ಮಾರ್ಚ್ 2026ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು!
2026ರ ಹೊಸ ವರ್ಷದ ಆರಂಭದಿಂದಲೇ ಭಾರತ ಸೇರಿದಂತೆ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆ ಚುರುಕುಗೊಂಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅನೇಕ ಪ್ರಮುಖ ಬ್ರಾಂಡ್‌ಗಳು ತಮ್ಮ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಈ ಮಾರ್ಚ್ ತಿಂಗಳಲ್ಲಿಯೂ ಇದೇ ವೇಗ ಮುಂದುವರಿಯುತ್ತಿದೆ. ಮುಂದಿನ ವಾರ ನಡೆಯಲಿರುವ (MWC 2026) ಕಾರ್ಯಕ್ರಮವು ಜಾಗತಿಕ ಮೊಬೈಲ್ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಚೈತನ್ಯ ತುಂಬಲಿದ್ದರೆ, ಭಾರತವೂ ಸಹ ಹಲವಾರು ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಸಾಕ್ಷಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಪಟ್ಟಿಯನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.
Nothing Phone 4a ಸರಣಿ: ಮಿಡ್‌ರೇಂಜ್ ವಿಭಾಗದಲ್ಲಿ ಹೊಸ ಸ್ಪರ್ಧಿ
ಮಾರ್ಚ್ 5ರಂದು ಭಾರತೀಯ ಮಾರುಕಟ್ಟೆಯಲ್ಲಿ Nothing Phone 4a ಸರಣಿ ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ Nothing Phone 4a ಮತ್ತು Phone 4a Pro ಮಾದರಿಗಳು ಇರಲಿವೆ. ಇ ಎರಡೂ ಫೋನ್‌ಗಳು ಸಮಾನ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಕ್ಯಾಮೆರಾ ವಿಭಾಗದಲ್ಲಿ ಸಣ್ಣ ವ್ಯತ್ಯಾಸ ಇರಬಹುದು. ಬೆಲೆ ರೂ. 35,000 ಒಳಗೆ ಆರಂಭವಾಗುವ ಸಾಧ್ಯತೆ ಇದೆ. ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮತ್ತು ಪ್ರದರ್ಶನದ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ.
Samsung Galaxy A37 & A57: ಪ್ರೀಮಿಯಂ ಮಿಡ್‌ರೇಂಜ್ ಆಯ್ಕೆಗಳು
Samsung Galaxy A37 ಮತ್ತು Samsung Galaxy A57 ಮಾದರಿಗಳು ಮಾರ್ಚ್ ಅಂತ್ಯದ ವೇಳೆಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಇವು ಪ್ರೀಮಿಯಂ ಮಿಡ್‌ರೇಂಜ್ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಉತ್ತಮ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೀಡುವ ಸಾಧ್ಯತೆ ಇದೆ. Galaxy S26 ಸರಣಿಯ ನಂತರ ಗ್ರಾಹಕರ ಗಮನ ಸೆಳೆಯುವ ಪ್ರಮುಖ ಮಾದರಿಗಳಾಗಿವೆ.
Motorola Edge 70 Fusion ಮತ್ತು Razr Fold: ಹೊಸ ಪ್ರಯೋಗಗಳು
Motorola Edge 70 Fusion ಭಾರತದಲ್ಲಿ ಮಾರ್ಚ್ 6ರಂದು ಬಿಡುಗಡೆಯಾಗುತ್ತಿದೆ. ಇದು ರೂ. 25,000 ಒಳಗಿನ ಬೆಲೆಯಲ್ಲೇ ಉತ್ತಮ ಸ್ಪೆಕ್ಸ್ ನೀಡುವ ನಿರೀಕ್ಷೆ ಇದೆ. ಇದೇ ವೇಳೆ Motorola Razr Fold MWC 2026ರಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. 120Hz OLED ಡಿಸ್ಪ್ಲೇ, ದೊಡ್ಡ ಒಳಗಿನ ಪರದೆ ಮತ್ತು 50MP ಟ್ರಿಪಲ್ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆಗಳು. ಫೋಲ್ಡೇಬಲ್ ವಿಭಾಗದಲ್ಲಿ ಇದು ಹೊಸ ಸ್ಪರ್ಧೆಯನ್ನು ಸೃಷ್ಟಿಸಬಹುದು.

Apple iPhone 17e: ಅಗ್ಗದ iPhone ನಿರೀಕ್ಷೆ
ಮಾರ್ಚ್ 4ರಂದು Apple iPhone 17e ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದು iPhone 17 ಸರಣಿಯಲ್ಲಿನ ಅಗ್ಗದ ಮಾದರಿಯಾಗಿದ್ದು, OLED ಡಿಸ್ಪ್ಲೇ, A19 ಚಿಪ್ ಮತ್ತು 48MP ಕ್ಯಾಮೆರಾ ಹೊಂದಿರಲಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಇದರ ಬೆಲೆ ಸುಮಾರು ರೂ. 60,000 ಒಳಗೆ ಆರಂಭವಾಗಬಹುದು ಎನ್ನಲಾಗಿದೆ. ಹಾಗಾಗಿ, ಭಾರತೀಯ ಯುವ ಬಳಕೆದಾರರು Apple iPhone 17e ಆಗಮನಕ್ಕೆ ಎದುರುನೋಡುತ್ತಿದೆ.
POCO ಮತ್ತು Xiaomi: ಶಕ್ತಿಶಾಲಿ ಚೀನಾ ಬ್ರಾಂಡ್‌ಗಳ ಎಂಟ್ರಿ
POCO X8 Pro ಸರಣಿ ಶೀಘ್ರದಲ್ಲೇ ಭಾರತಕ್ಕೆ ಬರಬಹುದೆಂದು ವರದಿಗಳು ಸೂಚಿಸುತ್ತಿವೆ. ಗೇಮಿಂಗ್ ಕಾರ್ಯಕ್ಷಮತೆ ಮತ್ತು ವೇಗದ ಪ್ರೊಸೆಸರ್ ಇದರ ಪ್ರಮುಖ ಆಕರ್ಷಣೆಯಾಗಬಹುದು. ಆದರೆ, ನಿಖರ ಬಿಡುಗಡೆ ದಿನಾಂಕವು ಪ್ರಕಟವಾಗಿಲ್ಲ. ಇನ್ನೊಂದೆಡೆ Xiaomi 17 ಮತ್ತು Xiaomi 17 Ultra ಜಾಗತಿಕವಾಗಿ ಪರಿಚಯವಾಗಿದ್ದು, ಭಾರತದಲ್ಲಿಯೂ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. Snapdragon 8 Elite Gen 5 ಚಿಪ್ ಮತ್ತು ಹೊಸ HyperOS 3 ವ್ಯವಸ್ಥೆ ಇವುಗಳ ವೈಶಿಷ್ಟ್ಯಗಳು.
Infinix ಮತ್ತು iQOO: ಬಜೆಟ್ ವಿಭಾಗದಲ್ಲಿ ಬ್ಯಾಟರಿ ಶಕ್ತಿ
Infinix Note 60 Pro ಕೂಡ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು 6,500mAh ಬ್ಯಾಟರಿ, 144Hz ಡಿಸ್ಪ್ಲೇ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿರುವ ನಿರೀಕ್ಷೆ ಇದೆ. ಇನ್ನೊಂದೆಡೆ ಮತ್ತೊಂದು ಬಜೆಟ್ ಬೆಲೆಯ iQOO Z11x ಕೂಡ ರೂ. 20,000 ಒಳಗಿನ ವಿಭಾಗದಲ್ಲಿ ಬಿಡುಗಡೆಯಾಗಬಹುದು. 7200mAh ಬ್ಯಾಟರಿ ಮತ್ತು IP68/69 ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದ್ದು,ದೀರ್ಘ ಬ್ಯಾಟರಿ ಆಯುಷ್ಯ ಬೇಕಾದವರಿಗೆ ಇದು ಉತ್ತಮ ಆಯ್ಕೆಯಾಗಬಹುದು.
ಮಾರ್ಚ್ 2026: ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬದ ಸಂಭ್ರಮ
ಒಟ್ಟಾರೆಯಾಗಿ, ಮಾರ್ಚ್ 2026ರಲ್ಲಿ ವಿವಿಧ ಬೆಲೆ ವಿಭಾಗಗಳಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಉತ್ತಮ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ವೇಗದ ಪ್ರೊಸೆಸರ್ ಮತ್ತು ನವೀನ ತಂತ್ರಜ್ಞಾನಗಳು ಈ ವರ್ಷದ ಪ್ರಮುಖ ಟ್ರೆಂಡ್ ಆಗಿವೆ. ಭಾರತೀಯ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತಿದ್ದು, ತಮ್ಮ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ ಸೂಕ್ತ ಫೋನ್ ಆಯ್ಕೆಮಾಡಿಕೊಳ್ಳಲು ಇದು ಉತ್ತಮ ಸಮಯ ಎನ್ನಬಹುದು.


Click it and Unblock the Notifications








