ಆಪಲ್ ನ iOS 12 ಬಿಡುಗಡೆಗೆ ಸಜ್ಜಾಗುತ್ತಿದೆ. ನಿಮ್ಮ ಆಪಲ್ ಫೋನ್ ಗಳ ಅಪ್ ಡೇಟ್ ಗೆ ತಯಾರಾಗಿ....

By GizBot Bureau
|

ಆಪಲ್ ನ ಮುಂದಿನ ಪ್ರಮುಖ iOS ಬಿಡುಗಡೆ ಅಂದರೆ ಅದು ಐಫೋನ್ ಮತ್ತು ಐಪ್ಯಾಡ್ ಗಳಿಗೆ iOS 12. ಆಪಲ್ ತಿಳಿಸುವಂತೆ ಆಪಲ್ ನ 81 ಶೇಕಡಾ ಐಫೋನ್ ಮತ್ತು ಐಪ್ಯಾಡ್ ಗಳು ಇತ್ತೀಚಿನ ವರ್ಷನ್ iOS 11 ನಿಂದ ರನ್ ಆಗುತ್ತಿವೆ.ಕೂಪರ್ಟೀನೋದ ಒಂದು ದೊಡ್ಡ ಟೆಕ್ ಸಂಸ್ಥೆ ಗೂಗಲ್ ನ್ನು ಕೇವಲ 6 ಶೇಕಡಾ ಆಂಡ್ರಾಯ್ಡ್ ಬಳಕೆದಾರರನ್ನು ಹೊಸ OS ವರ್ಷನ್ ನಿಂದ ಮ್ಯಾನೇಜ್ ಮಾಡುತ್ತಿರುವುದಕ್ಕೆ ಅಪಹಾಸ್ಯ ಕೂಡ ಮಾಡಿತ್ತು.

ಆಪಲ್ ನ iOS 12 ಬಿಡುಗಡೆಗೆ ಸಜ್ಜಾಗುತ್ತಿದೆ


ಒಂದಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ನೂತನವಾದ iOS 12 screen insights ವೈಶಿಷ್ಟ್ಯದೊಂದಿಗೆ ಬಳಕೆದಾರರ ಕೈ ಸೇರಲಿವೆ. ಇದು ಪ್ರತಿದಿನ ಬಳಕೆದಾರ ಎಷ್ಟು ಹೊತ್ತು ಡಿವೈಸ್ ನ್ನು ಬಳಸಿದ್ದಾನೆ ಮತ್ತು ಯಾವ ಆಪ್ ಗಳನ್ನು ಅತೀಹೆಚ್ಚು ಬಳಸಿದ್ದಾನೆ ಎಂಬುದನ್ನು ತಿಳಿಸುತ್ತೆ. ಆ ಮೂಲಕ ಬಳಕೆದಾರ ತನ್ನ ಜೀವನ ಮತ್ತು ಫೋನ್ ಎರಡನ್ನೂ ಬ್ಯಾಲೆನ್ಸ್ ಮಾಡಲು ಇದು ನೆರವಾಗಲಿದೆ.

ಇನ್ನೊಂದು ಬಹುಮುಖ್ಯ ವೈಶಿಷ್ಟ iOS 12 ನಲ್ಲಿ ಇರುವುದೆಂದರೆ ಅದು ಫೇಸ್ ಟೈಮ್. ಇದರಲ್ಲಿ ನೀವು 32 ಜನರ ಗ್ರೂಪ್ ಫೇಸ್ ಟೈಮ್ ನ್ನು ಅಡ್ಜೆಸ್ಟ್ ಮಾಡಬಹುದು. ಫೇಸ್ ಟೈಮ್ ನಿಮಗೆ ಅನಿಮೋಜೀಸ್ ಮತ್ತು ಮೆಮೋಜಿಗಳನ್ನು ಒಳಗೊಂಡಿರುತ್ತೆ. ಅಷ್ಟೇ ಅಲ್ಲ ನೀವೊಂದು ನಿಮ್ಮದೇ ಆಪ್ ಲಿಮಿಟ್ ನ್ನು ಕೂಡ ಸೆಟ್ ಮಾಡಿ ಐಫೋನ್ ಬಳಕೆಗೆ ಕಡಿವಾಣ ಹಾಕಿಕೊಳ್ಳಬಹುದು.

ಅಷ್ಟೇ ಅಲ್ಲ ಹೊಸ iOS 12 ನಲ್ಲಿ ಬಳಕೆದಾರರಿಗೆ ಆಪ್ ಮತ್ತು ಟಾಪಿಕ್ ಗಳ ಆಧಾರದಲ್ಲಿ ನೋಟಿಫಿಕೇಷನ್ ಗಳನ್ನು ಗ್ರೂಪ್ ಮಾಡಬಹುದು. ಹೊಸದಾಗಿ 'Do not Disturb’ ಮೋಡ್ ವೈಶಿಷ್ಟ್ಯವು ನಿಮಗೆ ಇಷ್ಟವಿಲ್ಲದ ಸಂದರ್ಬದಲ್ಲಿ ಯಾವುದೇ ನೋಟಿಫಿಕೇಷನ್ ಗಳನ್ನೂ ಕೊಡುವುದಿಲ್ಲ.

iOS 12 ನಲ್ಲಿರುವ CarPlay ಯು ಮೂರನೇ ವ್ಯಕ್ತಿಯ ಆಪ್ ಗಳನ್ನೂ ಬೆಂಬಲಿಸುತ್ತೆ. ಹಾಗಾಗಿ ಗೂಗಲ್ ಮ್ಯಾಪ್ ಗಳನ್ನು ನೀವು ಪಡೆಯಬಹುದು. ಅಷ್ಟೇ ಅಲ್ಲ ಆಪಲ್ iOS 12 ಮುಖಾಂತರ ಐಪ್ಯಾಡ್ ನಲ್ಲಿ ವಾಯ್ಸ್ ಮೆಮೋ ವನ್ನು ಕೂಡ ಆಪಲ್ ಪರಿಚಯಿಸುತ್ತಿದೆ.

How to use WhatsApp in Kannada - GIZBOT KANNADA

ಜೂನ್ 4 ರಿಂದ iOS 12 ನ ಡೆವಲಪರ್ ಪ್ರೀವ್ಯೂ ಆರಂಭಗೊಂಡಿದೆ ಮತ್ತು ಆಪಲ್ ಡೆವಲಪರ್ ಪ್ರೊಗ್ರಾಮ್ ಸದಸ್ಯರು ಈಗಾಗಲೇ ಕಾರ್ಯನಿರತವಾಗಿದ್ದಾರೆ. ಈ ತಿಂಗಳ ಕೊನೆಯೊಳಗೆ iOS 12 ಪಬ್ಲಿಕ್ ಬೆಟಾ ಕಾರ್ಯಕ್ರಮವನ್ನೂ ಆರಂಭಿಸಲಿದ್ದು, iOS ಬಳಕೆದಾರರಿಗೆ ಇದು ಲಭ್ಯವಾಗಲಿದೆ.

ಸರ್ಕಾರದ ಸಚಿವರು ಇನ್ನು ಮುಂದೆ BHIM ಆಪ್ ಬಳಸಬೇಕು.. ಮೋದಿ ಖಡಕ್ ಸೂಚನೆಸರ್ಕಾರದ ಸಚಿವರು ಇನ್ನು ಮುಂದೆ BHIM ಆಪ್ ಬಳಸಬೇಕು.. ಮೋದಿ ಖಡಕ್ ಸೂಚನೆ

ಸಾಮಾನ್ಯ ಜನರಿಗೆ Apple iOS 12 ಉಚಿತ ಸಾಫ್ಟವೇರ್ ಆಗಿ ಲಭ್ಯವಾಗಲಿದ್ದು, ಎಲ್ಲಾ ಐಫೋನ್ ಬಳಕೆದಾರರು ಅಪ್ ಡೇಟ್ ಮಾಡಿಕೊಂಡರಾಯ್ತು. ಐಫೋನ್ 5s ಮತ್ತು ಮುಂದಿನವರಿಗೆ ಇದು ಲಭ್ಯವಾಗಲಿದೆ. ಐಪ್ಯಾಡ್ ಗಳ ವಿಚಾರಕ್ಕೆ ಬರುವುದಾದರೆ ಐಪ್ಯಾಡ್ ಏರ್, ಐಪ್ಯಾಡ್ ಪ್ರೋ ಮಾಡೆಲ್, ಐಪ್ಯಾಡ್ 5th ಜನರೇಷನ್, ಐಪ್ಯಾಡ್ 6th ಜನರೇಷನ್, ಐಪ್ಯಾಡ್ ಮಿನಿ 2 ಮತ್ತು ಮುಂದಿನದ್ದು ಮತ್ತು ಐಪಾಡ್ ಟಚ್ 6th ಜನರೇಷನ್ ಗಳು iOS ಗೆ ಅಪ್ ಡೇಟ್ ಆಗಲಿವೆ.

Best Mobiles in India

Read more about:
English summary
Top iOS 12 features announced by Apple at WWDC

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X