ವಿಶ್ವ ಮಾರುಕಟ್ಟೆಯಲ್ಲಿ ಟಾಪ್ ಸೇಲ್ ಆದ ಸ್ಮಾರ್ಟ್‌ಫೋನ್‌ಗಳು ಯಾವುವು..!
ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, ಈ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳ ಪಟ್ಟಿ ರಿಲೀಸ್ ಆಗಿದ್ದು, ಎಂದಿನಂತೆ ಆಪಲ್ ಸ್ಮಾರ್ಟ್‌ಫೋನ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ ಶಿಯೋಮಿಯೂ ಟಾಪ್ 10ನಲ್ಲಿ ಕಾಣಿಸಿಕೊಂಡಿದೆ.
ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಹೊಸ ಹೊಸ ಫೋನ್‌ಗಳು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಟಾಪ್ ಫೋನ್‌ಗಳ ಬಗ್ಗೆ ಮಾಹಿತಿಯೂ ಈ ಮುಂದಿನಂತೆ ಇದೆ.

ಆಪಲ್ ಐಫೋನ್ X:
ಆಪಲ್ ಐಫೋನ್ X ಮಾರುಕಟ್ಟೆಯ ದುಬಾರಿ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದರೂ ಸಹ ಮಾರುಕಟ್ಟೆಯಲ್ಲಿ ಶೇ 3.5 ಪಾಲನ್ನು ಪಡೆದಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಶೀಘ್ರವೇ ಈ ಐಫೋನ್ ಮಾರುಕಟ್ಟೆಯಿಂದ ಹಿಂದೆ ಸೆರೆಯಲಿದೆ.

ಆಪಲ್ ಐಫೋನ್ 8 ಪ್ಲಸ್
ಆಪಲ್ ಐಫೋನ್ X ನೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಆಪಲ್ ಐಫೋನ್ 8 ಪ್ಲಸ್ ಸಹ ಹೆಚ್ಚು ಮಾಡಲಿಲ್ಲ ಎಂದರು ಸಹ ಬಳಕೆದಾರರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಶೇ.2.3 ಪಾಲನ್ನು ಪಡೆಯುವುದರ ಮೂಲಕ ಎರಡನೇ ಸ್ಥಾನದಲ್ಲಿದೆ.

ಶಿಯೋಮಿ ರೆಡ್ ಮಿ 5A:
ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ ರೆಡ್ ಮಿ 5A, ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದ್ದು, ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಮೂಲಕ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಒಪ್ಪೊ A83
ವಿಶ್ವ ಮಾರುಕಟ್ಟೆಯಲ್ಲಿ ಒಪ್ಪೊ A83 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರನ್ನು ತಲುಪುವಲ್ಲಿ ಈ ಫೋನ್ ಯಶಸ್ವಿಯಾಗಿದೆ.

ಸ್ಯಾಮ್ ಸಂಗ್ ಗೆಲಾಕ್ಸಿ S9
ಸ್ಯಾಮ್ ಸಂಗ್ ಗೆಲಾಕ್ಸಿ S9 ಶೇ. 1.6 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸ್ಯಾಮ್‌ಸಂಗನ ಮೊದಲ ಸ್ಮಾರ್ಟ್‌ಫೋನ್ ಎನ್ನಲಾಗಿದೆ.


Click it and Unblock the Notifications



