ಫುಲ್ ಮೆಟಲ್ ಬಾಡಿ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು
ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಸ್ಮಾರ್ಟ್‌ಫೋನಿಗೆ ಯೂಸರ್ ಇಂಟರ್‌ಫೇಸ್ ವಿಶೇಷತೆಗಳನ್ನುಸೇರಿಸಿ ಗ್ರಾಹಕರ ಸ್ನೇಹಿಯಾಗಿ ಮಾಡುತ್ತಿವೆಯೋ ಅದೇ ರೀತಿಯಲ್ಲಿ ಮೇಲಿನಿಂದ ಬಿದ್ದರೂ ಸ್ಮಾರ್ಟ್‌ಫೋನಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸ್ಮಾರ್ಟ್‌ಫೋನಿನ ದೇಹವನ್ನು ಮೆಟಲ್(ಲೋಹ)ದಿಂದ ತಯಾರಿಸಿ ಬಿಡುಗಡೆ ಮಾಡುತ್ತಿವೆ.
ಸ್ಮಾರ್ಟ್‌ಫೋನ್ ಖರೀದಿಸುವಾಗ ಗ್ರಾಹಕರು ಮುಖ್ಯವಾಗಿ ಓಎಸ್,ಪ್ರೊಸೆಸರ್,ರ್‍ಯಾಮ್, ಬ್ಯಾಟರಿ,ಕ್ಯಾಮೆರಾ ವಿಶೇಷತೆ ಕೊನೆಗೆ ಬೆಲೆ ಇವನ್ನು ನೋಡಿ ಖರೀದಿಸುತ್ತಾರೆ. ಸ್ಮಾರ್ಟ್‌ಫೋನಿನ ದೇಹ ಪ್ಲ್ಯಾಸ್ಟಿಕ್,ಮೆಟಲ್‌ನಿಂದ ತಯಾರಿಸಿದ್ದಾರೋ ಎಂಬುದನ್ನು ನೋಡಿ ಖರೀದಿಸುವ ಗ್ರಾಹಕರ ಸಂಖ್ಯೆ ಕಡಿಮೆ.
ಪ್ಲಾಸ್ಟಿಕ್ ದೇಹವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಮತ್ತು ಮೆಟಲ್ ದೇಹವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ವಿಶೇಷತೆಗಳು ಒಂದೇ ಆಗಿದ್ದರೂ ಪ್ಲಾಸ್ಟಿಕ್ ದೇಹವನ್ನು ಹೊಂದಿರುವ ಫೋನಿನ ಬೆಲೆ ಕಡಿಮೆಯಾಗಿರುವುದರಿಂದ ಜನ ಹೆಚ್ಚಾಗಿ ಈ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುತ್ತಾರೆ.ಆದರೂ ಕೆಲವು ಕಂಪೆನಿಗಳು ಈಗ ಕಡಿಮೆ ಬೆಲೆಯಲ್ಲೇ ಮೆಟಲ್ ದೇಹವನ್ನು ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಸಲು ಮುಂದಾಗುತ್ತಿವೆ.ಹೀಗಾಗಿ ಇಲ್ಲಿ ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಫುಲ್ ಮೆಟಲ್ ಬಾಡಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ.
ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸ್ಪೈಸ್ ಸ್ಮಾರ್ಟ್ ಫ್ಲೋ ಮೆಟಲ್ 5 ಎಕ್ಸ್
ಬೆಲೆ:6,499
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್ ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3GHz ಡ್ಯುಯಲ್ ಕೋರ್ ಪ್ರೊಸೆಸರ್
512MB ರ್‍ಯಾಮ್
4GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್,3ಜಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800mAh ಬ್ಯಾಟರಿ

ಎಚ್‌ಟಿಸಿ ಒನ್
ಬೆಲೆ:43,134
ವಿಶೇಷತೆ:
ಡ್ಯುಯಲ್ ಸಿಮ್
4.7 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಕೆಪಾಸಿಟಿವ್ ಸ್ಕ್ರೀನ್(1920 x 1080ಪಿಕ್ಸೆಲ್)
ಆಂಡ್ರಾಯ್ಡ್ ಜೆಲ್ಲಿಬೀನ್ 4.1.2 ಎಚ್‌ಟಿಸಿ ಸೆನ್ಸ್ ಓಎಸ್
1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್ 600 ಕ್ವಾಡ್ ಕೋರ್ ಪ್ರೊಸೆಸರ್
32 GB ಆಂತರಿಕ ಮೆಮೊರಿ
2 GB ರ್‍ಯಾಮ್
4 ಎಂಪಿ ಆಲ್ಟ್ರಾ ಪಿಕ್ಸೆಲ್ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 2.1 ಎಂಪಿ ಕ್ಯಾಮೆರಾ
64 GBವರೆಗೆವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ

ಎಚ್‌ಟಿಸಿ ಒನ್ ಮಿನಿ
ಬೆಲೆ:32999
ವಿಶೇಷತೆ:
ಸಿಂಗಲ್ ಸಿಮ್
4.3 ಇಂಚಿನ ಎಲ್‌ಸಿಡಿ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.4GHz ಡ್ಯುಯಲ್ ಕೋರ್ ಪ್ರೊಸೆಸರ್
1GB ರ್‍ಯಾಮ್
16GB ಆಂತರಿಕ ಮೆಮೋರಿ
4 ಎಂಪಿ ಆಲ್ಟ್ರಾ ಪಿಕ್ಸೆಲ್ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್
1800mAh ಬ್ಯಾಟರಿ

ಐಫೋನ್ 5 ಎಸ್
ಬೆಲೆ:53,500
ವಿಶೇಷತೆ:
ಸಿಂಗಲ್ ಸಿಮ್
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326ಪಿಪಿ)
ಐಓಎಸ್ 7
112 ಗ್ರಾಂ ತೂಕ
A7 ಚಿಪ್ 64 ಬಿಟ್ ಅರ್ಕಿಟೆಕ್ಚರ್
M7 ಮೋಷನ್ ಪ್ರೊಸೆಸರ್
16GB ಆಂತರಿಕ ಮೆಮೋರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಸೋನಿ ಎಕ್ಸ್‌ಪೀರಿಯಾ ಪಿ
ಬೆಲೆ:19300
ವಿಶೇಷತೆ:
ಸಿಂಗಲ್ ಸಿಮ್
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್ 2.3 ಜಿಂಜರ್ ಬ್ರಿಡ್ ಓಎಸ್( ಜೆಲ್ಲಿಬೀನ್ 4.1 ಅಪ್‌ಗ್ರೆಡ್ ಮಾಡಬಹುದು)
1 GHz ಡ್ಯುಯಲ್ ಕೋರ್ ಪ್ರೊಸೆಸರ್
16 GB ಆಂತರಿಕ ಮೆಮೊರಿ
1 GB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1305 mAh ಬ್ಯಾಟರಿ

ಎಚ್‌ಟಿಸಿ ಒನ್ ಮ್ಯಾಕ್ಸ್
ಬೆಲೆ:53,909
ವಿಶೇಷತೆ:
ಸಿಂಗಲ್ ಸಿಮ್
5.9 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ ಎಚ್‌ಟಿಸಿ ಸೆನ್ಸ್ 4.3 ಜೆಲ್ಲಿ ಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
16/32GB ಆಂತರಿಕ ಮೆಮೋರಿ
2GB ರ್‍ಯಾಮ್
ಫಿಂಗರ್ ಪ್ರಿಂಟ್ ಸ್ಕ್ಯಾನರ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್‌ಎಫ್‌ಸಿ
3300 mAh ಬ್ಯಾಟರಿ

ಲೆನೊವೊ ಕೆ 900
ಬೆಲೆ:26,850
ವಿಶೇಷತೆ:
ಸಿಂಗಲ್ ಸಿಮ್
5.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್( 1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2 GHz ಡ್ಯುಯಲ್ ಕೋರ್ ಪ್ರೊಸೆಸರ್
2GB ರ್‍ಯಾಮ್
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
2G, 3G,ವೈಫೈ,ಬ್ಲೂಟೂತ್
32 GB ವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
2500 mAh ಬ್ಯಾಟರಿ

ಲೆನೊವೊ ಪಿ 780
ಬೆಲೆ: 17,590
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
4 GB ಆಂತರಿಕ ಮೆಮೋರಿ
1 GB ರ್‍ಯಾಮ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್,ವೈಫೈ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ಗ್ರಾವಿಟಿ ಸೆನ್ಸರ್
4000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಡೂಡಲ್ 2
ಬೆಲೆ:14,490
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಎಚ್‌ಡಿ ಐಪಿಎಸ್ ಕೆಪಾಸಿಟಿವ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
12 ಎಂಪಿ ಹಿಂದುಗಡೆ ಕ್ಯಾಮೆರಾ (ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್)
5 ಎಂಪಿ ಮುಂದುಗಡೆ ಕ್ಯಾಮೆರಾ
12 GB ಆಂತರಿಕ ಮೆಮೋರಿ
1 GB ರ್‍ಯಾಮ್
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ
2600 mAh ಬ್ಯಾಟರಿ

ನೋಕಿಯಾ 515
ಬೆಲೆ:10,150
ವಿಶೇಷತೆ:
ಡ್ಯುಯಲ್ ಸಿಮ್(ಡ್ಯುಯಲ್ ಸ್ಟ್ಯಾಡ್‌ಬೈ)
2.4 ಇಂಚಿನ QVGA ಸ್ಕ್ರೀನ್(240x320 ಪಿಕ್ಸೆಲ್)
64MB RAM
ನೋಕಿಯಾ ಸಿರೀಸ್ 40 ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
256MB ಆಂತರಿಕ ಮೆಮೊರಿ
ಆಲ್ಪಾನ್ಯೂಮರಿಕ್ ಕೀಪ್ಯಾಡ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200mAh ಬ್ಯಾಟರಿ


Click it and Unblock the Notifications





