ಕೆಲವೇ ದಿನಗಳ ಹೊಂದೆ ಸ್ಮಾರ್ಟ್‌ಫೋನ್ ಬಳಕೆದಾರರ ಪ್ರಮುಖ ಚಿಂತೆಯೇ ಬ್ಯಾಟರಿ ಬ್ಯಾಕ್‌ಅಪ್ ಆಗೊತ್ತು. ದಿನಕ್ಕೆ ಒಂದುಕ್ಕಿಂತ ಹೆಚ್ಚು ಬಾರಿ ಚಾರ್ಜ್ ಮಾಡಬೇಕಾಗುವ ಪರಿಸ್ಥಿತಿ ಸಾಮಾನ್ಯವಾಗಿತ್ತು. ವಿಶೇಷವಾಗಿ ಕೆಲಸ, ಪ್ರಯಾಣ ಮತ್ತು ಮನರಂಜನೆಗಾಗಿ ಫೋನ್ ಮೇಲೆ ಅವಲಂಬಿತವಾಗಿರುವ ಭಾರತೀಯ ಬಳಕೆದಾರರಿಗೆ ಇದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ಈಗ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದ್ದು, ಇದೀಗ ಸಿಲಿಕಾನ್-ಕಾರ್ಬನ್ ಬ್ಯಾಟರಿ ತಂತ್ರಜ್ಞಾನ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವಾಗಿ ಹೊರಹೊಮ್ಮಿದೆ.
ಹೌದು, ಸಾಂಪ್ರದಾಯಿಕ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಸಿಲಿಕಾನ್-ಕಾರ್ಬನ್ ಬ್ಯಾಟರಿಗಳು ಹೆಚ್ಚಿನ ಶಕ್ತಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಇದರಿಂದ ಫೋನ್‌ನ ದಪ್ಪ ಅಥವಾ ತೂಕ ಹೆಚ್ಚಿಸದೆ 6,500mAh, 7,000mAh ಮತ್ತು ಕೆಲವೊಮ್ಮೆ 10,000mAhಕ್ಕೂ ಹೆಚ್ಚು ಬ್ಯಾಟರಿಗಳನ್ನು ಅಳವಡಿಸಲು ಸಾಧ್ಯವಾಗಿದೆ. ಜೊತೆಗೆ, ಈ ಬ್ಯಾಟರಿಗಳು ವೇಗದ ಚಾರ್ಜಿಂಗ್‌ಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ, ಕಡಿಮೆ ಉಷ್ಣತೆಯನ್ನು ಉತ್ಪಾದಿಸುತ್ತವೆ ಮತ್ತು ದೀರ್ಘಕಾಲ ಬಳಕೆಗೆ ಹೆಚ್ಚು ಚಾರ್ಜ್ ಸೈಕಲ್ ಬೆಂಬಲ ನೀಡುತ್ತವೆ.
ಭಾರತದಲ್ಲಿ OnePlus, Realme, Motorola, iQOO ಮತ್ತು Redmi ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಸಿಲಿಕಾನ್-ಕಾರ್ಬನ್ ಬ್ಯಾಟರಿ ಹೊಂದಿರುವ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ.
OnePlus 15 OnePlus 15 ಭಾರತದಲ್ಲಿ ಲಭ್ಯವಿರುವ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದ್ದು, ಸಿಲಿಕಾನ್-ಕಾರ್ಬನ್ ಬ್ಯಾಟರಿಯ ಪ್ರಮುಖ ಉದಾಹರಣೆಗಳಲ್ಲಿ ಒಂದಾಗಿದೆ. ಈ ಫೋನ್‌ನಲ್ಲಿ 7,300mAh ದೊಡ್ಡ ಬ್ಯಾಟರಿ ನೀಡಲಾಗಿದ್ದು, 120W ವೈರ್‌ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ದೀರ್ಘಕಾಲ ಚಾರ್ಜ್ ಬಗ್ಗೆ ಚಿಂತಿಸದೇ ಫೋನ್ ಬಳಸುವ ಅನುಭವವನ್ನು ಇದು ನೀಡುತ್ತದೆ.
ಡಿಸ್ಪ್ಲೇ ವಿಭಾಗದಲ್ಲಿ 6.78 ಇಂಚಿನ QHD+ AMOLED ಸ್ಕ್ರೀನ್, 165Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 1,800 ನಿಟ್ಸ್ ಬ್ರೈಟ್ನೆಸ್ ಇದೆ. Snapdragon 8 Elite Gen 5 ಪ್ರೊಸೆಸರ್, 16GB ವರೆಗೆ RAM ಮತ್ತು 512GB ಸ್ಟೋರೇಜ್ ಜೊತೆಗೆ ಇದು ಪರ್ಫಾರ್ಮೆನ್ಸ್ ಪ್ರಿಯರಿಗೆ ಸೂಕ್ತವಾಗಿದೆ. ಕ್ಯಾಮೆರಾ ವಿಷಯದಲ್ಲೂ ಇದು ಶಕ್ತಿಶಾಲಿಯಾಗಿದ್ದು, 50MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. OnePlus 15 ಬೆಲೆ ಭಾರತದಲ್ಲಿ ರೂ.72,999ರಿಂದ ಆರಂಭವಾಗುತ್ತದೆ.
Photo Credit:
ai generated image
Realme P4 Power 5G ಬ್ಯಾಟರಿ ಸಾಮರ್ಥ್ಯವೇ ಮುಖ್ಯವಾಗಿದ್ದರೆ Realme P4 Power 5G ಗಮನ ಸೆಳೆಯುತ್ತದೆ. ಇದರಲ್ಲಿ 10,001mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ನೀಡಲಾಗಿದ್ದು, ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬಳಕೆಯ ಭರವಸೆ ನೀಡುತ್ತದೆ. 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದನ್ನು ಬೇಗನೆ ಚಾರ್ಜ್ ಆಗುವ ದೊಡ್ಡ ಬ್ಯಾಟರಿ ಫೋನ್ ಆಗಿ ಮಾಡುತ್ತದೆ.
ಈ ಫೋನ್‌ನಲ್ಲಿ 6.8 ಇಂಚಿನ 1.5K ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಮತ್ತು ಅತ್ಯಧಿಕ ಬ್ರೈಟ್ನೆಸ್ ಇದೆ. MediaTek Dimensity 7400 Ultra ಪ್ರೊಸೆಸರ್, 12GB ವರೆಗೆ RAM ಮತ್ತು 256GB ಸ್ಟೋರೇಜ್ ಹೊಂದಿರುವ ಈ ಫೋನ್ ಮಧ್ಯಮ ಬೆಲೆ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ. ಇದರ ಆರಂಭಿಕ ಬೆಲೆ ರೂ.25,999.
Motorola Signature Motorola Signature ಪ್ರೀಮಿಯಂ ವಿನ್ಯಾಸ ಮತ್ತು ಬ್ಯಾಲೆನ್ಸ್ಡ್ ಪರ್ಫಾರ್ಮೆನ್ಸ್‌ಗೆ ಒತ್ತು ನೀಡುವ ಫೋನ್. ಇದರಲ್ಲಿ 5,200mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದ್ದು, 90W ವೈರ್‌ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ. ದಿನನಿತ್ಯದ ಬಳಕೆಗೂ ಮತ್ತು ಪ್ರೊಫೆಷನಲ್ ಅಗತ್ಯಗಳಿಗೂ ಇದು ಸೂಕ್ತವಾಗಿದೆ.
6.8 ಇಂಚಿನ LTPO AMOLED ಡಿಸ್ಪ್ಲೇ, Snapdragon 8 Gen 5 ಪ್ರೊಸೆಸರ್ ಮತ್ತು 1TB ವರೆಗೆ ಸ್ಟೋರೇಜ್ ಆಯ್ಕೆಗಳು ಈ ಫೋನ್‌ಗೆ ಪ್ರೀಮಿಯಂ ಸ್ಥಾನ ನೀಡುತ್ತವೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇದೆ. Motorola Signature ಬೆಲೆ ರೂ.59,999ರಿಂದ ಆರಂಭವಾಗುತ್ತದೆ.
iQOO 15 ಗೇಮಿಂಗ್ ಮತ್ತು ಹೈ ಪರ್ಫಾರ್ಮೆನ್ಸ್ ಹುಡುಕುವ ಬಳಕೆದಾರರಿಗೆ iQOO 15 ಆಕರ್ಷಕ ಆಯ್ಕೆಯಾಗಿದೆ. 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಇದರ ಪ್ರಮುಖ ಬಲ. ದೀರ್ಘ ಗೇಮಿಂಗ್ ಸೆಷನ್‌ಗಳಿಗೂ ಇದು ಸಾಕಷ್ಟು ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ.
ಈ ಫೋನ್‌ನಲ್ಲಿ 6.85 ಇಂಚಿನ 2K AMOLED ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಮತ್ತು Snapdragon 8 Elite Gen 5 ಚಿಪ್ ಇದೆ. 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 32MP ಸೆಲ್ಫಿ ಕ್ಯಾಮೆರಾ ಇದರ ಫೀಚರ್ ಪ್ಯಾಕ್ ಅನ್ನು ಪೂರ್ಣಗೊಳಿಸುತ್ತವೆ. iQOO 15 ಬೆಲೆ ರೂ.72,999ರಿಂದ ಆರಂಭವಾಗುತ್ತದೆ.
Redmi Note 14 Pro+ 5G ಮಧ್ಯಮ ಶ್ರೇಣಿಯಲ್ಲಿ ಸಿಲಿಕಾನ್-ಕಾರ್ಬನ್ ಬ್ಯಾಟರಿ ಹೊಂದಿರುವ ಉತ್ತಮ ಫೋನ್ ಬೇಕಾದವರಿಗೆ Redmi Note 14 Pro+ 5G ಸೂಕ್ತ ಆಯ್ಕೆ. ಇದರಲ್ಲಿ 6,200mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.
6.67 ಇಂಚಿನ 1.5K AMOLED ಡಿಸ್ಪ್ಲೇ, Snapdragon 7s Gen 3 ಪ್ರೊಸೆಸರ್ ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಇದರ ಪ್ರಮುಖ ಅಂಶಗಳು. ಇದರ ಬೆಲೆ ರೂ.29,999ರಿಂದ ಆರಂಭವಾಗುತ್ತದೆ, ಇದು ಬೆಲೆ-ಗುಣಮಟ್ಟದ ಸಮತೋಲನವನ್ನು ಚೆನ್ನಾಗಿ ನೀಡುತ್ತದೆ.
ಸಿಲಿಕಾನ್-ಕಾರ್ಬನ್ ಬ್ಯಾಟರಿ ತಂತ್ರಜ್ಞಾನವು ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆಯ ವಿಧಾನವನ್ನೇ ಬದಲಾಯಿಸುತ್ತಿದೆ. ಹೆಚ್ಚು ಬ್ಯಾಟರಿ ಬ್ಯಾಕ್‌ಅಪ್, ವೇಗದ ಚಾರ್ಜಿಂಗ್ ಮತ್ತು ದೀರ್ಘಕಾಲಿಕ ಕಾರ್ಯಕ್ಷಮತೆ ಇವು ಈ ತಂತ್ರಜ್ಞಾನದ ಪ್ರಮುಖ ಲಾಭಗಳು. ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈ ಬ್ಯಾಟರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದ್ದು, ಭಾರತೀಯ ಬಳಕೆದಾರರಿಗೆ ಇದು ನಿಜಕ್ಕೂ ಉಪಯುಕ್ತ ಬದಲಾವಣೆಯಾಗಿದೆ. ಏನಂತಿರಾ?
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
English summary
Silicon–carbon battery technology is transforming smartphones in India by delivering bigger battery capacity, faster charging, and longer lifespan without increasing phone thickness. Here’s a look at the top smartphones in India powered by this next-gen battery innovation.
Story first
published: Wednesday, February 11, 2026, 8:40 [IST]