ಸುಖಕರ ಪ್ರವಾಸಕ್ಕಾಗಿ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿ
ಸ್ಮಾರ್ಟ್‌ಫೋನ್ ಬಂದ ಮೇಲೆ ಪ್ರತಿಯೊಂದು ವಿಚಾರ ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್‌ಗಳು ತಯಾರಾಗುತ್ತಿವೆ.ಇವುಗಳಲ್ಲಿ ಕೆಲವೊಂದು ಆಪ್‌ಗಳನ್ನು ನಾವು ಡೌನ್‌ಲೋಡ್ ಮಾಡಿದ್ದರೆ ತುರ್ತು ಸಂದರ್ಭದಲ್ಲಿ ಈ ಆಪ್‌ಗಳು ನಮ್ಮ ನೆರವಿಗೆ ಬರುತ್ತದೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಗಿಝ್‌ಬಾಟ್ ಇಂದು ಕೆಲವು ಪ್ರವಾಸದ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದಾದ ಆಂಡ್ರಾಯ್ಡ್ ಆಪ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಈ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಕೆಎಸ್‌ಆರ್‌ಟಿಸಿ
ಪ್ರಯಾಣಿಕರು ಈ ಆಪ್ ಡೌನ್‌ಲೋಡ್ ಮಾಡಿಕೊಂಡು ಟಿಕೆಟ್ ಬುಕ್ಕಿಂಗ್, ಇದುವರಗಿನ ಟಿಕೆಟ್ ಬುಕ್ಕಿಂಗ್ ಮಾಹಿತಿ, ಜೊತೆಗೆ ಇಲ್ಲೇ ಟಿಕೆಟ್‌ನ್ನು ರದ್ದು ಸಹ ಮಾಡಬಹುದಾಗಿದೆ.
ಆಪ್ ಡೌನ್‌ಲೋಡ್ ಮಾಡಲು ಕ್ಲಿಕ್‌ಮಾಡಿ:ksrtc

ರೆಡ್‌ಬಸ್
ರಾಜ್ಯ ಸೇರಿದಂತೆ ದೇಶದ ಉದ್ದಗಲಕ್ಕೂ ಸಂಚರಿಸುವ ಖಾಸಗಿ ಬಸ್ಸುಗಳ ಮಾಹಿತಿ, ಬೇಕಾದ ಸೀಟ್‌ಗಳನ್ನು ನೀವು ಮುಂಚಿತವಾಗಿಯೇ ಈ ಆಪ್ ಮೂಲಕ ಬುಕ್ಕಿಂಗ್ ಮಾಡಬಹುದು.
ಆಪ್ ಡೌನ್‌ಲೋಡ್ ಮಾಡಲು ಕ್ಲಿಕ್‌ಮಾಡಿ:redbus

ಮಾಲ್ ಆನ್ ಮೊಬೈಲ್
ರೇಲ್ವೆ ಟಿಕೆಟ್ ಬಸ್ ಟಿಕೆಟ್ ಬುಕ್ಕಿಂಗ್ ಮಾಡವುದರ ಜೊತೆಗೆ ಹತ್ತಿರವೇ ಇರುವ ಸಿನಿಮಾ ಮಂದಿರಗಳ ಮಾಹಿತಿ ಇದ್ದು ಟಿಕೆಟ್ ಬುಕ್ ಮಾಡಬಹುದು. ಅಷ್ಟೇ ಅಲ್ಲದೇ ಈ ಆಪ್ ಮೂಲಕವೇ ಮೊಬೈಲ್ ರಿಚಾರ್ಜ್ ಮಾಡಬಹುದಾಗಿದೆ.
ಆಪ್ ಡೌನ್‌ಲೋಡ್ ಮಾಡಲು ಕ್ಲಿಕ್‌ಮಾಡಿ:ngpay - Mall on Mobile

ಟ್ರಿಪ್ ಅಡ್ವೈಸರ್
ಹೊಟೇಲ್ ಮಾಹಿತಿ, ಹತ್ತಿರದ ಸ್ಥಳದಲ್ಲಿರುವ ಪ್ರವಾಸಿ ತಾಣಗಳನ್ನು ಫೋಟೋ ವಿಡಿಯೋದಿಗೆ ಸುಲಭವಾಗಿ ಈ ಆಪ್‌ನಲ್ಲಿ ಹುಡುಕಬಹುದು.
ಆಪ್ ಡೌನ್‌ಲೋಡ್ ಮಾಡಲು ಕ್ಲಿಕ್‌ಮಾಡಿ:TripAdvisor Hotels Flights


Click it and Unblock the Notifications





