದಾಗಿದೆ.

ಚೀನಾದಲ್ಲಿ ಭರ್ಜರಿ ಮಾರಾಟವಾಗಿದ್ದ ಹುವಾವೆಯೇ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದ್ದು, ಆಕ್ಟಾ-ಕೋರ್ ಕಿರಿನ್ 710 12nm ಪ್ರೊಸೆಸರ್ ಜೊತೆಗೆ ಗ್ರಾಫಿಕ್ಸ್‌ಗಾಗಿ ARM ಮಾಲಿ- G51 MP4 GPU ಮತ್ತು AI ಪವರ್ 7.0 ನೂತನ ತಂತ್ರಜ್ಞಾನ ಹಾಗೂ 3D ಕರ್ವ್ಡ್ ಪ್ರದರ್ಶನವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಕೇವಲ 14,999 ರೂ.ಗಳಿಗೆ ಲಭ್ಯವಿದೆ.

4000 ಡಿಸ್ಕೌಂಟ್ಸ್‌ನಲ್ಲಿ ಲಭ್ಯವಿದೆ ಇತ್ತೀಚಿಗಷ್ಟೇ ಕಾಲಿಟ್ಟಿ 'ಹುವಾವೆ Y9!

ಹಾಗಾದರೆ, 6.5 ಇಂಚುಗಳ FHD+ ಡಿಸ್‌ಪ್ಲೇ, 4000 mAh ಬ್ಯಾಟರಿ, ಜಿಪಿಯು ಟರ್ಬೊನಂತಹ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಹುವಾವೆ Y9 (2019) ಸ್ಮಾರ್ಟ್‌ಪೋನ್ ಹೆಗಿದೆ?, 14,999 ರೂ. ಬೆಲೆಯಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಬಹುದೇ ಮತ್ತು ಫೋನಿನ ಇತರೆ ಫೀಚರ್ಸ್ ಮತ್ತು ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 19:5:9 ಆಕಾರ ಅನುಪಾತದಲ್ಲಿ 6.5 ಇಂಚುಗಳಷ್ಟು ದೊಡ್ಡದಾದ FHD+ ಡಿಸ್‌ಪ್ಲೇಯನ್ನು ಹೊಂದಿದೆ. 1080x2340 ಪಿಕ್ಸೆಲ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು 3D ಕರ್ವ್ಡ್ ಪ್ರದರ್ಶನವಿದೆ. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫೀಂಗರ್‌ಪ್ರಿಂಟ್, ಡಿಸ್‌ಪ್ಲೇ ನೋಚ್ ಹೊಂದಿರುವ ಫೋನ್ ಪ್ರೀಮಿಯಮ್ ಡಿಸೈನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಾ-ಕೋರ್ ಕಿರಿನ್ 710 12nm ಜೊತೆಗೆ ಗ್ರಾಫಿಕ್ಸ್‌ಗಾಗಿ ARM ಮಾಲಿ- G51 MP4 GPU ಮತ್ತು AI ಪವರ್ 7.0 ನೂತನ ತಂತ್ರಜ್ಞಾನವನ್ನು ಹುವಾವೆ Y9 (2019) ಸ್ಮಾರ್ಟ್‌ಪೋನಿನಲ್ಲಿ ನೋಡಬಹುದಾಗಿದೆ. 4GB RAM ಮತ್ತು 64ಜಿಬಿ ಮೆಮೊರಿ ಹಾಗೂ 6GB RAM ಮತ್ತು 128 ಜಿಬಿಮೆಮೊರಿಯ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಹುವಾವೆ Y9 (2019) ನಾಲ್ಕು ಕ್ಯಾಮೆರಾ ಸ್ಮಾರ್ಟ್‌ಪೋನ್ ಆಗಿದ್ದು, 13 MP (f/1.8 aperture) ಮತ್ತು 2 MP ಡೆಪ್ತ್ ಸೆನ್ಸಾರ್ (f/2.4 aperture) ಹೊಂದಿರುವ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ಹೊಂದಿದೆ. ಇನ್ನು 16 MP (f/1.0 aperture) + 2 MP (f/2.4 aperture) ಸೆಲ್ಫಿ ಕ್ಯಾಮೆರಾಗಳು LED ಫ್ಲ್ಯಾಶ್, HDR, PDAF ಮತ್ತು AI ತಂತ್ರಜ್ಞಾನವನ್ನು ಒಳಗೊಂಡಿವೆ.

ಕ್ಯಾಮೆರಾ ತಂತ್ರಜ್ಞಾನ

ಕ್ಯಾಮೆರಾ ತಂತ್ರಜ್ಞಾನ

ಹುವಾವೆ Y9 (2019) ಕ್ಯಾಮರಾಗಳು ಫೋಟೋಗಳಲ್ಲಿ ಸೌಂದರ್ಯ ಮತ್ತು ಆಳವನ್ನು ಸಲೀಸಾಗಿ ಸೆರೆಹಿಡಿಯುತ್ತದೆ. ಕಡಿಮೆ-ಬೆಳಕಿನ ಛಾಯಾಗ್ರಹಣ ಮತ್ತು ಹ್ಯಾಂಡ್-ಹೆಲ್ಡ್ ನೈಟ್ ಮೋಡ್ಗೆ 50 ಪ್ರತಿಶತದಷ್ಟು ಬೆಳಕನ್ನು ಹೊಂದಿದೆ. ಎಐ ಕ್ಯಾಮರಾ ದೃಶ್ಯಗಳನ್ನು ಗುರುತಿಸಲು ಬುದ್ಧಿವಂತಿಕೆಯಿಂದ ಗುರುತಿಸಬಲ್ಲದು ಮತ್ತು AI ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 4,000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್‌ದಿಗೆ 400 ಜಿಬಿ ವರೆಗೆ ವಿಸ್ತರಿಸಬಲ್ಲ ಆಯ್ಕೆ ಸೇರಿದಂತೆ, ಫಿಂಗರ್‌ಪ್ರಿಂಟ್ 4.0 ಐಡೆಂಟಿಫಿಕೇಷನ್, ಫಿಂಗರ್‌ಪ್ರಿಂಟ್ ನೇವಿಗೇಷನ್, ಮೈಕ್ರೋ USB, Wi-Fi ಡೈರಕ್ಟ್, GPS / AGPS / Glonass ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

Best Mobiles in India

English summary
HUAWEI's latest smartphone, Y9 2019 is a midrange smartphone featuring quad cameras, a notched design with glass finish design on the. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X