Home
ಮೊಬೈಲ್

iQOO 13 ಸ್ಮಾರ್ಟ್‌ಫೋನಿನ ಈ ಟಾಪ್‌ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಐಕ್ಯೂ (iQOO) ಕಂಪನಿಯು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದು ಐಕ್ಯೂ 13 (iQOO 13) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು iQOO 12 ಫೋನಿನ ಉತ್ತರಾಧಿಕಾರಿಯಾಗಿ ಐಕ್ಯೂ 13 ಅನ್ನು ಪರಿಚಯಿಸಿದೆ. ಇದು 50 ಸಾವಿರ ಬಜೆಟ್‌ ಬೆಲೆಯಲ್ಲಿ ಲಾಂಚ್ ಆಗಿದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬನ್ನಿ ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಐಕ್ಯೂ 13 ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ ಲಭ್ಯವಿದೆ. ಇದರಲ್ಲಿ 6.82 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದರೊಂದಿಗೆ 16GB RAM ಮತ್ತು 1TB ಸ್ಟೋರೇಜ್, 6150mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಫೋನ್ ಕಪ್ಪು, ಹಸಿರು, ಬೂದು ಮತ್ತು ಬಿಳಿ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

iQOO 13 ಸ್ಮಾರ್ಟ್‌ಫೋನಿನ ಈ ಟಾಪ್‌ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಐಕ್ಯೂ 13 ಫೋನಿನ ಬೆಲೆ

ಕಂಪನಿಯು ಐಕ್ಯೂ 13 ಫೋನನ್ನು ಐದು ಸ್ಟೋರೇಜ್‌ ಆಯ್ಕೆಗಳಲ್ಲಿ ಪರಿಚಯಿಸಿದೆ. 12GB + 256GB ಸ್ಟೋರೇಜ್ ರೂಪಾಂತರದ ಬೆಲೆ 47,200 ರೂ. ಇದೆ. 16GB + 256GB ಸ್ಟೋರೇಜ್ ರೂಪಾಂತರವು 50,800 ರೂ., 12GB + 512GB ಸ್ಟೋರೇಜ್ ರೂಪಾಂತರವು 53,100 ರೂ. ಆಗಿದೆ. 16GB + 512GB ಸ್ಟೋರೇಜ್ ರೂಪಾಂತರವನ್ನು 55,500 ರೂ. ಮತ್ತು 16GB + 1TB ಸ್ಟೋರೇಜ್ ರೂಪಾಂತರವನ್ನು 61,400 ರೂ.ಗೆ ಬಿಡುಗಡೆ ಮಾಡಲಾಗಿದೆ.

ಐಕ್ಯೂ 13 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ 13 ಮೊಬೈಲ್ 6.82 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಇದು 1800 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್, 3168 X 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 1440 ಪಿಕ್ಸೆಲ್‌ ಕಟ್‌ಹೋಲ್ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಈ ಫೋನ್ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. AnTuTu ಬೆಂಚ್‌ಮಾರ್ಕ್‌ನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಸ್ಕೋರ್ ಮಾಡಿದೆ. ಈ ಫೋನ್ 16GB RAM ಮತ್ತು 1TB ಸ್ಟೋರೇಜ್ ಒಳಗೊಂಡಿದೆ. ಇದು ಆಂಡ್ರಾಯ್ಡ್‌ 15 (OriginOS 5) ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆಟಪ್

ಐಕ್ಯೂ 13 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಇದೆ. ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಟೆಲಿಫೋಟೋ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಫೋನ್ 6,150mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ 13 ಫೋನ್ ಭದ್ರತೆಗಾಗಿ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP69+IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
iQOO 13 With Snapdragon 8 Elite SoC, 120W Fast Charging Launched: Price, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+